Tuesday, September 10, 2024

ಜೈನ್ ವಿಶ್ವವಿದ್ಯಾಲಯಕ್ಕೆ ಬಾಸ್ಕೆಟ್ ಬಾಲ್ ಪ್ರಶಸ್ತಿ

ಬೆಂಗಳೂರು: ಕೊಯಮತ್ತೂರಿನ ಕುಮಾರ ಗುರು ತಾಂತ್ರಿಕ ಕಾಲೇಜು ಅಯೋಜಿತ ಅಖಿಲ ಭಾರತ ಅಂತರ್ ರಾಜ್ಯ ಬಾಸ್ಕೆಟ್ ಬಾಲ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.


ಡಾ. ಎನ್. ಮಹಾಲಿಂಗಮ್ ಟ್ರೋಫಿಗಾಗಿ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ಜೈನ್ ಕಾಲೇಜು ತಂಡ 78-63 ಅಂಕಗಳ ಅಂತರದಲ್ಲಿ ಚೆನೈನ ಸತ್ಯಭಾಮ ವಿಶ್ವವಿದ್ಯಾನಿಲಯ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು. ವಿಜೇತ ತಂಡದ ಪರ ಧರಣಿ 24 ಹಾಗೂ ಶರತ್ 18 ಅಂಕಗಳನ್ನು ಗಳಿಸಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಪ್ರಥಮಾರ್ಧದಲ್ಲಿ ಜೈನ್ ಕಾಲೇಜು 33-31 ಅಂಕಗಳಿಂದ ಮುನ್ನಡೆ ಕಂಡಿತ್ತು. ವಿಜೇತ ತಂಡಕ್ಕೆ 25,000 ರೂ. ನಗದು ಬಹುಮಾನ ನೀಡಲಾಯಿತು. ಧರಣಿ ಕುಮಾರ್ ಉತ್ತಮ ಆಟಗಾರ ಗೌರವಕ್ಕೆ ಪಾತ್ರರಾದರು.
ವಿಜೇತ ತಂಡಕ್ಕೆ ಜೈನ್ ವಿವಿಯ ಕ್ರೀಡಾ ನಿರ್ದೇಶಕ ಡಾ. ಶಂಕರ್ ಯು.ವಿ., ಪ್ರಾಂಶುಪಾಲರಾದ  ಎಸ್.ಎನ್. ನಟರಾಜ್ ಹಾಗೂ ಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕ ಸುರೇಶ್ ಸಿ. ಅಭಿನಂದನೆ ಸಲ್ಲಿಸಿದ್ದಾರೆ.

Related Articles