ರಾಷ್ಟ್ರೀಯ ಪವರ್  ಲಿಫ್ಟಿಂಗ್: ವೀರ ಮಾರುತಿಗೆ ಸ್ವರ್ಣ ಸಂಭ್ರಮ

0
535

ಮಂಗಳೂರು: ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಕಿನ್ನಿಗೋಳಿಯ ವೀರ ಮಾರುತಿ ವ್ಯಾಯಾಮ ಶಾಲೆಯ ಸ್ಪರ್ಧಿಗಳು ಉತ್ತಮ ಸಾಧನೆ ಮಾಡಿದ್ದಾರೆ.


ಮೂಡಬಿದಿರೆ ಪೋಲಿಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ವಿಜಯ ಕಾಂಚನ್ ಸೀನಿಯರ್ ವಿಭಾಗದಲ್ಲಿ ಚಿನ್ನ ಗೆದ್ದರೆ, ಮಾಸ್ಟರ್ಸ್ ವಿಭಾಗದಲ್ಲಿ  ಮಂಜುನಾಥ್ ಚಿನ್ನದ ಪದಕದೊಂದಿಗೆ ಅಗ್ರ ಸ್ಥಾನ ಗಳಿಸಿದರು.

ವನಿತೆಯರ ವಿಭಾಗದಲ್ಲಿ ಅಕ್ಷತಾ ಪೂಜಾರಿ ಎರಡು ಚಿನ್ನದ ಪದಕಗಳನ್ನು ಗೆದ್ದು ರಾಜ್ಯಕ್ಕೆ ಕೀರ್ತಿ ತಂದರು. ಅಕ್ಷತಾ ಪೂಜಾರಿ ವೆಸ್ಟ್ ಲಿಫ್ಟರ್ ಗೌರವಕ್ಕೂ ಪಾತ್ರರಾದರು.