Friday, April 26, 2024

ಸಿಂಧೂ, ಸಾಯಿ ಪ್ರಣೀತ್ ಕ್ವಾರ್ಟರ್ ಫೈನಲ್ ಗೆ

ಭಾರತದ ಪಿ ವಿ ಸಿಂಧೂ ಹಾಗೂ ಸಾಯಿ ಪ್ರಣೀತ್ ಕೂಡ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯಷಿಪ್ ನ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಸಿಂಧೂ ದಕ್ಷಿಣ ಕೊರಿಯಾದ ಜಿ ಹ್ಯೂನ್ ಸಂಗ್ ವಿರುದ್ಧ ೨೧-೧೦, ೨೧-೧೮ ಅಂತರದಲ್ಲಿ ಗೆದ್ದು ಮುನ್ನಡೆದರು.
ಪುರುಷರ ಸಿಂಗಲ್ಸ್ ನಲ್ಲಿ ಸಾಯಿ ಪ್ರಣೀತ್ ೨೧-೧೩, ೨೧-೧೧ ಅಂತರದಲ್ಲಿ ಡೆನ್ಮಾರ್ಕ್ ನ ಹನ್ಸ್ ಕ್ರಿಸ್ಟಿಯನ್ ವಿಟ್ಟಿಂಗಸ್ ವಿರುದ್ಧ  ಗೆದ್ದು ಅಂತಿಮ ಎಂಟರ ಹಂತ ತಲುಪಿದರು.
                                              ಇತಿಹಾಸ ಬರೆದ ಸೈನಾ
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನಲ್ಲಿ ಸತತ ಎಂಟು ಬಾರಿ ಕ್ವಾರ್ಟರ್ ಫೈನಲ್ ತಲುಪಿದ ಜಗತ್ತಿನ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಸೈನಾ ಪಾತ್ರರಾದರು.

Related Articles