ಲೈಂಗಿಕ ಕಿರುಕುಳ, 125 ವರ್ಷ ಜೈಲು ಶಿಕ್ಷೆ

0
269

ಶಿಕಾಗೊ: ತನ್ನಲ್ಲಿ ತರಬೇತಿ ಪಡೆಯತ್ತಿದ್ದ ನೂರಾರು ಜಿಮ್ನಾಸ್ಟ್ ಗಳಿಗೆ ಲೈಂಗಿಕ ಕಿರುಕುಳ ನೀಡಿದ ಅಮೆರಿಕದ ಮಾಜಿ ಜಿಮ್ನಾಸ್ಟ್ ತಂಡದ ವೈದ್ಯ ಲ್ಯಾರಿ ನಸ್ಸಾರ್ ಗೆ ಅಲ್ಲಿನ ನ್ಯಾಯಾಲಯವು 125 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

PC: Twitter/Larry Nassar

ಕಳೆದ ಕೆಲವು ದಶಕಗಳಿಂದ ನಸ್ಸಾರ್ ಬಾಲಕಿಯರು ಮತ್ತು ಮಹಿಳೆಯರು ಸೇರಿದಂತೆ 265ಕ್ಕೂ ಹೆಚ್ಚು ಮಂದಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ವಿಚಾರಣೆ ವೇಳೆ ತಿಳಿದು ಬಂದಿದೆ. ನಸ್ಸಾರ್ ಇದನ್ನು ಒಪ್ಪಿಕೊಂಡಿದ್ದು, ಈಗಾಗಲೇ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ.
ಜಿಮ್ನಾಸ್ಟಿಕ್ ಗೆ ಅಗತ್ಯ ಇರುವ ಚಿಕಿತ್ಸೆ ನೀಡುತ್ತೇನೆ ಎಂದು ಜಿಮ್ನಾಸ್ಟ್ ಗಳನ್ನು ನಂಬಿಸಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ.
54 ವರ್ಷದ ನಸ್ಸಾರ್ ಒಲಿಂಪಕ್ಸ್ ನಲ್ಲಿ ಚಿನ್ನದ ಪದಕ ಗೆದ್ದವರೂ ಸೇರಿದಂತೆ ತನ್ನ ವ್ಯಾಪ್ತಿಯಲ್ಲಿ ಬರುವ ಹೆಚ್ಚಿನ ಜಿಮ್ನಾಸ್ಟ್ ಗಳ ಮೇಲೆ ಕಳೆದ 20 ವರ್ಷಗಳಿಂದ ಲೈಂಗಿಕ ಕಿರುಕುಳ ನೀಡಿದ್ದ.
ಒಂದು ವಾರ ಕಾಲ ನಡೆದ ವಿಚಾರಣೆಯಲ್ಲಿ 150 ಹೆಚ್ಚು ಸಂತೃಸ್ತರು ಸಾಕ್ಷ್ಯ ಹೇಳಿದ್ದಾರೆ.