Thursday, December 12, 2024

ಆಗ ಹಣ ಇರಲಿಲ್ಲ, ಈಗ ಇದೆಯಲ್ಲ ಕೊಡಿ: 1983ರ ವಿಶ್ವಕಪ್‌ ಗೆದ್ದ ತಂಡ

ಹೊಸದಿಲ್ಲಿ: ಹಣದ ವ್ಯಾಮೋಹ ನಮ್ಮನ್ನು ಯಾವ ಹಂತಕ್ಕೆ ತಲುಪಿಸುತ್ತದೆ ಎಂಬುಕ್ಕೆ ಇದೊಂದು ಉತ್ತಮ ನಿದರ್ಶನ. ಈ ಬಾರಿಯ ಟಿ20 ವಿಶ್ವಕಪ್‌ ಗೆದ್ದ ತಂಡಕ್ಕೆ ಭಾರೀತಯ ಕ್ರಿಕೆಟ್‌ ನಿಯಂತ್ರಣ ಮಂಡಳಿ 125 ಕೋಟಿ ರೂ. ನಗದು ಬಹುಮಾನ ಘೋಷಿಸಿದೆ. ಇದನ್ನು ಕಂಡ 1983ರ ವಿಶ್ವಕಪ್‌ ತಂಡದ ಆಟಗಾರರು, “ಆಗ ಹಣ ಇರಲಿಲ್ಲ ನಿಜ, ಈಗ ಹಣ ಇದೆಯಲ್ಲ ನಮಗೂ ನಗದು ಬಹುಮಾನ ಕೊಡಿ,” ಎಂದು 1983 ತಂಡದ ಆಟಗಾರರೊಬ್ಬರು ಹೆಸರನ್ನು ಬಹಿರಂಗಪಡಿಸದೆ ಬೇಡಿಕೆ ಹೇರಿದ್ದಾರೆ. We also need cash award demands 1983 world cup team

1983ರಲ್ಲಿ ವಿಶ್ವಕಪ್‌ ಗೆದ್ದ ತಂಡಕ್ಕೆ ಬಿಸಿಸಿಐ 25000 ನಗದು ಬಹುಮಾನ ಘೋಷಿಸಿತ್ತು. ಆಗ ಸಂಸ್ಥೆಯಲ್ಲಿ ಹಣ ಇರಲಿಲ್ಲ. ಕೆಲವು ಆಟಗಾರರು ವಿರೋಧ ವ್ಯಕ್ತಪಡಿಸಿದ್ದರು. ಆಟಗಾರರಿಗೆ ಗೌರವ ನೀಡಲು ಖ್ಯಾತ ಗಾಯಕಿ ಲತಾ ಮಂಗೇಷ್ಕರ್‌ ಅವರು ಆರ್ಕೆಸ್ಟ್ರಾ ಆಯೋಜಿಸಿ ಆಟಗಾರರಿಗೆ ತಲಾ 1 ಲಕ್ಷ ರೂ, ಉಡುಗೊರೆ ನೀಡಿದ್ದರು. ಅದೇ ರೀತಿ ಆಟಗಾರರಿಗೂ ಸರಕಾರದಿಂದ ವಿವಿಧ ರೀತಿಯ ಸೌಲಭ್ಯ ಲಭಿಸಿತ್ತು.

ಬಿಸಿಸಿಐನಲ್ಲಿ ಆಗ ಹಣ ಇರಲಿಲ್ಲ. ಈಗ ಅಂದಾಜು 20,೦೦೦ ಕೋಟಿ ಹೊಂದಿರುವ ಜಗತ್ತಿನ ಅತ್ಯಂತ ಶ್ರೀಮಂತ ಕ್ಲಬ್‌ಗಳಲ್ಲಿ ಒಂದಾಗಿದೆ. ಹಾಗಂತ 41 ವರ್ಷಗಳ ಹಿಂದಿನ ಸಾಧನೆಗೆ ಈಗ ನಗದು ಬಹುಮಾನ ನೀಡಿ ಎನ್ನುವುದು ಎಷ್ಟು ಸೂಕ್ತ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಯಾವುದಾದರೂ ಆಟಗಾರರಿಗೆ ಆರ್ಥಿಕ ಸಹಾಯ ಮಾಡಿ, ಅವರು ಸಂಕಷ್ಟದಲ್ಲಿದ್ದಾರೆ ಎಂಬ ಬೇಡಿಕೆ ನೀಡುವುದು ಜಗತ್ತಿನ ನಿಯಮ. 1983ರ ವಿಶ್ವಕಪ್‌ ಗೆದ್ದಿರುವ ತಂಡದಲ್ಲಿ ಅನೇಕರು ತಮ್ಮ ತಮ್ಮ ಪ್ರತಿಭೆ ಮತ್ತು ಪ್ರಭಾವದ ಆಧಾರದ ಮೇಲೆ ಈಗಲೂ ಬಿಸಿಸಿಐ ಜೊತೆ ವ್ಯಾವಹಾರಿಕ ಸಂಬಂಧ ಹೊಂದಿದ್ದಾರೆ. ಇನ್ನು ಕೆಲವು ಆಟಗಾರರು ಸಂಕಷ್ಟದಲ್ಲಿರುವುದು ನಿಜ. ಅಂಥ ಆಟಗಾರರನ್ನು ಗುರುತಿಸಿ ಬಿಸಿಸಿಐ ಆರ್ಥಿಕ ನೆರವು ನೀಡಿದರೆ ಅದು ಮಾನವೀಯ ನೆಲೆ. ಆ ರೀತಿಯ ಬೇಡಿಕೆಗೆ ನ್ಯಾಯವಿದೆ.

ಅಂದಿನ ಹಣದ ಮೌಲ್ಯ, ಜೀವನ ಮಟ್ಟ ಎಲ್ಲವನ್ನೂ ಪರಿಣಗಣಿಸಬೇಕು. ಆಗ ಹಣಕ್ಕಿದ್ದ ಬೆಲೆ ಈಗ ಇಲ್ಲ. ಆಗ ಆಟಗಾರರಿಗೆ ದಿನದ ಭತ್ಯೆ 600 ರೂ. ಪಂದ್ಯ ಶುಲ್ಕ 1500. ಈಗ ಒಂದು ಟೆಸ್ಟ್‌ ಪಂದ್ಯನಾಡಿದರೆ 15,00,000ರೂ. ಏಕದಿನ ಪಂದ್ಯ ಒಂದಕ್ಕೆ 6 ಲಕ್ಷ ರೂ. ಹಾಗೂ ಟಿ20 ಪಂದ್ಯಕ್ಕೆ 3 ಲಕ್ಷ ರೂ. ನೀಡಲಾಗುತ್ತಿದೆ. ಜೊತೆಯಲ್ಲಿ ದಿನ ಭತ್ಯೆ ಇರುತ್ತದೆ.

Related Articles