Saturday, February 24, 2024

ಬೆಂಗಳೂರಿನಲ್ಲಿ ಮೊಟ್ಟ ಮೊದಲ ಎಕ್ಸ್‌ ಪಲ್ಸ್ ಎಕ್ಸ್‌ ಪೀರಿಯೆನ್ಸ್ ಸೆಂಟರ್‌ಗೆ ಹೀರೋ ಮೋಟೋಕಾರ್ಪ್ ಚಾಲನೆ

ಬೆಂಗಳೂರು, ಆಗಸ್ಟ್ 30, 2022:  ಬೈಕ್‌ ಮತ್ತು ಸ್ಕೂಟರ್‌ಗಳ ವಿಶ್ವದ ಅತಿದೊಡ್ಡ ತಯಾರಕರಾದ ಹೀರೋ ಮೋಟೋಕಾರ್ಪ್ ದೇಶದಲ್ಲಿ ಆಫ್-ರೋಡ್ ರೈಡಿಂಗ್ ಸಂಸ್ಕೃತಿಯನ್ನು ಪ್ರಚಾರ ಮಾಡುವ ತನ್ನ ವೈವಿಧ್ಯಮಯ ಮತ್ತು ಸ್ಥಿರವಾದ ಉಪಕ್ರಮಗಳ ಮುಂದುವರಿದ ಭಾಗವಾಗಿ, ಭಾರತದಲ್ಲಿ ಮೊದಲ Xpulse Xperience Centre ಅನ್ನು ಇಂದು ಉದ್ಘಾಟಿಸಿದೆ.

ಕ್ಯುರೇಟೆಡ್ ಬೈಕಿಂಗ್ ಟ್ರ್ಯಾಕ್‌ಗಳು ಮತ್ತು ಇತರ ಸೌಕರ್ಯಗಳೊಂದಿಗೆ Xpulse 200 4V ಬೈಕ್‌ಗಳ ಮಾಲೀಕರು ಮತ್ತು ಉತ್ಸಾಹಿಗಳಿಗೆ ಸರಿಸಾಟಿಯಿಲ್ಲದ ಆಫ್-ರೋಡ್ ಬೈಕ್‌ ತರಬೇತಿ ಅನುಭವವನ್ನು ಒದಗಿಸಲು ಅತ್ಯಾಧುನಿಕ Xpulse Xperience Centre ಅನ್ನು ಹೀರೋ ಮೋಟೋ ಕಾರ್ಪ್ ವಿನ್ಯಾಸಗೊಳಿಸಿ, ಬೆಂಗಳೂರು ಹೊರವಲಯದ ಬಿಗ್ ರಾಕ್ ಡರ್ಟ್ ಪಾರ್ಕ್‌ನಲ್ಲಿ ಸ್ಥಾಪಿಸಿದೆ. ದೇಶದ ಇತರ ಪ್ರಮುಖ ನಗರಗಳಲ್ಲಿ ಮುಂದಿನ ಹಂತಗಳಱಲ್ಲಿ ಇನ್ನಷ್ಟು Xpulse Xperience Centres ಸ್ಥಾಪಿಸುತ್ತಿದೆ.

Xpulse Xperience Centre ಹೆಸರಾಂತ ತರಬೇತುದಾರರನ್ನು ಹೊಂದಿರುತ್ತದೆ ಮತ್ತು ಪರಿಣಿತ ಆಫ್-ರೋಡ್ ಬೈಕರ್ ಆಗಲು ಅಗತ್ಯವಿರುವ ಕೌಶಲ, ಜ್ಞಾನ ಮತ್ತು ವ್ಯಕ್ತಿತ್ವವನ್ನು ನಿರ್ಮಿಸಲು ಕೇಂದ್ರೀಕರಿಸಿದ ಸುಸಜ್ಜಿತ ಪಠ್ಯಕ್ರಮವನ್ನು ಹೊಂದಿರುತ್ತದೆ. ಬೆಂಗಳೂರಿನ ಕೇಂದ್ರದಲ್ಲಿ, ದೇಶದ ನಂ. 1 ರೇಸರ್ ಸಿ.ಎಸ್. ಸಂತೋಷ್ ಅವರಿಂದ ತರಬೇತಿ ಪಡೆಯುವ ವಿಶೇಷ ಅವಕಾಶವಿದೆ.

ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾ (FMSCI) ಸೂಚಿಸಿರುವ ಎಲ್ಲ ಸುರಕ್ಷತಾ ಮಾನದಂಡಗಳನ್ನು ಈ ಸೌಲಭ್ಯವು ಅನುಸರಿಸುತ್ತದೆ ಮತ್ತು ಮಾರ್ಗಸೂಚಿಗಳು ಗೊತ್ತುಪಡಿಸಿದ ಮಾರ್ಷಲ್‌ಗಳು ಮತ್ತು ಅಗತ್ಯ ವೈದ್ಯಕೀಯ ಸೌಕರ್ಯಗಳನ್ನು ಹೊಂದಿದೆ.

ಉದ್ಘಾಟನೆಯ ಸಂದರ್ಭದಲ್ಲಿ, ಕಂಪನಿಯು Xpulse 200 4V ರ‍್ಯಾಲಿ ಆವೃತ್ತಿಯ ಮೊದಲ 100 ವಾಹನಗಳನ್ನು ಗ್ರಾಹಕರಿಗೆ ವಿತರಿಸಲಾಯಿತು. ಈ ಬೈಕ್ ಕುರಿತಾಗಿ ಸಾಕಷ್ಟು ನಿರೀಕ್ಷೆಯಿತ್ತು. ಮೊದಲ ಬ್ಯಾಚಿನ ಆರಂಭಿಕ ಬುಕಿಂಗ್ ಆರಂಭವಾದ ನಾಲ್ಕೇ ದಿನಗಳಲ್ಲಿ  ಎಲ್ಲ ಬೈಕ್‌ಗಳು ಮಾರಾಟವಾಗಿವೆ.

ಕಂಪನಿಯು ಶೀಘ್ರದಲ್ಲೇ ಈ ಬೈಕ್‌ಗಾಗಿ ಮತ್ತೆ ಬುಕಿಂಗ್ ಆರಂಭಿಸಲಿದೆ. ರೂ. 1,52,100/- ಬೆಲೆಯಿರುವ Xpulse 200 4V ರ‍್ಯಾಲಿ ಆವೃತ್ತಿಯು ಹೀರೋ ಮೋಟೋ ಕಾರ್ಪ್ (Hero MotoCorp) ನ ಆನ್‌ಲೈನ್ ಮಾರಾಟದ ವೇದಿಕೆ – eSHOP ಮೂಲಕ ಬುಕಿಂಗ್‌ಗೆ ಲಭ್ಯವಿರುತ್ತದೆ.

ಉದ್ಘಾಟನೆಯ ಕುರಿತು ಪ್ರತಿಕ್ರಿಯಿಸಿದ ಹೀರೋ ಮೋಟೋ ಕಾರ್ಪ್ ಚೀಫ್ ಗ್ರೋಥ್ ಆಫೀಸರ್ ರಂಜೀವಿತ್ ಸಿಂಗ್,  “ಅಡ್ವೆಂಚರ್ ಬೈಕಿಂಗ್ ವಿಭಾಗದಲ್ಲಿ ಪ್ರವರ್ತಕರಾಗಿ, ಹೀರೋ ಮೋಟೋಕಾರ್ಪ್ ಸಾಹಸ-ಅಪೇಕ್ಷಿಸುವ ಬೈಕರ್‌ಗಳಿಗಾಗಿ ಆಕರ್ಷಕ ಉತ್ಪನ್ನಗಳು ಮತ್ತು ಉಪಕ್ರಮಗಳನ್ನು ಸತತವಾಗಿ ನೀಡುತ್ತಿದೆ. ಬೈಕ್ ಸವಾರಿಯ ಉತ್ಸಾಹ ಮತ್ತು ಅತ್ಯಾಸಕ್ತಿಯನ್ನು ಪೂರೈಸಲು ನಿರ್ಮಿಸಲಾದ Xpulse Xperience Center ಐಕಾನಿಕ್ ಹೀರೋ Xpulse 200ರ ಸಾರವಾದ ರೋಮಾಂಚಕ ಆಫ್-ರೋಡ್ ಅನುಭವವನ್ನು ಒಳಗೊಂಡಿದೆ. ಈ ಸೌಲಭ್ಯಗಳ ಮತ್ತು Xpulse 200 4V ನ ಮಿತಿಯಿಲ್ಲದ, ಪವರ್-ಪ್ಯಾಕ್ಡ್ ಕಾರ್ಯಕ್ಷಮತೆ ಮೂಲಕ ನಾವು ಸವಾರರಿಗೆ ಅವರ ಆಫ್-ರೋಡಿಂಗ್ ಕೌಶಲಗಳನ್ನು ಸುಧಾರಿಸಲು ಸಾಟಿಯಿಲ್ಲದ ಅವಕಾಶವನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ. ಮುಂದೆ, ದೇಶದ ಇತರ ಭಾಗಗಳಲ್ಲಿಯೂ ಇದೇ ರೀತಿಯ ಪ್ರಾಯೋಗಿಕ ಕೇಂದ್ರಗಳನ್ನು ಸ್ಥಾಪಿಸಲು ನಾವು ಯೋಜಿಸಿದ್ದೇವೆ” ಎಂದರು.

