ಕರೋಲಿನಾ ಮರಿನ್ ಐತಿಹಾಸಿಕ ಸಾಧನೆ

0
558

 

ನಾನ್ ಜಿಂಗ್:ಭಾರತದ ಪಿ ವಿ ಸಿಂಧೂ ಅವರನ್ನು 21-19, 21-10   ಮಣಿಸಿದ ಸ್ಪೇನ್ ನ ಕರೋಲಿನಾ ಮರಿನ್ ಮೂರನೇ  ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದಾರೆ. ಈ ಸಾಧನೆ ಮಾಡಿದ ಜಗತ್ತಿನ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭಾನುವಾರ ನಡೆದ ಫೈನಲ್ ಪಂದ್ಯ 2016 ರಿಯೋ ಒಲಿಂಪಿಕ್ಸ್ ನಷ್ಟು ಕುತೂಹಲದಿಂದ ಕೂಡಿರಲಿಲ್ಲ. ಕಳೆದ ವರ್ಷ ಗ್ಲ್ಯಾಸ್ಗೋದಲ್ಲಿ ನಡೆದ ಚಾಂಪಿಯನ್ ಷಿಪ್ ನಲ್ಲೂ ಸಿಂಧೂ ಬೆಳ್ಳಿಗೆ ತೃಪ್ತಿ ಪಟ್ಟಿದ್ದರು. ಸಿಂಧೂ ಕೂಡ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್  ನಾಲ್ಕು ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು 2013 ಹಾಗೂ 2014 ಕಂಚಿನ ಪದಕ ಗೆದ್ದಿರುವ ಸಿಂಧು  ಕಳೆದ ವರ್ಷ ಬೆಳ್ಳಿ ಗೆದ್ದಿದ್ದರು.  ಮರಿನ್ 2014 ಹಾಗೂ 2015 ರಲ್ಲಿ ಪದಕ ಗೆದ್ದಿದ್ದರು.