Thursday, October 10, 2024

ಬ್ಯಾಡ್ಮಿಂಟನ್‌: ಜಿಲ್ಲಾ ಮಟ್ಟಕ್ಕೆ ಶಯನ್‌, ಮೆಲ್ರಾನ್‌

Sportsmail Desk: ಎಸ್‌. ವಿ. ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ ಇವರ ಆಶ್ರಯದಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಕುಂದಾಪುರದ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ನಲ್ಲಿ COSTA BADMINTON CENTER ತರಬೇತಿ ಪಡೆಯುತ್ತಿರುವ ಶಯನ್‌ ಶೆಟ್ಟಿ ಹಾಗೂ ಮೆಲ್ರಾನ್‌ ಕೋಥಾ ಅವರು 14 ವರ್ಷ ವಯೋಮಿತಿ ವಿಭಾಗದಲ್ಲಿ ಜಯ ಗಳಿಸಿ ಉಡುಪಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. Kundapura Taluk level Badminton Tourney.

ಕುಂದಾಪುರದ ಯುವ ಪ್ರತಿಭೆಗಳಿಗೆ ನೆರವಾಗುವ ಉದ್ದೇಶವನ್ನಿರಿಸಿಕೊಂಡು ಅಜಿತ್‌ ಡಿ ಕೋಸ್ಟಾ ಅವರು ಸ್ಥಾಪಿಸಿರುವ ಈ ಅಕಾಡೆಮಿ ಈಗ ಯುವ ಆಟಗಾರರಿಗೆ ತರಬೇತಿಯ ಕೇಂದ್ರವಾಗಿದೆ. ಮುಂದಿನ ದಿನಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ತರಬೇತಿ ನೀಡುವ ಯೋಜನೆಯನ್ನು ರೂಪಿಸಲಾಗಿದೆ ಎಂದು ಅಜಿತ್‌ ಅವರು ತಿಳಿಸಿದ್ದಾರೆ.

ಫಲಿತಾಂಶದ ವಿವರ:

ಪ್ರೌಢಶಾಲಾ ಬಾಲಕರ  ವಿಜೇತರು – ಎಸ್ ವಿ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ

ಪ್ರೌಢಶಾಲಾ ಬಾಲಕರ ರನ್ನರ್ ಅಪ್ – ಕೆಪಿಎಸ್ ಕೋಟೇಶ್ವರ

ಪ್ರೌಢಶಾಲಾ ಬಾಲಕಿಯರ ವಿಜೇತರು – ಎಸ್ ವಿ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ

ಪ್ರೌಢಶಾಲಾ ಬಾಲಕಿಯರ ರನ್ನರ್ ಅಪ್ – ಸ್ಟ. ಪಾಯಸ್ ಆಂಗ್ಲ ಮಾಧ್ಯಮ ಶಾಲೆ  ಹಂಗ್ಲೂರ್

ಪ್ರಾಥಮಿಕ ಬಾಲಕರ ವಿಜೇತರು – ಸ್ಟ. ಪಾಯಸ್ ಆಂಗ್ಲ ಮಾಧ್ಯಮ ಶಾಲೆ  ಹಂಗ್ಲೂರ್

ಪ್ರಾಥಮಿಕ ಬಾಲಕಿಯರ ರನ್ನರ್ ಅಪ್ – ಎಸ್ ವಿ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ

ಪ್ರಾಥಮಿಕ ಬಾಲಕಿಯರ ವಿಜೇತರು – ತುಳಸಿ ವಿದ್ಯಾ ಮಂದಿರ ಹಳನಾಡು

ಪ್ರಾಥಮಿಕ ಬಾಲಕಿಯರ ರನ್ನರ್ಸ್ ಅಪ್ – ಎಸ್ ವಿ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ.

U14 ಪ್ರಾಥಮಿಕ ಆಯ್ಕೆ – ಬಾಲಕಿಯರ ವಿಭಾಗ ಮಾನ್ವಿತಾ ಎಸ್ ವಿ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ

U14 ಪ್ರಾಥಮಿಕ ಆಯ್ಕೆ – ಬಾಲಕರ ವಿಭಾಗ ಆರ್ಯನ್ ವಿ.ಕೆ ಎಸ್ ವಿ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ

Related Articles