Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಛತ್ತೀಸ್‌ಗಢದಲ್ಲಿ ಕ್ರೀಡೆಯ ಮೂಲಕ ಪರಿವರ್ತನೆ: ಸಚಿವೆ ರಕ್ಷಾ ಖಾಡ್ಸೆ

ರಾಯ್ಪುರ: ಛತ್ತೀಸ್‌ಗಢವನ್ನು ನಕ್ಸಲ್‌ ರಾಜ್ಯ ಎಂದು ಕರೆಯುತ್ತಿದ್ದರು. ಈಗ ಕ್ರೀಡೆಯ ಮೂಲಕ ಇಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಸಾಮಾಜಿಕ ಪರಿವರ್ತನೆಯಾಗಿದೆ. ಖೇಲೋ ಇಂಡಿಯಾ ಟ್ರೈಬಲ್‌ ಗೇಮ್ಸ್‌ಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಕ್ರೀಡೆಗೆ ಸಮಾಜವನ್ನು ಬದಲಾಯಿಸುವ ಶಕ್ತಿ ಇದೆ ಭಾರತೀಯ ಕ್ರೀಡಾ ಪ್ರಾಧಿಕಾರದ ಶ್ರಮ ಸಾರ್ಥಕವಾಗಿದೆ ಎಂದು ಯುವ ವ್ಯವಹಾರಗಳು ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವೆ ರಕ್ಷಾ ಖಾಡ್ಸೆ ಅವರು ಅಭಿಪ್ರಾಪಟ್ಟರು. Where Naxalism Once Existed, Sports Now on The Rise. Sport Brings New Hope to a Region Once Defined by Conflict”, MoS Raksha Khadse at KITG 2026.

ಅವರು ರಾಯ್ಪುರದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಟ್ರೈಬಲ್‌ ಗೇಮ್ಸ್‌ನ ಮಾಧ್ಯಮ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅಲ್ಲಿನ ವಾತಾವರಣವನ್ನು ಶಕ್ತಿ, ಭರವಸೆ ಮತ್ತು ಪರಿವರ್ತನೆಯ ವಾತಾವರಣ ಎಂದು ಬಣ್ಣಿಸಿದರು. ಈ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ ತಂಡದ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು ಮತ್ತು ಕ್ರೀಡಾಪಟುಗಳು, ಸ್ಥಳೀಯ ಸಮುದಾಯ ಮತ್ತು ಪ್ರದೇಶದ ಜನರಿಂದ ಬಂದ ಪ್ರತಿಕ್ರಿಯೆ  ಸಕಾರಾತ್ಮಕವಾಗಿದೆ ಎಂದರು,

ಈ ಕ್ರೀಡಾಕೂಟದಲ್ಲಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 2500ಕ್ಕೂ ಹೆಚ್ಚು ಕ್ರೀಡಾಪಟುಗಳು ವಿವಿಧ ಭಾಗಗಳಲ್ಲಿ ಸ್ಪರ್ಧಿಸುತ್ತಿರುವುದರಿಂದ ಈ ಕ್ರೀಡಾಕೂಟ ಬುಡಕಟ್ಟು ಯುವಜನರಿಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಉತ್ತಮ ವೇದಿಕೆ ಸಿಕ್ಕಂತಾಗಿದೆ. ಬುಡಕಟ್ಟು ಮಕ್ಕಳಲ್ಲಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಆಯಾ ರಾಜ್ಯ ಸರಕಾರಗಳೊಂದಿಗೆ ಸೇರಿಕೊಂಡು ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಹಾಗೂ ರಾಷ್ಟ್ರ ಮಟ್ಟದಲ್ಲಿ ತರಬೇತಿ ನೀಡುವ ಬಗ್ಗೆ ಯೋಜನೆ ರೂಪಿಸಲಾಗುವುದು ಎಂದರು.

ಛತ್ತೀಸ್‌ಗಢವು ನಕ್ಸಲ್‌ವಾದಕ್ಕೆ ಹೆಸರುವಾಸಿಯಾಗಿದ್ದ ಒಂದು ಕಾಲವಿತ್ತು, ಮತ್ತು ಅದರ ಜನರನ್ನು ಹಿಂದುಳಿದ ಸಮುದಾಯವೆಂದು ಪರಿಗಣಿಸಲಾಗಿತ್ತು. ಇಂದು, ಈ ಪ್ರದೇಶಕ್ಕೆ ಹೊಸ ರೂಪು ಸಿಕ್ಕಂತಾಗಿದೆ.  ನಕ್ಸಲ್‌ವಾದವನ್ನು ನಿರ್ಮೂಲನೆ ಮಾಡಲಾಗಿದೆ ಮತ್ತು ಕ್ರೀಡೆಯ ಮೂಲಕ, ಈ ನೆಲದ ಯುವಕರು ಈಗ ತಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಮುಂದಕ್ಕೆ ತಂದು ದೇಶಕ್ಕಾಗಿ ಆಡಬಹುದ” ಎಂದು ಸಚಿವರು ಹೇಳಿದರು.


administrator