Tuesday, January 14, 2025

ಶುಭಾಂಗ್‌ ಹೆಗ್ಡೆಗೆ ಒಮ್ಮೆಯೂ ಯಾಕೆ ಅವಕಾಶ ನೀಡಲಿಲ್ಲ?

ಬೆಂಗಳೂರು: ವಿಜಯ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಸೋತಿದೆ. 35 ವರ್ಷಗಳ ಹಿರಿಯ ಆಟಗಾರರು ವೈಫಲ್ಯ ಕಾಣುತ್ತಿರುವಾಗ ಯುವ ಆಟಗಾರರಿಗೆ ಅವಕಾಶ ನೀಡದ ಮೇಲೆ ಮತ್ತೆ ಯಾಕೆ ಅವರನ್ನು ತಂಡದಲ್ಲಿ ಸೇರಿಸಿ ಬೆಂಚ್‌ ಬಿಸಿ ಮಾಡಿಸುತ್ತೀರಿ? Why Shubhang Hegde not get a Chance in Vijaya Hazare Trophy?

ಕರ್ನಾಕಟ ಈ ಬಾರಿ 9 ಪಂದ್ಯಗಳನ್ನು ಆಡಿದೆ. ಆಲ್ರೌಂಡರ್‌ ಕೃಷ್ಣಪ್ಪ ಗೌತಮ್‌ ನೀರಸ ಪ್ರದರ್ಶನ ತೋರುತ್ತಿರೂ ಅಲ್ಲೇ ಬೆಂಚಿನಲ್ಲಿ ಕುಳಿತಿದ್ದ ಯುವ ಆಲ್ರೌಂಡರ್‌ ಶುಭಾಂಗ್‌ ಹೆಗ್ಡೆಗೆ ಒಂದೂ ಅವಕಾಶವನ್ನು ನೀಡದೆ ಇರುವುದು ಯಾವ ಲೆಕ್ಕಾಚಾರ? ಹಾಗಾದರೆ ಇಂಥ ಯುವ ಆಟಗಾರರು ಆಡುವುದಾದರೂ ಯಾವಾಗ? ಇನ್ನೆರಡು ವರ್ಷ ಕಳೆಯಿತೆಂದರೆ “ಅವನಿಗೆ ವಯಸ್ಸಾಯಿತು” ಎನ್ನುವ ಉತ್ತರ ಕೊಡುತ್ತಾರೆ. 22ರ ಹರೆಯದ ಶುಭಾಂಗ್‌ ಹೆಗ್ಡೆ ಎಡಗೈ ಸ್ಪಿನ್ನರ್‌ ಹಾಗೂ ಎಡಗೈ ಬ್ಯಾಟ್ಸ್‌ಮನ್‌. ಅಫಘಾನಿಸ್ತಾನದ ವಿರುದ್ಧ U19 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಆಟಗಾರ.

 ಅನುಭವಿ ಆಟಗಾರರನ್ನು ಯಾಕೆ ಕೈ ಬಿಟ್ಟಿದ್ದೀರಿ? ಎಂದು ಕೇಳಿದರೆ “ಅವರಿಗೆ ವಯಸ್ಸಾಯಿತು, ನಾವು ಯುವಕರಿಗೆ ಅವಕಾಶ ನೀಡುತ್ತಿದ್ದೇವೆ,” ಎಂಬ ಉತ್ತರ ನೀಡುತ್ತಾರೆ.

ಆಡುವ ಆಟಗಾರರಿಗೆ ವಯಸ್ಸಾಯಿತು ಎಂದು ಬೇರೆ ರಾಜ್ಯಗಳಿಗೆ ಆಡಲು ಎನ್‌ಒಸಿ ನೀಡಿದ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ಈಗ ಯೋಚಿಸುವ ಕಾಲ. 35 ವರ್ಷದ ಕೃಷ್ಣಪ್ಪ ಗೌತಮ್‌ ಈ ಬಾರಿಯ ವಿಜಯ ಹಜಾರೆ ಟ್ರೋಫಿಯಲ್ಲಿ ಆಡಿದ ಆಲ್ರೌಂಡ್‌ ಆಟವನ್ನು ಗಮನಿಸಿದರೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಆಯ್ಕೆ ಸಮಿತಿ ಎಡವಿದ್ದೆಲ್ಲಿ ಎಂದು ಯೋಚಿಸಬೇಕಾಗುತ್ತದೆ.

