Thursday, September 21, 2023

ಅಮೆರಿಕದ ಈಜುತಾರೆಗೆ ತರಬೇತುದಾರನಿಂದ ಲೈಂಗಿಕ ಕಿರುಕುಳ

ಬೆಂಗಳೂರು: ಕ್ರೀಡಾ ಜಗತ್ತಿನಲ್ಲಿ ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಹೊಸತೇನಲ್ಲ. ಮಹಿಳಾ ಕ್ರೀಡಾ ಪಟುಗಳಿಗೆ ಕೋಚ್‌ಗಳಿಂದ, ಕ್ರೀಡಾ ಅಧಿಕಾರಿಗಳಿಂದ ಇಂತಹ ಕಿರುಕುಳದ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದಕ್ಕೆ ಹೊಸ ಸೇರ್ಪಡೆ ಅಮೆರಿಕದ ಮಾಜಿ ಒಲಿಂಪಿಕ್ ಈಜುತಾರೆ ಅರಿಯಾನಾ ಕುಕೋರ್ಸ್.

PC: Twiiter/Ariana Kukors

2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಅರಿಯಾನಾ, ತಾವು 16 ವರ್ಷದವರಿದ್ದಾಗ ಕೋಚ್ ಒಬ್ಬನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾಗಿ ಹೇಳಿದ್ದಾರೆ. ಅಮೆರಿಕ ರಾಷ್ಟ್ರೀಯ ಈಜು ತಂಡದ ಕೋಚ್ ಶಾನ್ ಹಚಿಸನ್ ವಿರುದ್ಧ 28 ವರ್ಷದ ಅರಿಯಾನಾ ಕುಕೋರ್ಸ್ ಈ ಆರೋಪ ಮಾಡ್ದಿದಾರೆ.
ತಾವು 13ರ ಹರೆಯದ ಬಾಲಕಿಯಾಗಿದ್ದಾಗಲೇ ಶಾನ್ ತಮ್ಮನ್ನು ಲೈಂಗಿಕ ಸಂಬಂಧಕ್ಕೆ ಸಜ್ಜುಗೊಳಿಸುವ ಪ್ರಯತ್ನದಲ್ಲಿ ನಿರತನಾಗಿದ್ದ ಎಂಬ ಆಘಾತಕಾರಿ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ.
46 ವರ್ಷದ ಶಾನ್ ಹಚಿಸನ್ ವಾಷಿಂಗ್ಟನ್ ಸ್ಟೇಟ್‌ನಲ್ಲಿ ಕಿಂಗ್ ಅಕ್ವೆಟಿಕ್ ಕ್ಲಬ್ ಎಂಬ ಈಜು ಕೇಂದ್ರವನ್ನು ಹೊಂದಿದ್ದಾರೆ. ಅಲ್ಲಿ ಕಿರಿಯ ಈಜುಪಟುಗಳಿಗೆ ತರಬೇತಿ ನೀಡುತ್ತಾರೆ.

Related Articles