ಹೊಸದಿಲ್ಲಿ: ಕೈಗಳಿಲ್ಲದೇ ಕಾಲಿನಲ್ಲೇ ಆರ್ಚರಿ ಸಾಧನೆ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದ ಜಮ್ಮು ಮತ್ತು ಕಾಶ್ಮೀರದ ಬಿಲ್ಗಾರ್ತಿ ಶೀತಲ್ ದೇವಿ ಅವರು ದೇಶದ ಪ್ರತಿಷ್ಠಿತ ಸ್ವರ್ಣ ಮತ್ತು ವಜೃದ ಬ್ರಾಂಡ್ ತಾನಿಷ್ಕ್ ಇದರ ಉತ್ಪನ್ನದ ರಾಯಭಾರಿಯಾಗಿದ್ದಾರೆ. Indian para–Archer Sheetal Devi is partnership with Mia by Tanishq
ಸಾಮಾನ್ಯವಾಗಿ ಇಂಥ ಉತ್ಪನ್ನಗಳಲ್ಲಿ ಸಿನಿಮಾ ತಾರೆಯರು ಅಥವಾ ಗ್ಲಾಮರ್ ಜಗತ್ತಿನವರನ್ನೇ ಆಯ್ಕೆ ಮಾಡಲಾಗುತ್ತದೆ. ಆದರೆ ಶೀತಲ್ ದೇವಿ ಅವರ ಸಾಧನೆ ನೋಡಿ, ಸ್ಫೂರ್ತಿಯ ಚಿಲುಮೆಯಾಗಿರುವ ಬಿಲ್ಗಾರ್ತಿಯನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಿರುವುದು ಗಮನಾರ್ಹ.