ಏಷ್ಯನ್ ಗೇಮ್ಸ್ ಆಹ್ವಾನಿತ ಬಾಸ್ಕೆಟ್‌ಬಾಲ್: ಭಾರತ ತಂಡಕ್ಕೆ ಭರ್ಜರಿ ಗೆಲುವು

0
315
PC: Twitter/BFI

ಬೆಂಗಳೂರು: ಅಧಿಕಾರಯುತ ಪ್ರದರ್ಶನ ಹೊರ ಹಾಕಿದ ಭಾರತ ಪುರುಷರ ತಂಡ 18ನೇ ಏಷ್ಯನ್ ಗೇಮ್ಸ್ ಆಹ್ವಾನಿತ ಬಾಸ್ಕೆಟ್‌ಬಾಲ್ ಟೂರ್ನಿಯ ಕೊನೆಯ ಪ್ರಾಥಮಿಕ ಸುತ್ತಿನ ಪಂದ್ಯದಲ್ಲಿ ಟೈಮೋರ್ ಲೆಸ್ಟ್ ವಿರುದ್ಧ ಏಕಪಕ್ಷೀಯ ಗೆಲುವು ದಾಖಲಿಸಿದೆ.

PC: Twitter/BFI

ದಕ್ಷಿಣ ಜಕಾರ್ತದ ಗೆಲೊರಾ ಕರ್ನೊ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 145-50 ಅಂಕಗಳ ಅಂತರದಲ್ಲಿ ಟೈಮೋರ್ ತಂಡವನ್ನು ಬಗ್ಗು ಬಡಿಬಡಿಯಿತು.
ಭಾರತ ಪರ ರವಿ ಭಾರದ್ವಾಜ್ 18 ಪಾಯಿಂಟ್ಸ್ ಗಳಿಸಿದರೆ, ಅನಿಲ್ ಕುಮಾರ್ ಮತ್ತು ಐಸಾಕ್ ಥಾಮಸ್ ತಲಾ 16 ಅಂಕ ಗಳಿಸಿದರು. ಪರಾಜಿತ ಟೈಮೋರ್ ತಂಡದ ಪರ ಸೋರೆಸ್ ಪಿಂಟೊ ಗಿಲ್ಬೆರ್ಟೊ 22 ಅಂಕ ಕಲೆ ಹಾಕಿದರು.