Friday, October 4, 2024

ಏಕದಿನ ಸರಣಿ: ಭಾರತಕ್ಕೆ ದಕ್ಷಿಣ ಆಫ್ರಿಕಾ ತಿರುಗೇಟು, 4ನೇ ಏಕದಿನ ಪಂದ್ಯದಲ್ಲಿ ಹರಿಣಗಳಿಗೆ ವಿಕೆಟ್ ಜಯ

ಜೋಹಾನ್ಸ್‌ಬರ್ಗ್: ಹ್ಯಾಟ್ರಿಕ್ ಗೆಲುವು ದಾಖಲಿಸಿ ಸರಣಿ ಗೆಲುವಿನ ನಿರೀಕ್ಷೆಯಲ್ಲಿದ್ದ ಪ್ರವಾಸಿ ಭಾರತ ತಂಡಕ್ಕೆ 4ನೇ ಏಕದಿನ ಪಂದ್ಯದಲ್ಲಿ ಆತಿಥೇಯ
ದಕ್ಷಿಣ ಆಫ್ರಿಕಾ ತಂಡ ತಿರುಗೇಟು ನೀಡಿದೆ.

PC: twitter/BCCI

ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 5 ವಿಕೆಟ್‌ಗಳಿಂದ
ಪಂದ್ಯ ಗೆದ್ದುಕೊಂಡಿತು. ಈ ಮೂಲಕ 6 ಪಂದ್ಯಗಳ ಏಕದಿನ ಸರಣಿಯಲ್ಲಿ ಹಿನ್ನಡೆಯನ್ನು 1-3ಕ್ಕೆ ತಗ್ಗಿಸಿಕೊಂಡಿತು. ಮೊದಲ ಮೂರೂ ಪಂದ್ಯಗಳಲ್ಲಿ
ವಿರಾಟ್ ಕೊಹ್ಲಿ ಬಳಗ ಭರ್ಜರಿ ಗೆಲುವು ದಾಖಲಿಸಿತ್ತು.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ, ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 289 ರನ್‌ಗಳ ಉತ್ತಮ ಮೊತ್ತ ಕಲೆ
ಹಾಕಿತು. ತಮ್ಮ 100ನೇ ಏಕದಿನ ಪಂದ್ಯದಲ್ಲಿ ಶತಕ ಸಾಧನೆ ಮಾಡಿದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ 109 ರನ್ ಗಳಿಸಿದರೆ, ನಾಯಕ
ವಿರಾಟ್ ಕೊಹ್ಲಿ 75 ರನ್ ಬಾರಿಸಿದರು.
ಬಳಿಕ ಸವಾಲಿನ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡದ ನೆರವಿಗೆ ಮಳೆ ಧಾವಿಸಿದ್ದರಿಂದ ಭಾರತ ಗೆಲುವಿನಿಂದ ವಂಚಿತವಾಯಿತು. ಮಳೆಯ
ಕಾರಣ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ದಕ್ಷಿಣ ಆಫ್ರಿಕಾ ಗೆಲುವಿಗೆ 28 ಓವರ್‌ಗಳಲ್ಲಿ 202 ರನ್‌ಗಳ ಪರಿಷ್ಕೃತ ಗುರಿ ನಿಗದಿ
ಪಡಿಸಲಾಯಿತು. ಈ ಗುರಿಯನ್ನು 25.3 ಓವರ್‌ಗಳಲ್ಲಿ 5 ವಿಕೆಟ್‌ಗೆ 207 ರನ್ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು.

ಸಂಕ್ಷಿಪ್ತ ಸ್ಕೋರ್
ಭಾರತ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 289 ರನ್
ಶಿಖರ್ ಧವನ್ 109, ವಿರಾಟ್ ಕೊಹ್ಲಿ 75, ಎಂ.ಎಸ್ ಧೋನಿ ಅಜೇಯ 42; ಕಗಿಸೊ ರಬಾಡ 58ಕ್ಕೆ2, ಲುಂಗಿ ಎನ್‌ಗಿಡಿ 52ಕ್ಕೆ2.

ದಕ್ಷಿಣ ಆಫ್ರಿಕಾ: 25.3 ಓವರ್‌ಗಳಲ್ಲಿ 5 ವಿಕೆಟ್‌ಗೆ 207 ರನ್
ಡೇವಿಡ್ ಮಿಲ್ಲರ್ 39, ಹೆನ್ರಿಕ್ ಕ್ಲಾಸೆನ್ ಅಜೇಯ 43, ಆ್ಯಂಡಿಲ್ ಫೆಲುಕ್ವಾಯೊ ಅಜೇಯ 23; ಕುಲ್‌ದೀಪ್ ಯಾದವ್ 51ಕ್ಕೆ2, ಜಸ್‌ಪ್ರೀತ್ ಬುಮ್ರಾ 21ಕ್ಕೆ1, ಹಾರ್ದಿಕ್ ಪಾಂಡ್ಯ 37ಕ್ಕೆ1.

Related Articles