Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಮಣಿಪಾಲ ಟೈಗರ್ಸ್‌ ತಂಡದಲ್ಲಿ ಬಂಗಾಳದ ಕ್ರೀಡಾ ಸಚಿವ

ಬೆಂಗಳೂರು: ರಾಜ್ಯವೊಂದರ ಕ್ರೀಡಾ ಸಚಿವರು ಕ್ರಿಕೆಟ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ ಎಂದಾಗ ಅಚ್ಚರಿಯಾಗುವುದು ಸಹಜ. ಹೌದು ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರರೊಬ್ಬರು ಲೆಜೆಂಡ್ಸ್‌‌ ಲೀಗ್‌ ಕ್ರಿಕೆಟ್‌ ನಲ್ಲಿ ಮಣಿಪಾಲ ಟೈಗರ್ಸ್‌ ತಂಡದ ಪರ ಆಡುತ್ತಿದ್ದಾರೆ. West Bengal Sports Minister playing for Manipal Tigers in Legends League Cricket T20 tournament.

ಹರ್ಭಜನ್‌ ಸಿಂಗ್‌ ಮಾಲೀಕತ್ವದ ಮಣಿಪಾಲ ಟೈಗರ್ಸ್‌ ತಂಡದಲ್ಲಿ ಬಂಗಾಳದ ಮಾಜಿ ಆಟಗಾರ ಮನೋಜ್‌ ತಿವಾರಿ ಆಡುತ್ತಿದ್ದಾರೆ. ತಂಡದಲ್ಲಿದ್ದರೂ ಮೊದಲ ಪಂದ್ಯದಲ್ಲಿ ಅವರಿಗೆ ಆಡುವ ಅವಕಾಶ ಸಿಗಲಿಲ್ಲ. ಪಶ್ಚಿಮ ಬಂಗಾಳದ ಕ್ರೀಡಾ ಸಚಿವರಾಗಿರುವ ಮನೋಜ್‌ ತಿವಾರಿ ಕ್ರಿಕೆಟ್‌ಗೆ ವಿದಾಯ ಹೇಳಿ ರಾಜಕೀಯ ಪ್ರವೇಶಿಸಿದ್ದರು. ತೃಣಮೂಲ ಕಾಂಗ್ರೆಸ್‌ ಪಕ್ಷವನ್ನು ಸೇರಿ ಚುನಾವಣೆಯಲ್ಲಿ ಜಯ ಗಳಿಸಿ ಈಗ ಕ್ರೀಡಾ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಡುವೆ ಹರ್ಭಜನ್‌ ಸಿಂಗ್‌ ಅವರ ಪ್ರೀತಿಯ ಕರೆಗೆ ಓಗೊಟ್ಟು ಲೆಜೆಂಡ್ಸ್‌ ಲೆಜೆಂಡ್ಸ್‌ ಲೀಗ್‌ನಲ್ಲಿ ಆಡಲಿದ್ದಾರೆ. ಮನೋಜ್‌ ತಿವಾರಿ ಹಣಕ್ಕಾಗಿ ಇಲ್ಲಿ ಆಡುತ್ತಿಲ್ಲ ಬದಲಾಗಿ ನಾಯಕ ಹರ್ಭಜನ್‌ ಸಿಂಗ್‌ ಅವರು ತೋರಿದ ಪ್ರೀತಿಗೆ ತಂಡವನ್ನು ಸೇರಿಕೊಂಡಿದ್ದಾರೆ. ಈ ಲೀಗ್‌ನಲ್ಲಿ ಆಡಿದರೆ ಮನೋಜ್‌ ತಿವಾರಿ ಅವರಿಗೆ ಸಿಗುವುದು ಬರೇ 15ಲಕ್ಷ ರೂ. ಆದರೆ ಅದಕ್ಕಿಂತ ಪ್ರೀತಿ ದೊಡ್ಡದು ಎನ್ನುತ್ತಾರೆ ತಿವಾರಿ.

ಉಡುಪಿ ಜಿಲ್ಲೆಯ ಮಣಿಪಾಲ್‌ ಗ್ರೂಪ್‌ ಈ ಲೀಗ್‌ನಲ್ಲಿ ಮಣಿಪಾಲ ಟೈಗರ್ಸ್‌ ಫ್ರಾಂಚೈಸಿಯ ಮಾಲೀಕತ್ವ ಹೊಂದಿದೆ. ಮಣಿಪಾಲ್‌ ಎಜುಕೇಷನ್‌ ಆಂಡ್‌ ಮಣಿಪಾಲ್‌ ಗ್ರೂಪ್‌ (MEMG) ತಂಡದ ಮಾಲೀಕತ್ವ ಹೊಂದಿದೆ.


administrator