Saturday, July 27, 2024

ಕುಂಬ್ಳೆಯ 10 ವಿಕೆಟ್‌ಗೆ ಕಂಬಳಿ ಹುಳ ಬಿಟ್ಟ ದೊಡ್ಡ ಗಣೇಶ್!‌

ವಿರಾಟ್‌ ಕೊಹ್ಲಿ ಬಾಂಗ್ಲಾದೇಶದ ವಿರುದ್ಧ ಸಿಡಿಸಿದ ಶತಕ ಕ್ರಿಕೆಟ್‌ ವಲಯದಲ್ಲಿ ದೊಡ್ಡ ಹಂಗಾಮ ನಿರ್ಮಿಸಿದೆ. ಎಲ್ಲಿಯವರೆಗೆಂದರೆ 1999ರಲ್ಲಿ ಫಿರೋಜ್‌ ಜಾ ಕೋಟ್ಲಾ ಮೈದಾನದಲ್ಲಿ ಅನಿಲ್‌ ಕುಂಬ್ಳೆ 10 ವಿಕೆಟ್‌ ಗಳಿಸುವಲ್ಲಿ ಜಾವಗಲ್‌ ಶ್ರೀನಾಥ್‌ ಅವರ ಪಾತ್ರ ವಿದ್ದಿತ್ತೇ ಎಂಬ ಸಂಶಯ ಈಗ ಹುಟ್ಟಿಕೊಂಡಿದೆ. Shrinath deliberate wides to help Kumble get 10 wicket in 1999?

ಆಗ ಅಂಪೈರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದುದು ಕನ್ನಡಿಗ ಎ.ವಿ. ಜಯಪ್ರಕಾಶ್‌ ಎಂಬುದು ಗಮನಾರ್ಹ, ಕುಂಬ್ಳೆ ಹತ್ತು ವಿಕೆಟ್‌ ತೆಗೆದುಕೊಂಡು ಜಿಮ್‌ಲೆಕರ್‌ ನಂತರ ದಾಖಲೆ ಮಾಡಿದ ಎರಡನೇ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಆದರೆ ಗುರುವಾರ ಪುಣೆಯಲ್ಲಿ ನಡೆದ ಬಾಂಗಾದೇಶ ಹಾಗೂ ಭಾರತ ನಡುವಿನ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಶತಕ ಸಿಡಿಸಲು ಕೆ.ಎಲ್.‌ ರಾಹುಲ್‌ ನೆರವಾದರು ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಚರ್ಚೆಯ ವಿಷಯವಾಗಿತ್ತು. ಈ ಸಂದರ್ಭದಲ್ಲಿ ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ದೊಡ್ಡ ಗಣೇಶ್‌ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ಬೆಳವಣಿಗೆಯನ್ನು ಸಮರ್ಥಿಸಿ ಕೊಳ್ಳುತ್ತ, “ಪಂದ್ಯ ನಮ್ಮ ಕೈ ಸೇರಿರುವಾಗ ಮೈಲಿಗಲ್ಲಿಗಾಗಿ ಆಡುವುದರಲ್ಲಿ ಯಾವುದೇ ತಪ್ಪಿಲ್ಲ. ಕೊಹ್ಲಿ ಈ ಶತಕಕ್ಕೆ ಅರ್ಹರು, ಕೆಎಲ್‌ ರಾಹುಲ್‌ ಅದಕ್ಕೆ ಪೂರಕವಾದ ವಾತವರಣವನ್ನು ನಿರ್ಮಿಸಿದರು. 1999ರಲ್ಲಿ ಶ್ರೀನಾಥ್‌ ಅವರು ಅನಿಲ್‌ ಕುಂಬ್ಳೆಗೆ 10 ವಿಕೆಟ್‌ ಸಾಧನೆ ಮಾಡಲು ಉದ್ದೇಶಪೂರ್ವಕವಾಗಿ ವೈಡ್‌ ಹಾಕಿದ್ದು ನನ್ನ ನೆನಪಿಗೆ ಬರುತ್ತಿದೆ,” ಎಂದು ಹೇಳಿರುವುದು ಕ್ರಿಕೆಟ್‌ ವಲಯದಲ್ಲಿ ಸಾಖಷ್ಟು ಚರ್ಚೆಗೆ ಗ್ರಾಸವಾಗಿದೆ.

ಯಾರು ಏನೇ ಹೇಳಿದರೂ ಅನಿಲ್‌ ಕುಂಬ್ಳೆ ಅವರ 10 ವಿಕೆಟ್‌ ಸಾಧನೆ ಕ್ರಿಕೆಟ್‌ ಜಗತ್ತಿನಲ್ಲಿ ಅಜರಾಮರ.

Related Articles