ರಾಷ್ಟ್ರೀಯ ರೇಸ್ ವಾಕಿಂಗ್ ಚಾಂಪಿಯನ್‌ಷಿಪ್ : ಖುಷ್ಬೀರ್, ಇರ್ಫಾನ್ ಫೇವರಿಟ್ಸ್

0
331
PC: Indian Express

ಹೊಸದಿಲ್ಲಿ: 5ನೇ ರಾಷ್ಟ್ರೀಯ ರೇಸ್ ವಾಕಿಂಗ್ ಚಾಂಪಿಯನ್‌ಷಿಪ್ ಫೆಬ್ರವರಿ 18ರಂದು ಆರಂಭವಾಗಲಿದ್ದು, ಒಲಿಂಪಿಯನ್ ಖುಷ್ಬೀರ್ ಕೌರ್ ಮತ್ತು ಇರ್ಫಾನ್ ಕೊಲೊಥುನ್ ಫೇವರಿಟ್‌ಗಳಾಗಿದ್ದಾರೆ.

PC: Indian Express

ಮುಂಬರುವ ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್‌ಗೆ ಅರ್ಹತಾ ಚಾಂಪಿಯನ್‌ಷಿಪ್ ಆಗಿರುವ ಈ ಸ್ಪರ್ಧೆಯಲ್ಲಿ 80 ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಏಪ್ರಿಲ್ 4ರಿಂದ 15ರವರೆಗೆ ನಡೆಯಲಿರುವ ಕಾಮನ್‌ವೆಲ್ಸ್ ಗೇಮ್ಸ್ ಮತ್ತು ಆಗಸ್ಟ್ 18ರಿಂದ ಸೆಪ್ಟೆಂಬರ್ 2ರವರೆಗೆ ನಡೆಯಲಿರುವ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಸ್ಪರ್ಧಿಗಳು 20 ಕಿ.ಮೀ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಪುರುಷರ ವಿಭಾಗದಲ್ಲಿ ಇರ್ಫಾನ್, ಮನೀಶ್ ರಾವತ್, ಮಹಿಳಾ ವಿಭಾಗದಲ್ಲಿ ಖುಷ್ಬೀರ್ ಕೌರ್, ರವೀನಾ, ಪ್ರಿಯಾಂಕಾ ಪ್ರ‘ಾನ ಆಕರ್ಷಣೆಯಾಗಿದ್ದಾರೆ.