Tuesday, September 10, 2024

ಐ-ಲೀಗ್: ಮೊದಲ ಬಾರಿ ಚಾಂಪಿಯನ್ ಪಟ್ಟ ಗೆದ್ದ ಮಿನರ್ವ ಪಂಜಾಬ್ ಎಫ್‌ಸಿ

ಬೆಂಗಳೂರು: ಮಿನರ್ವ ಪಂಜಾಬ್ ಎಫ್‌ಸಿ ತಂಡ, ಪ್ರಸಕ್ತ ಸಾಲಿನ ಐ-ಲೀಗ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.
ಪಂಚಕುಲದ ತಾವ್ ದೇವಿ ಲಾಲ್ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಆತಿಥೇಯ ಮಿನರ್ವ ಪಂಜಾಬ್ ಎಫ್‌ಸಿ ತಂಡ, ಚರ್ಚಿಲ್ ಬ್ರದರ್ಸ್ ತಂಡವನ್ನು 1-0 ಗೋಲಿನ ಅಂತರದಲ್ಲಿ ಮಣಿಸಿ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟಕ್ಕೇರಿತು.
ಈ ಅಮೋಘ ಸಾಧನೆಯೊಂದಿಗೆ ಮಿನರ್ವ ಎಫ್‌ಸಿ ತಂಡ, 2019ರ ಎಎಫ್‌ಸಿ ಕಪ್ ಲೀಗ್ ಕ್ವಾಲಿಫೈಯರ್ ಟೂರ್ನಿಗೆ ಮೊದಲ ಬಾರಿ ಅರ್ಹತೆ ಸಂಪಾದಿಸಿತು. ಮಿನರ್ವ ತಂಡದ ಪರ ಪಂದ್ಯದ 15ನೇ ನಿಮಿಷದಲ್ಲಿ ಸ್ಟ್ರೈಕರ್ ಅಸೀಡ್ ಒಪೋಕ್ ಗೆಲುವಿನ ಗೋಲು ಬಾರಿಸಿದರು.

Related Articles