Friday, December 13, 2024

ಕನ್ನಡ ನಾಡಿಗೆ ಮತ್ತೊಂದು ಫುಟ್ಬಾಲ್ ಕ್ಲಬ್, ಬೆಂಗಳೂರು ಡ್ರೀಮ್ ಯುನೈಟೆಡ್

ಸ್ಪೋರ್ಟ್ಸ್ ಮೇಲ್ ವರದಿ

ಮಂಗಳೂರಿನ ಊರ್ವಾ ಸ್ಟೋರ್ ಮೂಲದ ನಿವಾಸಿ ಶರತ್ ಕಾಮತ್ ಎಲ್ಲವೂ ನಿರೀಕ್ಷಿಸಿದಂತೆ ಆಗಿರುತ್ತಿದ್ದರೆ, ಇಂದು ಭಾರತ ತಂಡದ ಉತ್ತಮ ಆಟಗಾರರಾಗಿ ತಂಡಲ್ಲಿರುತ್ತಿದ್ದರು. ಆದರೆ ಅದೃಷ್ಟ ಬೇರೆಯೆ ಆಗಿತ್ತು. ಆಸ್ಟಿಟಿಸ್ ಪ್ಯುಬಿಸ್ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಫುಟ್ಬಾಲ್‌ಗೆ ವಿದಾಯ ಹೇಳಬೇಕಾಯಿತು. ಫುಟ್ಬಾಲ್ ಆಟದಿಂದ ಹಿಂದೆ ಸರಿದರೂ ಪ್ರವೃತ್ತಿಯಿಂದ ಹಿಂದೆ ಸರಿಯದ ಶರತ್ ಇಂದು ಬೆಂಗಂಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಫುಟ್ಬಾಲ್ ಅಕಾಡೆಮಿಯೊಂದುನ್ನು ಸ್ಥಾಪಿಸಿ, ದೇಶದ ಉತ್ತಮ ಯುವ ಆಟಗಾರರಿಗೆ ತರಬೇತಿ ನೀಡಿ, ಈಗ  ಬೆಂಗಳೂರು ಡ್ರೀಮ್ ಯುನೈಟೆಡ್ ಎಂಬ ತಂಡವನ್ನು ಕಟ್ಟಿ, ಸ್ಪರ್ಧೆಗೆ ಸಜ್ಜಾಗಿದ್ದಾರೆ.

