Friday, October 4, 2024

ಕೆಎಸ್‌ಸಿಎ ಕ್ರಿಕೆಟ್: ಇಂಡಿಯಾ ಬುಲ್ಸ್‌ಗೆ ಭರ್ಜರಿ ಜಯ

ಬೆಂಗಳೂರು: ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅಬ್ಬರಿಸಿದ ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ತಂಡ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಯ ಆಶ್ರಯದಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ಗ್ರೂಪ್ 2, ಡಿವಿಜನ್ 2 ಟೂರ್ನಿ ಪಂದ್ಯದಲ್ಲಿ ಇಎಸ್‌ಪಿಎನ್ ಕ್ರಿಕ್‌ಇನ್ಫೊ(1) ತಂಡವನ್ನು 7 ವಿಕೆಟ್‌ಳಿಂದ ಭರ್ಜರಿಯಾಗಿ ಮಣಿಸಿದೆ.


ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಎಸ್‌ಪಿಎನ್ ಕ್ರಿಕ್‌ಇನ್ಫೊ(1) ತಂಡ, ಇಂಡಿಯಾ ಬುಲ್ಸ್‌ನ ಸಂಘಟಿತ ದಾಳಿಗೆ ತತ್ತರಿಸಿ 22 ಓವರ್‌ಗಳಲ್ಲಿ ಕೇವಲ 96 ರನ್‌ಗಳಿಗೆ ಆಲೌಟಾಯಿತು. ಇಂಡಿಯಾ ಬುಲ್ಸ್ ಪರ ಮಾರಕ ದಾಳಿ ನಡೆಸಿದ ಯತೀಶ್(37ಕ್ಕೆ3) ಮತ್ತು ಪ್ರದೀಪ್(18ಕ್ಕೆ3) ತಲಾ 3 ವಿಕೆಟ್ ಕಬಳಿಸಿ ಗಮನ ಸೆಳೆದರು.
97 ರನ್‌ಗಳ ಸುಲಭ ಗುರಿ ಬೆನ್ನತ್ತಿದ ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ತಂಡ, 11.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿ ಏಕಪಕ್ಷೀಯ ಗೆಲುವು ದಾಖಲಿಸಿತು. ಅರ್ಜುನ್ ಅಜೇಯ 32 ಮತ್ತು ಚೇತನ್ ಬಿರುಸಿನ 44 ರನ್ ಗಳಿಸಿ ತಂಡಕ್ಕೆ ಸುಲಭ ಜಯ ತಂದಿತ್ತರು.

ಸಂಕ್ಷಿಪ್ತ ಸ್ಕೋರ್
ಇಎಸ್‌ಪಿಎನ್ ಕ್ರಿಕ್‌ಇನ್ಫೊ(1): 22 ಓವರ್‌ಗಳಲ್ಲಿ 96 ರನ್‌ಗಳಿಗೆ ಆಲೌಟ್
ಲಿಖಿತ್ 39; ಯತೀಶ್ 3 / 37ಕ್ಕೆ, ಪ್ರದೀಪ್ 3 / 18
ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್: 11.4 ಓವರ್‌ಗಳಲ್ಲಿ 3 ವಿಕೆಟ್‌ಗೆ 100 ರನ್.
ಅರ್ಜುನ್ ಅಜೇಯ 32, ಚೇತನ್ 44; ರಿತೇಶ್ ಪಾಂಡೆ 2 / 36.

Related Articles