Thursday, December 12, 2024

ವೇಯ್ಟ್‌ಲಿಫ್ಟಿಂಗ್‌, ದೇಹದಾರ್ಢ್ಯ: ಆಳ್ವಾಸ್‌ಗೆ ಡಬಲ್ ಪ್ರಶಸ್ತಿ



ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜು ಮಿಜಾರು ಇವರ ಆಶ್ರಯದಲ್ಲಿ ವಿದ್ಯಾಗಿರಿಯಲ್ಲಿ ನಡೆದ ವಿಟಿಯು ರಾಜ್ಯ ಮಟ್ಟದ ವೇಯ್ಟ್ ಲಿಫ್ಟಿಂಗ್ ಮತ್ತು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಆಳ್ವಾಸ್ ಅವಳಿ ಪ್ರಶಸ್ತಿಯನ್ನು ಪಡೆದುಕೊಂಡಿತು. VTU state level Weightlifting, Bodybuilding Alvas double champion.

 ವೇಯ್ಟ್ ಲಿಫ್ಟಿಂಗ್ ನಲ್ಲಿ ದ್ವಿತೀಯ ಸ್ಥಾನವನ್ನು ಎನ್‌ಎಮ್‌ಎಎಮ್‌ಐಟಿ ನಿಟ್ಟೆ, ತೃತೀಯ ಸ್ಥಾನವನ್ನು ಯೆನಪೋಯ ಮೂಡುಬಿದಿರೆ ಇವರು ಪಡೆದುಕೊಂಡರು. ಬಾಲಕಿಯರ ವೇಯ್ಟ್ ಲಿಫ್ಟಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಯೆನೆಪೋಯ ಇಂಜಿನಿಯರಿAಗ್ ಮತ್ತು ತಾಂತ್ರಿಕ ಕಾಲೇಜು ಮೂಡುಬಿದಿರೆ, ದ್ವಿತೀಯ ಸ್ಥಾನವನ್ನು ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಬೆಂಗಳೂರು, ತೃತೀಯ ಸ್ಥಾನವನ್ನು ಎನ್‌ಐಇ ಮೈಸೂರು ಪ್ರಶಸ್ತಿಯನ್ನು ಪಡೆಯಿತು. ದೇಹದಾಢ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಕೆಎಲ್‌ಎಸ್ ಗೋಗಟೆ ತಾಂತ್ರಿಕ ಕಾಲೇಜು ಬೆಳಗಾವಿ, ತೃತೀಯ ಸ್ಥಾನವನ್ನು ಜಿಎಮ್ ತಾಂತ್ರಿಕ ಕಾಲೇಜು, ದಾವಣಗೆರೆ ಪಡೆದುಕೊಂಡಿತು.
ಬೆಸ್ಟ್ ಲಿಫ್ಟರ್ ಬಾಲಕರ ವಿಭಾಗದಲ್ಲಿ ಆಕಾಶ್ ಎಜೆಇಐಟಿ ಮಂಗಳೂರು, ಬೆಸ್ಟ್ ಲಿಫ್ಟರ್ ಬಾಲಕಿಯರ ವಿಭಾಗದಲ್ಲಿ ರಿಕ್ತಕಿರಣ್ ಶ್ರೀನಿವಾಸ ಕಾಲೇಜು ಮಂಗಳೂರು. ಮಿಸ್ಟರ್ ವಿಟಿಯು ಆಳ್ವಾಸಿನ ಭರತ್ ಪ್ರಶಸ್ತಿಯನ್ನು ಪಡೆದರು.
ಬಹುಮಾನ ವಿತರಣಾ ಸಮಾರಂಭದಲ್ಲಿ ಆಳ್ವಾಸ್ ಇಂಜಿನಿಯರಿAಗ್ ಮತ್ತು ತಾಂತ್ರಿಕ ಕಾಲೇಜು ಮಿಜಾರಿನ ಪ್ರಾಂಶುಪಾಲರಾದ ಡಾ. ಪೀಟರ್ ಫೆರ್ನಾಂಡಿಸ್, ವಿಟಿಯು ವೀಕ್ಷಕರಾಗಿ ನಿಟ್ಟೆ ಕಾಲೇಜಿನ ಶ್ಯಾಮ್ ಸುಂದರ್ ಉಪಸ್ಥಿತರಿದ್ದರು.

Related Articles