Sunday, September 8, 2024

ದವಡೆ ಮುರಿದರೂ ಶತಕ ಬಾರಿಸಿದ ಚಾಂದ್… ಅನಿಲ್ ಕುಂಬ್ಳೆ ಸಾಹಸ ನೆನಪಿಸಿದ ದಿಲ್ಲಿ ಹುಡುಗ

ಬಿಲಾಸ್‌ಪುರ್: ಕರ್ನಾಟಕದ ಸ್ಪಿನ್ ಮಾಂತ್ರಿಕ, ಜಂಬೋ ಖ್ಯಾತಿಯ ಅನಿಲ್ ಕುಂಬ್ಳೆ 2002ರಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ದವಡೆ ಮುರಿತಕ್ಕೊಳಗಾಗಿದ್ದರೂ ಮೈದಾನಕ್ಕಿಳಿದು ಬ್ರಿಯಾನ್ ಲಾರಾ ಅವರ ವಿಕೆಟ್ ಪಡೆದಿದ್ದರು. 16 ವರ್ಷಗಳ ಹಿಂದೆ ಆ್ಯಂಟಿಗುವಾದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ನೋವಿನ ನಡುವೆಯೂ ಕುಂಬ್ಳೆ ತೋರಿದ ಕೆಚ್ಚು ಕ್ರಿಕೆಟ್ ಜಗತ್ತಿನ ಮೆಚ್ಚುಗೆಗೆ ಪಾತ್ರವಾಗಿತ್ತು.

PC: Twitter/Anjum Chopra

ಇದೀಗ 2012ರ ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ, ದಿಲ್ಲಿಯ ಉನ್ಮುಕ್ತ್ ಅಂಥದ್ದೇ ಕೆಚ್ಚು ಪ್ರದರ್ಶಿಸಿ ಕುಂಬ್ಳೆ ಅವರ ಸಾಹಸವನ್ನು ನೆನನಪಿಸಿದ್ದಾರೆ. ಛತ್ತೀಸ್‌ಗಢದ ಬಿಲಾಸ್‌ಪುರ್‌ನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಪಂದ್ಯದಲ್ಲಿ ಸೋಮವಾರ ಉತ್ತರ ಪ್ರದೇಶ ವಿರುದ್ಧ ಚಾಂದ್ ಈ ಸಾಹಸ ಮೆರೆದಿದ್ದಾರೆ.
ಪಂದ್ಯಕ್ಕೂ ಮುನ್ನಾ ದಿನ ಅಂದರೆ ಭಾನುವಾರದ ನೆಟ್ ಪ್ರಾಕ್ಟೀಸ್ ವೇಳೆ ಉನ್ಮುಕ್ತ್ ಚಾಂದ್ ಅವರ ದವಡೆಗೆ ಚೆಂಡು ಅಪ್ಪಳಿಸಿ ದವಡೆ ಮುರಿದಿತ್ತು. ಆದರೂ ಬೆದರದ ಚಾಂದ್ ಸೋಮವಾರದ ಪಂದ್ಯದಲ್ಲಿ ಕಣಕ್ಕಿಳಿದು ಭರ್ಜರಿ ಶತಕ ಬಾರಿಸಿ ದಿಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ನೋವಿನ ನಡುವೆಯೂ ತಂಡಕ್ಕಾಗಿ ಆಡಿದ ಚಾಂದ್ ಅವರ ಬದ್ಧತೆಗೆ ಕ್ರಿಕೆಟ್ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Related Articles