Sunday, May 26, 2024

ವಿರಾಟ್ ಭುಜದ ಮೇಲೆ ‘ದೇವರ ಕಣ್ಣು’!… ಏನಿದು ಕಿಂಗ್ ಕೊಹ್ಲಿಯ ಹೊಸ ಅವತಾರ?

ಬೆಂಗಳೂರು: ಟೀಮ್ ಇಂಡಿಯಾ ನಾಯಕ, ಕ್ರಿಕೆಟ್ ಜಗತ್ತಿನ ಬ್ಯಾಟಿಂಗ್ ಸೂಪರ್‌ಮ್ಯಾನ್ ವಿರಾಟ್ ಕೊಹ್ಲಿ ಅವರ ಆಟಕ್ಕೆ ಮಾರು ಹೋಗದವರೇ ಇಲ್ಲ. ವಿರಾಟ್ ಕೊಹ್ಲಿ ಅವರ ಆಟದಲ್ಲಿ ಅಂತಹ ಮಾಂತ್ರಿಕತೆ ಇದೆ. ಇದೇ ಕಾರಣದಿಂದ ವಿರಾಟ್ ಕೊಹ್ಲಿ ಅವರನ್ನು ಆಧುನಿಕ ಕ್ರಿಕೆಟ್‌ನ ಮಾಸ್ಟರ್ ಬ್ಲಾಸ್ಟರ್, ಕಿಂಗ್ ಕೊಹ್ಲಿ, ಚೇಸ್ ಮಾಸ್ಟರ್ ಎಂದೆಲ್ಲಾ ಕರೆಯಲಾಗುತ್ತದೆ.
ಕ್ರಿಕೆಟ್ ಮೈದಾನದಲ್ಲಿ ವಿರಾಟ್ ಕೊಹ್ಲಿ ಅವರದ್ದು ಮಾದರಿ ವ್ಯಕ್ತಿತ್ವ. ಕ್ರಿಕೆಟ್ ಮೈದಾನದ ಹೊರಗೂ ಕೊಹ್ಲಿ ಅವರನ್ನು ಆರಾಸುವ ಅಭಿಮಾನಿಗಳಿದ್ದಾರೆ. ಅದು ಕೊಹ್ಲಿ ಅವರ ಸ್ಟೈಲ್ ಆಗಿರಲಿ, ಅವರ ಆ್ಯಟಿಟ್ಯೂಡ್ ಆಗಿರಲಿ.. ಯೂತ್ ಐಕಾನ್ ವಿರಾಟ್ ಕೊಹ್ಲಿ ಯುವ ಜನತೆಯ ಪಾಲಿಗೆ ರೋಲ್ ಮಾಡೆಲ್.

PC: Instagram/allan_f_gois


ಅಂದ ಹಾಗೆ ವಿರಾಟ್ ಕೊಹ್ಲಿ ಟ್ಯಾಟೂ ಬಗ್ಗೆ ಅಪಾರ ಕ್ರೇಜ್ ಹೊಂದಿರುವ ವ್ಯಕ್ತಿ. ಮೈ ತುಂಬೆಲ್ಲಾ ಟ್ಯಾಟೂ ಹೊಂದಿರುವ ವಿರಾಟ್ ಕೊಹ್ಲಿ, ಒಂದೊಂದು ಅರ್ಥದಲ್ಲಿ ಒಂದೊಂದು ಟ್ಯಾಟೂವನ್ನು ಹಾಕಿಸಿಕೊಂಡಿದ್ದಾರೆ. ಇದೀಗ ಹೊಸದಾಗಿ ಕೊಹ್ಲಿ ತಮ್ಮ ಎಡ ಭುಜದ ಮೇಲೊಂದು ಟ್ಯಾಟೂವನ್ನು ಬರೆಸಿಕೊಂಡಿದ್ದಾರೆ.
ತಮ್ಮ ಎಡ ಭುಜದ ಮೇಲೆ ವಿರಾಟ್, ದೇವರ ಕಣ್ಣು ಎಂಬ ಅರ್ಥದ ಟ್ಯಾಟೂವನ್ನು ಹಾಕಿಸಿಕೊಂಡಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಏಲಿಯನ್ಸ್ ಟ್ಯಾಟೂ ಎಂಬಲ್ಲಿ ಕೊಹ್ಲಿ ಈ ಟ್ಯಾಟೂ ಬರೆಸಿಕೊಂಡಿದ್ದು, ತಮ್ಮ ದೇಹದಲ್ಲಿರುವ ಎಲ್ಲಾ ಟ್ಯಾಟೂಗಳನ್ನು ಕೊಹ್ಲಿ ಇಲ್ಲೇ ಹಾಕಿಸಿಕೊಂಡಿರುವುದು ವಿಶೇಷ. ವಿರಾಟ್ ಕೊಹ್ಲಿಗೆ ಟ್ಯಾಟೂ ಹಾಕುವ ವ್ಯಕ್ತಿಯ ಹೆಸರು ಅಲನ್ ಎ್ ಗೊಯಿಸ್. ಇದೀಗ ಕೊಹ್ಲಿ ಹೊಸ ಟ್ಯಾಟೂ ಅವತಾರವನ್ನು ಅಲನ್ ಗೊಯಿಸ್, ತಮ್ಮ ಇನ್ಸ್‌ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಕಿಂಗ್ ಕೊಹ್ಲಿಯ ಎಡಗೈನಲ್ಲಿ ಜಪಾನ್‌ನ ವೀರಾಗ್ರಣಿ ಸಮುರಾಯ್ ಸಂಕೇತದ ಟ್ಯಾಟೂ ಇದೆ. ಈ ಟ್ಯಾಟೂ ಕೊಹ್ಲಿಗೆ ವಿಶೇಷ ಶಕ್ತಿ, ಉತ್ಸಾಹ ನೀಡುತ್ತಂತೆ. ಟೀಮ್ ಇಂಡಿಯಾ ನಾಯಕನ ಟ್ಯಾಟೂ ಕ್ರೇಜ್‌ಗೆ ಮರುಳಾಗದವರು ತೀರಾ ಕಡಿಮೆ.

Related Articles