Wednesday, November 13, 2024

ಟೆನಿಸ್ ಪ್ರಿಯರಿಗೆ ಸದ್ಯ ಸಾನಿಯಾ ಮಿರ್ಜಾ ದರ್ಶನ ಭಾಗ್ಯವಿಲ್ಲ

ಬೆಂಗಳೂರು: ಭಾರತದ ಗ್ಲಾಮರಸ್ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮೈದಾನಕ್ಕಿಳಿದರೆ ಅಭಿಮಾನಿಗಳಿಗೆ ರಸದೌತಣ. ಹೈದ್ರಾಬಾದ್‌ನ ಮೂಗುತಿ ಸುಂದರಿಯ ಆಟವೇ ಹಾಗೆ. ತಮ್ಮ ಮಿಂಚಿನ ಆಟದಿಂದ ಸಾನಿಯಾ ಟೆನಿಸ್ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
PC: Twitter/Sania Mirza
ಆದರೆ ಇತ್ತೀಚೆಗೆ ಟೆನಿಸ್ ಅಂಗಣದಲ್ಲಿ ಸಾನಿಯಾ ಮಿರ್ಜಾ ಕಾಣಿಸಿಕೊಳ್ಳುತ್ತಿಲ್ಲ. ಬಲ ಮೊಣಕಾಲಿನ ಗಾಯಕ್ಕೊಳಗಾಗಿರುವ ಸಾನಿಯಾ ಮಿರ್ಜಾ, 2017ರ ಅಕ್ಟೋಬರ್‌ನಿಂದ ಟೆನಿಸ್ ಅಂಗಣದಿಂದ ದೂರವಿದ್ದಾರೆ. ಇದೀಗ ಸಾನಿಯಾ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದರೂ, ಹೆಚ್ಚಿನ ವಿಶ್ರಾಂತಿಯ ಅಗತ್ಯವಿರುವುದರಿಂದ ತಾವು ಇನ್ನೂ ಎರಡು ತಿಂಗಳುಗಳ ಕಾಲ ಟೆನಿಸ್ ಅಂಗಣದಿಂದ ದೂರವಿರುವುದಾಗಿ ಹೇಳಿದ್ದಾರೆ.
31 ವರ್ಷದ ಸಾನಿಯಾ ಮಿರ್ಜಾ ಮಹಿಳಾ ಡಬಲ್ಸ್ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಒಟ್ಟು ಆರು ಗ್ರ್ಯಾನ್‌ಸ್ಲ್ಯಾಮ್‌ಗಳನ್ನು ಗೆದ್ದಿದ್ದಾರೆ.

Related Articles