೨೯ ವರ್ಷ ವಯಸ್ಸಿನ ಶರತ್‌ಗೆ ೨೬ನೇ ವಯಸ್ಸಿನಲ್ಲಿ ಫುಟ್ಬಾಲ್ ಆಟಗಾರರಿಗೆ ಬರುವ ಸಾಮಾನ್ಯ ಸಮಸ್ಯೆ ಆಸ್ಟಿಟಿಸ್ ಪ್ಯೂಬಿಸ್ ಸಮಸ್ಯೆ ಕಂಡು ಬಂತು. ಇದರಿಂದಾಗಿ ಫುಟ್ಬಾಲ್‌ನಿಂದ ತಾನು ದೂರ ಉಳಿಯಬೇಕಾಯಿತಲ್ಲ ಎಂಬ ನೋವು ಶರತ್ ಅವರನ್ನು ಕಾಡತೊಡಗಿತು. ೨೦೦೨ರಲ್ಲಿ ಶರತ್ ುಟ್ಬಾಲ್ ಅಂಗಣಕ್ಕಿಳಿದರು. ಆದರೆ ಕಾಲೇಜು ಹಂತದಲ್ಲಿ ಅವರನ್ನು ತಿರಸ್ಕರಿಸಲಾಯಿತು. ಇದರಿಂದಾಗಿ ಕಠಿಣ ಪರಿಶ್ರಮಕ್ಕೆ ಮುಂದಾದರು. ಪರಿಣಾಮ ರಾಜ್ಯ ಪಿಯು ತಂಡದಲ್ಲಿ ಆಡುವ ಅವಕಾಶ ಸಿಕ್ಕಿತು. ನಿರಂತರ ಪರಿಶ್ರಮದ ಕಾರಣ ಶರತ್‌ಗೆ ರಾಜ್ಯದ ಲೀಗ್ ಕ್ಲಬ್‌ಗಳಲ್ಲಿ ಆಡುವ ಅವಕಾಶ ಸಹಜವಾಗಿ ಒದಗಿಬಂತು. ದಿನಕ್ಕೆ ನಾಲ್ಕೈದು  ಗಂಟೆಗಳ ಕಾಲ ಅಭ್ಯಾಸ ಮಾಡಿದ ಶರತ್‌ಗೆ ಗಾಯ ನಿರ್ವಹಣೆಯ ಬಗ್ಗೆ ಉತ್ತಮ ರೀತಿಯ ಸಲಹೆ ಸಿಕ್ಕಿರಲಿಲ್ಲ. ಇದರಿಂದಾಗಿ ಗಾಯ ತೀವೃತೆ ಕಂಡಿತು. ಆಟಗಾರರಿಗೆ ವೃತ್ತಿಪರತೆಯ ಬಗ್ಗೆಯೂ ಅರಿವು ನೀಡುವವರಿರಲಿಲ್ಲ. ಈ ನಡುವೆ ಶರತ್ ಎಂಜಿನಿಯರಿಂಗ್ ಪದವಿ ಮುಗಿಸಿದರು.
ಎರಡು ಕಂಪೆನಿಗಳಲ್ಲಿ ಉದ್ಯೋಗದ ಅವಕಾಶವೂ ಸಿಕ್ಕಿತು. ಯೊಕೊಗವಾ ಇಂಡಿಯಾ ಕಂಪೆನಿಯಲ್ಲಿ ಉದ್ಯೋಗಕ್ಕೂ ಸೇರಿಕೊಂಡರು. ಆದರೆ ಆರೇ ತಿಂಗಳಲ್ಲಿ ಉದ್ಯೋಗಕ್ಕೆ ರಾಜೀನಾಮೆ ನೀಡಿ ಡೆಂಪೋ ಸ್ಪೋರ್ಟ್ಸ್ ಕ್ಲಬ್‌ಗೆ ಸೇರಿಕೊಳ್ಳಲು ಟ್ರಯಲ್ಸ್‌ಗಾಗಿ ಸಜ್ಜಾದರು. ಆದರೆ ಟ್ರಯಲ್ಸ್ ನೀಡುವಾಗಲೇ ಜಾಂಡೀಸ್ ಕಾಯಿಲೆ ಕಾಣಿಸಿಕೊಂಡ ಕಾರಣ ಅಲ್ಲಿಯೂ ಯಶಸ್ಸು ಸಿಗಲಿಲ್ಲ. ೨೦೦೯ರ ನವೆಂಬರ್ ವರೆಗೂ ಅವರಿಗೆ ಮತ್ತೆ ಫುಟ್ಬಾಲ್ ಅಂಗಣಕ್ಕೆ ಬರಲಾಗಲಿಲ್ಲ.
ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಹಾಗೂ ಆನ್‌ಲೈನ್ ಟ್ಯೂಟರ್ ಕೆಲಸ ಆರಂಭಿಸಿದರು. ೨೦೧೨ರವರಗೂ ಈ ಕೆಲಸದಲ್ಲಿ ಮುಂದುವರಿದರು.

ಹೊಸ ಬದುಕು ಆರಂಭ

ಶರತ್ ಕೂಡಲೇ ಟಸ್ಕ್ ಸ್ಪೋರ್ಟ್ಸ್ ಮತ್ತು ಎಜುಕೇಶನ್ ಮ್ಯಾನೇಜ್‌ಮೆಂಟ್ ಕಂಪೆನಿ ಆರಂಭಿಸಿದರು. ಅಮೆರಿಕದಲ್ಲಿರುವ ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಟ್ಯೂಷನ್ ನೀಡುವುದು ಇದರ ಪ್ರಮುಖ ಉದ್ದೇಶವಾಗಿತ್ತು. ದೇಶದಲ್ಲೆಡೆ ೧೦೦ಕ್ಕೂ ಹೆಚ್ಚು ಟ್ಯೂಟರ್‌ಗಳಿಗೆ ಅವಕಾಶ ನೀಡಿದರು. ೩,೦೦೦ ವಿದ್ಯಾರ್ಥಿಗಳು ಶರತ್ ಅವರ ಕಂಪೆನಿಯ ಮೂಲಕ ಆನ್‌ಲೈನ್ ಶಿಕ್ಷಣ ಪಡೆಯಲಾರಂಭಿಸಿದರು. ನಂತರ ಫುಟ್ಬಾಲ್ ಕಡೆಗೆ ಒತ್ತು ನೀಡಲಾರಂಭಿಸಿದರು. ಅಮೆರಿಕದಲ್ಲಿ ಕುಳಿತ ವ್ಯಕ್ತಿಗೆ ಇಲ್ಲಿಯ ಪರಿಸ್ಥಿತಿ ಅರ್ಥವಾಗದೆ, ವೆಚ್ಚ ಹೆಚ್ಚಾಗಿ ಕಂಪೆನಿಯನ್ನು ಮುಚ್ಚಬೇಕಾಯಿತು.

