Thursday, March 28, 2024

ಬಾಸ್ಕೆಟ್ ಬಾಲ್: ಬಿಎಂಎಸ್,ಆರ್ , ಆರ್ ಎನ್ ಎಸ್  ತಂಡಗಳಿಗೆ ಜಯ

ಬೆಂಗಳೂರು: ಮಲ್ಲೇಶ್ವರಂ ಕಪ್ ಗಾಗಿ ನಡೆಯುತ್ತಿರುವ ಅಂತರ್ ಕಾಲೇಜು ಬಾಸ್ಕೆಟ್ ಬಾಲ್ ಚಾಂಪಿಯನ್ ಷಿಪ್ ನ ಎರಡನೇ ದಿನದ ಪಂದ್ಯದಲ್ಲಿ ಬಿಎಂ ಎಸ್ ಹಾಗೂ ಆರ್ ಎನ್ ಎಸ್ ಐಟಿ ತಂಡಗಳು ಜಯ ಗಳಿಸಿ ಮುಂದೆ ಸಾಗಿವೆ.


ಮಲ್ಲೇಶ್ವರಂ ಕ್ಲಬ್ ಗಳಾದ ವೈಎಂ ಎಂ ಎ, ಬೀಗಲ್ಸ್, ಮತ್ತು ಭಾರತ್ ತಂಡಗಳು ಈ ಚಾಂಪಿಯನ್ ಷಿಪ್ ಆಯೋಜಿಸಿದ್ದವು.
ವಿಜೇತ ತಂಡವು ಟ್ರೋಪಿಯೊಂದಿಗೆ 1ಲಕ್ಷ ರೂ. ನಗದು ಬಹುಮಾನವನ್ನು ಪಡೆಯಲಿವೆ.
ಬಿಎಂ ಎಸ್ ಎಂಜಿನಿಯರಿಂಗ್ ಕಾಲೇಜು ತಂಡ 56-32 ಅಂತರದಲ್ಲಿ ರೇವಾ ವಿವಿ ತಂಡವನ್ನು ಮಣಿಸಿತು.
ಬಿಎಂ ಎಸ್ ಪರ ಅಜಿತ್ 22 ಅಂಕಗಳನ್ನು ಗಳಿಸಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.
ಆರ್ ಎನ್ ಎಸ್ ತಾಂತ್ರಿಕ ವಿವಿ ತಂಡ 36-25 ಅಂತರದಲ್ಲಿ ಡಾ. ಅಂಬೇಡ್ಕರ್ ತಾಂತ್ರಿಕ ವಿವಿ ತಂಡವನ್ನು ಮಣಿಸಿ ಮುನ್ನಡೆಯಿತು.
ಮೂರು ಕ್ವಾರ್ಟರ್ ಗಳಲ್ಲಿ ಆರ್ ಎನ್ ಎಸ್ ತಂಡ ಮುನ್ನಡೆ ಕಾಯ್ದು ಕೊಂಡಿತ್ತು. ನಾಲ್ಕನೆ ಕ್ವಾರ್ಟರ್ ನಲ್ಲಿ ಎಐಟಿ ಉತ್ತಮ ಹೋರಾಟ ನೀಡಿದರೂ ಕಾಲ ಮಿಂಚಿತ್ತು.

Related Articles