ಗೌತತಮ್‌ ಒಟ್ಟು ಆಡಿದ್ದು 9 ಪಂದ್ಯಗಳು. ಹೆಚ್ಚಿನ ಪಂದ್ಯಗಳಲ್ಲಿ ಬ್ಯಾಟಿಂಗ್‌ ಸಿಕ್ಕಿರಲಿಲ್ಲ. ಸಿಕ್ಕ ಐದು ಅವಕಾಶದಲ್ಲಿ ಗಳಿಸಿದ್ದು 12 ರನ್‌. ಎಸೆದ್ದು 79.4 ಓವರ್‌ಗಳು 6 ಮೇಡನ್‌, ನೀಡಿದ್ದು 370 ರನ್‌ ಗಳಿಸಿದ್ದು, 10 ವಿಕೆಟ್‌. ಇವರನ್ನು ನಾಳೆ ರಣಜಿಗೆ ಆಯ್ಕೆ ಮಾಡಿದರೂ ಅಚ್ಚರಿ ಪಡಬೇಕಾಗಿಲ್ಲ. ಮಿಜೋರಾಮ್‌ನಂಥ ದುರ್ಬಲ ತಂಡದ ವಿರುದ್ಧ 49 ರನ್‌ಗೆ 3 ವಿಕೆಟ್‌ ಗಳಿಸಿದ್ದು ಉತ್ತಮ ಸಾಧನೆ. ರಾಜಸ್ಥಾನ ವಿರುದ್ಧದ ನಿರ್ಣಾಯಕ ಸೆಮಿಫೈನಲ್‌ ಪಂದ್ಯದಲ್ಲಿ 60 ರನ್‌ ನೀಡಿ ಗಳಿಸಿದ್ದು 1 ವಿಕೆಟ್‌. ಕೆಎಸ್‌ಸಿಎ ಆಯ್ಕೆ ಸಮಿತಿ ಇಂಥ ಆಟಗಾರರಿಗೆ ನಿರಂತರವಾಗಿ ಅವಕಾಶ ನೀಡುತ್ತಿದೆ. ಒಳ್ಳೆಯದು. ಆದರೆ ಅಲ್ಲೇ ಬೆಂಚಿನಲ್ಲಿ ಕುಳಿತಿದ್ದ ಇನ್ನೊಬ್ಬ ಆಲ್ರೌಂಡರ್‌ಗೆ ಅವಕಾಶ ನೀಡಲು ಮನಸ್ಸು ಮಾಡುವುದಿಲ್ಲ. ಇದರಿಂದಾಗಿ ಪ್ರತಿಭೆಗಳು ಅವಕಾಶ ಸಿಗದೆ ಮೂಲೆಗುಂಪಾಗುವುದು ಸಹಜ.

ಕರ್ನಾಟಕವನ್ನು ತೊರೆದು ಬೇರೆ ರಾಜ್ಯಗಳಲ್ಲಿ ಆಡುತ್ತಿರುವ ಆಟಗಾರರ ಅಂಕಿ ಅಂಶಗಳನ್ನು ನೋಡಿದರೆ ಖುಷಿ ಮತ್ತು ಬೇಸರ ಒಮ್ಮೆಲೇ ಆಗುತ್ತದೆ. ಅವರು ಉತ್ತಮವಾಗಿ ಆಡುತ್ತಿದ್ದಾರೆ ಎಂಬುದಕ್ಕೆ ಖುಷಿ, ಕರ್ನಾಟಕದ ಪರ ಆಡುತ್ತಿಲ್ಲವಲ್ಲ ಎಂಬುದಕ್ಕೆ ಬೇಸರ.

Related Articles