Friday, December 13, 2024

ವಿರಾಟ್ ಕೊಹ್ಲಿ ನಂ. 1

ದುಬೈ:ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಸೋಲನುಭವಿಸಿದರೂ ಎರಡು ಇನ್ನಿಂಗ್ಸ್ ಗಳಲ್ಲಿ ಒಟ್ಟು 200 ರನ್ ಗಾಲಿಸ್ರುವ ನಾಯಕ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐ ಸಿ ಸಿ ) ಪ್ರಕಟಿಸಿದ ನೂತನ ರಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ. 

ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವನ್ ಸಿತ್ ಅವರು ಕಳೆದ 32 ವಾರಗಳಿಂದ ಅಗ್ರ ಸ್ಥಾನದಲ್ಲಿದ್ದು ಈಗ ಕೊಹ್ಲಿ ಆ ಸ್ಥಾನ ತಲುಪಿದ್ದಾರೆ.
ಚೆಂಡು ತಿರುಚಿದ ಆರೋಪ ಸಾಬೀತಾಗಿರುವ ಕಾರಣ ಸ್ಮಿತ್ 12 ತಿಂಗಳ ನಿಷೇಧ ಶಿಕ್ಷೆ ಅನುಭವಿಸುತ್ತಿದ್ದಾರೆ. 2011ರಲ್ಲಿ ಸಚಿನ್ ತೆಂಡೂಲ್ಕರ್ ಅಗ್ರ ಸ್ಥಾನಕ್ಕೇರಿದ ನಂತರ ಇದೇ ಮೊದಲ ಬಾರಿಗೆ ಭಾರತೀಯ ಆಟಗಾರರೊಬ್ಬರು ಅಗ್ರ ಸ್ಥಾನ ತಲುಪಿದ್ದಾರೆ.
67 ಪಂದ್ಯಗಳಲ್ಲಿ 22 ಶತಕ ಗಳಿಸಿರುವ ಕೊಹ್ಲಿ ಪಂದ್ಯ ಸೋಲಿನಲ್ಲಿ ಕೊನೆಗೊಂಡ ಕಾರಣ ಆ ಶತಕ ಪ್ರಮುಖವಾದುದಲ್ಲ ಎಂದಿದ್ದಾರೆ.
ಇದೇ  ವೇಳೆ ಇಂಗ್ಲೆಂಡಿನ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.

Related Articles