ಮತ್ತೆ ಫುಟ್ಬಾಲ್‌ಗೆ 

ಈ ಎಲ್ಲ ಸಮಸ್ಯೆಗಳಿಂದ ಹೊರ ಬಂದ ಶರತ್ ೨೦೧೦ರಲ್ಲಿ ಮತ್ತೆ ಫುಟ್ಬಾಲ್ ಕ್ರೀಡೆಗೆ ತಮ್ಮನ್ನು ಒಗ್ಗಿಸಿಕೊಂಡರು. ಆಗ ಬೆಂಗಳೂರಿನಲ್ಲಿ ಉತ್ತಮ ಅಕಾಡೆಮಿ ಇಲ್ಲದಿರುವುದನ್ನು ಗಮನಿಸಿದ ಶರತ್, ತಮ್ಮ ಅಕಾಡೆಮಿಯನ್ನು ಫುಟ್ಬಾಲ್ ವಸತಿ ಶಾಲೆಯನ್ನಾಗಿ ಮಾಡಿದರು. ಇದೇ ಡ್ರೀಮ್ ುಟ್ಬಾಲ್ ಅಕಾಡೆಮಿ. ವೈಯಾಲಿ ಕಾವಲ್‌ನಲ್ಲಿ ಆರಂಭಗೊಂಡ ಕೋಚಿಂಗ್ ಕ್ಯಾಂಪ್ ಈಗ ಉತ್ತಮ ಅಕಾಡೆಮಿಯಾಗಿ ಬೆಳೆದು ನಿಂತಿದೆ. ಸುಮಾರು ೪೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಫುಟ್ಬಾಲ್ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

ಗೆಳೆಯನ ನೆರವು

ಫುಟ್ಬಾಲ್ ಅಕಾಡೆಮಿಗೆ ಆಟಗಾರರು, ತರಬೇತುದಾರರು ಹಾಗೂ ಮೂಲಭೂತ ಸೌಕರ್ಯಗಳಿಗಿಂತ ಅಗತ್ಯವಾಗಿ ಬೇಕಾಗಿರುವುದು ಜಾಗ. ಅದಕ್ಕಾಗಿ ಶಾಲಾ ದಿನಗಳ ಗೆಳೆಯ ಅಜಯ್ ಪಾಟಿಲ್ ಅವರನ್ನು ೧೦ ವರ್ಷಗಳ ನಂತರ ಭೇಟಿಯಾದರು. ಸಹ ಸಂಸ್ಥಾಪಕರಾಗಿ ಪಾಟಿಲ್ ಅಕಾಡೆಮಿಯನ್ನು ಸೇರಿಕೊಂಡರು. ಅವರು ಹತ್ತು ವರ್ಷಕ್ಕೆ ಭೂಮಿಯನ್ನು ಭೋಗ್ಯಕ್ಕೆ ನೀಡಿದರು. ಜತೆಯಲ್ಲಿ ಅಭಿಷೇಕ್ ಜಗನ್ ಅವರು ಶರತ್‌ಜತೆ ಕೈ ಜೋಡಿಸಿದರು. ಅಂತಾರಾಷ್ಟ್ರೀಯ ಗುಣಮಟ್ಟದ ಮೂಭೂ ತ ಸೌಕರ್ಯ, ಕೋಚಿಂಗ್, ಗಾಯದ ನಿರ್ವಹಣೆ ಇವುಗಳನ್ನು ಒಳಗೊಂಡಿರುವ ಅಕಾಡೆಮಿಯಲ್ಲಿ ಪಳಗಿದ ತಂಡವೇ ಬೆಂಗಳೂರು ಡ್ರೀಮ್ ಯುನೈಟೆಡ್ ಸೋಮವಾರ ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಕನ್ನಡಿಗರ ಈ ಸಧ ನೆಗೆ ಪ್ರೋತ್ಸಾಹ ಅಗತ್ಯವಿದೆ.

Related Articles