Tuesday, September 10, 2024

ಇಂಗ್ಲೆಂಡ್ ಪ್ರವಾಸಕ್ಕೆ ಇಶಾಂತ್ ಶರ್ಮಾ ಸಿದ್ಧತೆ ಹೇಗಿದೆ ಗೊತ್ತಾ?

ಬೆಂಗಳೂರು: ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ದಿಲ್ಲಿ ಎಕ್ಸ್‌ಪ್ರೆಸ್ ಇಶಾಂತ್ ಶರ್ಮಾ ಭರ್ಜರಿ ಸಿದ್ಧತೆಗೆ ಮುಂದಾಗಿದ್ದಾರೆ. ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್ ತಂಡವಾದ ಸಸ್ಸೆಕ್ಸ್ ಪರ ಆಡಲು ಇಶಾಂತ್ ಒಪ್ಪಂದ ಮಾಡಿಕೊಂಡಿದ್ದಾರೆ.
PC: Twitter/Ishant Sharma
ಇಂಗ್ಲೆಂಡ್ ಕೌಂಟಿ ಋತುವಿನ ಮೊದಲ ಎರಡು ತಿಂಗಳುಗಳ ಕಾಲ ಇಶಾಂತ್ ಶರ್ಮಾ, ಸಸ್ಸೆಕ್ಸ್ ತಂಡದ ಪರ ಆಡಲಿದ್ದಾರೆ.
ಜೂನ್ 4ರಂದ ಸಸ್ಸೆಕ್ಸ್ ತಂಡ ಸೇರಿಕೊಳ್ಳಲಿರುವ ಇಶಾಂತ್, ರಾಯಲ್ ಲಂಡನ್ ಕಪ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.
ಸಸ್ಸೆಕ್ಸ್ ಜೊತೆಗಿನ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿರುವ ಇಶಾಂತ್, ‘ಸಸ್ಸೆಕ್ಸ್ ಕೌಂಟಿ ಕ್ರಿಕೆಟ್ ಕ್ಲಬ್ ತಂಡವನ್ನು ಪ್ರತಿಧಿಸುವಂತಾಗಿರುವುದು ನನ್ನ ಪಾಲಿಗೆ ಸಂದ ದೊಡ್ಡ ಗೌರವ. ಇದು ಅತ್ಯಂತ ಹಳೆಯ ಕೌಂಟಿ ಕ್ಲಬ್. ನನ್ನ ಚೊಚ್ಚಲ ಕೌಂಟಿ ಕ್ರಿಕೆಟ್ ಅಭಿಯಾನವನ್ನು ಎದುರು ನೋಡುತ್ತಿದ್ದೇನೆ,‘ ಎಂದಿದ್ದಾರೆ.

Related Articles