Monday, April 15, 2024

ಶಾಕಿಂಗ್ ಸುದ್ದಿ : ರೈಲಿನ ಶೌಚಾಲಯದ ಪಕ್ಕವೇ ಮಲಗಿ ಪ್ರಯಾಣಿಸಿದ ಫುಟ್ಬಾಲ್ ಆಟಗಾರರು

ಕೋಲ್ಕತಾ: ದೇಶದಲ್ಲಿ ಕ್ರೀಡಾಪಟುಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಸಂಪ್ರದಾಯಕ್ಕೆ ಅಂತ್ಯವೇ ಇಲ್ಲ ಎಂಬಂತೆ ಕಾಣುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ಐಜ್ವಾಲ್ ಎಫ್ ಸಿ ಫುಟ್ಬಾಲ್ ತಂಡ.

PC: Facebook

ಗೋವಾದಲ್ಲಿ ನಡೆದ ನೈಕಿ ಪ್ರೀಮಿಯರ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಆಡಿದ ನಂತರ ಐಜ್ವಾಲ್ ಎಫ್ ಸಿ ಯ 15 ವರ್ಷದೊಳಗಿನವರ ತಂಡ ರೈಲಿನಲ್ಲಿ ವಾಪಸ್ಸಾಗುವ ವೇಳೆ, ಆಟಗಾರರು ರೈಲಿನಲ್ಲಿರುವ ಶೌಚಾಲಯದ ಪಕ್ಕದಲ್ಲೇ ಕುಳಿತು ಪ್ರಯಾಣಿಸಿದ್ದಾರೆ. ಕೆಲವರು ಅಲ್ಲೇ ನಿದ್ದೆಯನ್ನೂ ಮಾಡಿದ್ದಾರೆ.
ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಆಯೋಜಿಸಿದ್ದ ಟೂರ್ನಿಯ ಸೆಮಿಫೈನಲ್‌ನಲ್ಲಿ ಐಜ್ವಾಲ್ ಎಫ್ ಸಿ ತಂಡ ಮಿನರ್ವ ಎಫ್ ಸಿ ವಿರುದ್ಧ ಸೋಲುಂಡಿತ್ತು. ತವರಿಗೆ ಮರಳುವ ವೇಳೆ ಆಟಗಾರರಿಗೆ ರೈಲಿನಲ್ಲಿ ಕನಿಷ್ಠ ಪಕ್ಷ ಆಸನದ ವ್ಯವಸ್ಥೆಯನ್ನೂ ಮಾಡದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಆಟಗಾರರು ಶೌಚಾಲಯದ ಬಳಿ ಕುಳಿತು, ಮಲಗಿ ಪ್ರಯಾಣಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Related Articles