Tuesday, September 10, 2024

ಮಾರ್ಚ್ 21ರಿಂದ ಎಂ.ಎಸ್ ರಾಮಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿ 

ಬೆಂಗಳೂರು: ದಿವಂಗತ ಡಾ. ಎಂ.ಎಸ್ ರಾಮಯ್ಯ ಅವರ ಸ್ಮರಣಾರ್ಥ ಎಂ.ಎಸ್ ರಾಮಯ್ಯ ತಾಂತ್ರಿಕ ಕಾಲೇಜು, ಪ್ರತಿ ವರ್ಷ ಆಯೋಜಿಸುವ ರಾಜ್ಯಮಟ್ಟದ ಅಂತರ್ ತಾಂತ್ರಿಕ ಕಾಲೇಜು ಕ್ರಿಕೆಟ್ ಟೂರ್ನಿ ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆಯಲಿದೆ.
15 ದಿನಗಳ ಕಾಲ ನಡೆಯಲಿರುವ ಈ ಪ್ರತಿಷ್ಠಿತ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲು ಬಯಸುವ ಕಾಲೇಜು ತಂಡಗಳು, ತಮ್ಮ ಪ್ರವೇಶವನ್ನು ಎಂ.ಎಸ್ ರಾಮಯ್ಯ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ, ಎಂ.ಎಸ್ ರಾಮಯ್ಯ ನಗರ, ಎಂಎಸ್‌ಆರ್‌ಐಟಿ ಪೋಸ್ಟ್, ಬೆಂಗಳೂರು 560054. ಈ ವಿಳಾಸಕ್ಕೆ ಮಾರ್ಚ್ 9ರ ಒಳಗಾಗಿ ಅಂಚೆ ಮೂಲಕ ಕಳುಹಿಸಬೇಕಾಗಿ ಎಂಎಸ್‌ಆರ್‌ಐಟಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೆ
sports@msrit.eduಗೆ ಇಮೇಲ್ ಅಥವಾ 080-23603124 ಸಂಖ್ಯೆಗೆ ಫ್ಯಾಕ್ಸ್ ಮೂಲಕವೂ ಕಾಲೇಜು ತಂಡಗಳು ತಮ್ಮ ಪ್ರವೇಶಾತಿಯನ್ನು ಕಳುಹಿಸಬಹುದಾಗಿದೆ.

Related Articles