Xpulse Xperience Centre ಮೂರು ತರಬೇತಿ ಕಾರ್ಯಕ್ರಮಗಳನ್ನು ನೀಡುತ್ತದೆ – ಮೂಲ: ಎಕ್ಸ್‌ಪಲ್ಸ್ ಪ್ರಾರಂಭಿಸಿ, ಮಧ್ಯಂತರ: Xpulse ಅನುಭವಿಸಿ, ಅತ್ಯಾಧುನಿಕ: Xpulse ನಿಮ್ಮದಾಗಿಸಿಕೊಳ್ಳಿ. ಭಾಗೀದಾರರು ಆಯ್ಕೆ ಮಾಡಿದ ಪ್ರೋಗ್ರಾಂ ಅವಲಂಬಿಸಿ, ಇದು ವಿಭಿನ್ನ ಅವಧಿಗಳಲ್ಲಿ ಹರಡುತ್ತದೆ ಹಾಗೂ ಕಷ್ಟದ ಮಟ್ಟವು ಹೆಚ್ಚುತ್ತ ಸಾಗಿ, ಸವಾರಿಯ ಕೌಶಲಗಳನ್ನು ಒದಗಿಸುತ್ತದೆ.

ಆಫ್-ರೋಡ್ ವ್ಯವಸ್ಥೆ, ದೇಹದ ಭಂಗಿ, ಸ್ಲಾಲೋಮ್ ಮತ್ತು ಬ್ರೇಕಿಂಗ್, ಏರುವುದು ಮತ್ತು ಇಳಿಯುವುದು, ಬಿದ್ದ ಬೈಕನ್ನು ಮೇಲೆತ್ತುವುದು, ಬ್ಯಾಲೆನ್ಸ್ ಅಂಶಗಳು, ಗ್ಯಾರೇಜ್‌ಗಳಿಗೆ ಭೇಟಿ, ಬ್ರೇಕ್ ಸ್ಲೈಡ್, ವಾಕ್ ದಿ ಬೈಕ್ ಮುಂತಾದ ಪ್ರಮುಖ ರೈಡಿಂಗ್ ಕೌಶಲಗಳ ಕುರಿತು ಭಾಗೀದಾರರಿಗೆ ತರಬೇತಿ ನೀಡಲಾಗುತ್ತದೆ.

ಆಸಕ್ತರು ಕಂಪನಿಯ ವೆಬ್‌ಸೈಟ್‌ನಲ್ಲಿ ಹೆಚ್ಚಿನ ವಿವರಗಳನ್ನು, ಲಭ್ಯವಿರುವ ಪ್ರೋಗ್ರಾಂಗಳು ಮತ್ತು ಬುಕಿಂಗ್ ಸ್ಲಾಟ್‌ಗಳನ್ನು ಅನ್ವೇಷಿಸಬಹುದು: www.heromotocorp.com

Related Articles