ಖೇಲೊ ಇಂಡಿಯಾ ಸ್ಕೂಲ್ ಗೇಮ್: ಕರ್ನಾಟಕಕ್ಕೆ 4ನೇ ಸ್ಥಾನ

0
344
PC: Twitter/Khelo India

ಹೊಸದಿಲ್ಲಿ: ಖೇಲೊ ಇಂಡಿಯಾ ಸ್ಕೂಲ್ ಗೇಮ್ಸ್‌ಗೆ ತೆರೆ ಬಿದ್ದಿದ್ದು, ಪದಕ ಪಟ್ಟಿಯಲ್ಲಿ ಹರ್ಯಾಣ ಎಲ್ಲಾ ರಾಜ್ಯಗಳನ್ನು ಹಿಂದಿಕ್ಕಿ ಅಗ್ರಸ್ಥಾನ ಗಳಿಸಿದೆ.


38 ಚಿನ್ನ, 26 ಬೆಳ್ಳಿ ಮತ್ತು 38 ಕಂಚಿನ ಪದಕಗಳನ್ನು ಗೆದ್ದಿರುವ ಹರ್ಯಾಣ, ಒಟ್ಟು 102 ಪದಕಗಳೊಂದಿಗೆ ಅಗ್ರಸ್ಥಾನ ತನ್ನದಾಗಿಸಿಕೊಂಡಿದೆ. 36 ಚಿನ್ನ, 32 ಬೆಳ್ಳಿ ಮತ್ತು 43 ಕಂಚಿನ ಪದಕಗಳ ಸಹಿತ ಒಟ್ಟು 111 ಪದಕಗಳನ್ನು ಗೆದ್ದಿರುವ ಮಹಾರಾಷ್ಟ್ರ 2ನೇ ಸ್ಥಾನದಲ್ಲಿದೆ.
ಖೇಲೊ ಇಂಡಿಯಾ ಸ್ಕೂಲ್ ಗೇಮ್ಸ್‌ಗೆ ಆತಿಥ್ಯ ವಹಿಸಿದ ದಿಲ್ಲಿ 25 ಚಿನ್ನ, 29 ಬೆಳ್ಳಿ ಹಾಗೂ 40 ಕಂಚಿನ ಪದಕಗಳ ಸಹಿತ ಒಟ್ಟು 94 ಪದಕಗಳನ್ನು ಮುಡಿಗೇರಿಸಿಕೊಂಡಿದ್ದು, 3ನೇ ಸ್ಥಾನ ತನ್ನದಾಗಿಸಿಕೊಂಡಿದೆ.
ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕರ್ನಾಟಕ 16 ಚಿನ್ನ, 11 ಬೆಳ್ಳಿ ಮತ್ತು 17 ಕಂಚಿನ ಪದಕಗಳ ಸಹಿತ 44 ಪದಕಗಳನ್ನು ಗೆದ್ದಿದ್ದು 4ನೇ ಸ್ಥಾನ ಪಡೆದಿದೆ.