Friday, October 4, 2024

ಮೊನ್ನೆ ಫೈನಲ್‌ ಮ್ಯಾಚ್‌ನಲ್ಲಿ ಒಮ್ಮೆಯಾದರೂ ಇವರನ್ನು ಟಿವಿ ಪರದೆಯಲ್ಲಿ ನೋಡಿದ್ದೀರಾ?

ಮುಂಬಯಿ: ಮೊನ್ನೆ ನಡೆದ ವಿಶ್ವಕಪ್‌ ಫೈನಲ್‌ ಪಂದ್ಯದ ವೇಳೆ ಕಾವೇರಿಯ ಹೆಸರಿನಲ್ಲಿ ಹಣ ಮಾಡಿ ಇಲ್ಲಿಯ ಸರಕಾರಕ್ಕೆ ಪಂಗ ನಾಮ ಹಾಕಿದ್ದ ಸದ್ಗುರು ಜೊತೆ ಸಚಿನ್‌ ತೆಂಡೂಲ್ಕರ್‌ ಮಾತನಾಡುತ್ತಿರುವುದನ್ನು ನೋಡಿದ್ದೀರಿ, ಆದರೆ ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌ ಹಾಗೂ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ದೇಶದ ಜಾವೆಲಿನ್‌ ತಾರೆ ನೀರಜ್‌ ಚೋಪ್ರಾ ಅವರನ್ನು ಒಮ್ಮೆಯಾದರೂ ಟಿವಿ ಪರದೆಯಲ್ಲಿ ನೋಡಿದ್ದೀರಾ? Why Neeraj Chopra not seen on TV even though he is watching Final of World Cup cricket.

ಇಲ್ಲ ಅನ್ನುತ್ತಿದ್ದಾರೆ ಕ್ರೀಡಾಭಿಮಾನಿಗಳು. ಭಾರತ ಕ್ರೀಡಾ ಇತಿಹಾಸದಲ್ಲೇ ಹೊಸ ಕ್ರಾಂತಿ ಬರೆದು ಈಗ ವಿಶ್ವ ಅಥ್ಲೆಟಿಕ್ಸ್‌‌ ವರ್ಷದ ಸಾಧಕರ ಪಟ್ಟಿಯಲ್ಲಿ ಶ್ರೇಷ್ಠ ಅಥ್ಲೀಟ್‌ಗಳ ಸರದಿಯಲ್ಲಿ ಫೈನಲ್‌ ತಲುಪಿರುವ ನೀರಜ್‌ ಚೋಪ್ರಾ ಅವರು ಪ್ರೇಕ್ಷಕರ ಗ್ಯಾಲರಿಯಲ್ಲಿ ನಿಂತು ಭಾರತ ತಂಡದ ಆಟಗಾರರನ್ನು ಹುರಿದುಂಬಿಸುತ್ತಿರುವುದನ್ನು ಯಾರೋ ಹಿಂದಿನಿಂದ ಫೋಟೋ ತೆಗೆದು ಸೋಷಿಯಲ್‌ ಮೀಡಿಯಾಗಳಲ್ಲಿ ಹರಿಯಬಿಟ್ಟಿದ್ದಾರೆ.

ನಿಜವಾಗಿಯೂ ಈ ಸಾಧಕನಿಗೆ ಗೋಲ್ಡ್‌ ಟಿಕೆಟ್‌ ಕೊಡಬೇಕಾಗಿತ್ತು. ಅವರಿಗೆ ವಿಐಪಿ ಗ್ಯಾಲರಿಯಲ್ಲಿ ಕುಳಿತುಕೊಳ್ಳುವ ಅವಕಾಶ ನೀಡಬೇಕಾಗಿತ್ತು. ಇವತ್ತು ಜಾಗತಿಕ ಕ್ರೀಡೆಯಲ್ಲಿ ಭಾರತಕ್ಕೆ ವಿಐಪಿ ಸ್ಥಾನ ತಂದುಕೊಟ್ಟ ಕ್ರೀಡಾಪಟುವಿಗೆ ನಾವು ಗೋಲ್ಡನ್‌ ಟಿಕೆಟ್‌‌ ಕೊಡಲಿಲ್ಲ.

ಯಾರಿಗೆ ಗೋಲ್ಡನ್‌ ಟಿಕೆಟ್‌ ನೀಡಿದರೆ ಹೆಚ್ಚು ಜನರನ್ನು ಆಕರ್ಷಿಸಬಹುದು ಎಂಬುದು ಕ್ರಿಕೆಟ್‌ ಪಿಚ್‌ನಲ್ಲಿ ರಾಜಕೀಯದಾಟ ಆಡುತ್ತಿರುವ ಜೇ ಶಾಗೆ ಚೆನ್ನಾಗಿ ಗೊತ್ತು. ಇದಕ್ಕಾಗಿ ಬಾಲಿವುಡ್‌ ತಾರೆಯರನ್ನೇ ಸುತ್ತಲೂ ತುಂಬಿಕೊಂಡು ಕ್ಯಾಮರಾಮೆನ್‌ಗೆ ಆ ಕಡೆ ಹೆಚ್ಚು ಗಮನ ಹರಿಸುವಂತೆ ಸೂಚಿಸಲಾಗಿದೆ. ಪಾಪ, ದೂರ ಪಂದ್ಯ ವೀಕ್ಷಿಸುತ್ತಿದ್ದ ನೀರಜ್‌ ಚೋಪ್ರಾ ಹೇಗೆ ಕಾಣಬೇಕು. ನೀರಜ್‌ ಚೋಪ್ರಾ ಅವರಿಗೆ ಗೋಲ್ಡನ್‌ ಟಿಕೆಟ್‌ ನೀಡಿ ಎಂದು ಮಾಜಿ ಕ್ರಿಕೆಟಿಗ ಸುನಿಲ್‌ ಗವಾಸ್ಕರ್‌ ಸಲಹೆ ನೀಡಿದ್ದರೂ ಅಥ್ಲೆಟಿಕ್ಸ್‌ನ ಅರಿವಿಲ್ಲದ ಶಾ ಅದಕ್ಕೆ ಬೆಲೆ ಕೊಟ್ಟಂತೆ ಕಾಣಲಿಲ್ಲ. ನೀರಜ್‌ ಪದಕ ಗೆದ್ದಾಗ ಅವರ ಜೊತೆಗೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡವರಿಗೂ ಇದೆಲ್ಲ ನೆನಪಾಗದು. ಈ ಕಾರಣಕ್ಕಾಗಿಯೇ ಭಾರತದಲ್ಲಿ ಕ್ರಿಕೆಟ್‌ ಹೊರತಾಗಿ ಇತರ ಕ್ರೀಡೆಗಳು ಹೆಚ್ಚು ಉದ್ದಾರವಾಗಿಲ್ಲ.

Related Articles