Thursday, October 10, 2024

ವಿಜಯ ಹಜಾರೆ ಟ್ರೋಫಿ: ಕರ್ನಾಟಕಕ್ಕೆ ಸತತ ನಾಲ್ಕನೇ ಜಯ

ಅಹಮದಾಬಾದ್‌: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಬಿಹಾರ ವಿರುದ್ಧದ ವಿಜಯ ಹಜಾರೆ ಟ್ರೋಫಿಯಲ್ಲಿ 7 ವಿಕೆಟ್‌ ಅಂತರದಲ್ಲಿ ಗೆದ್ದ ಕರ್ನಾಟಕ ತಂಡ ಚಾಂಪಿಯನ್‌ಷಿಪ್‌ನಲ್ಲಿ ಸತತ ನಾಲ್ಕನೇ ಜಯ ದಾಖಲಿಸಿದೆ. Vijaya Hazare Trophy: Karnataka registered 4th win in a row.

ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ ತಂಡ ಜಗದೀಶ ಸುಚಿತ್‌ (27ಕ್ಕೆ 3) ಅವರ ಸ್ಪಿನ್‌ ದಾಳಿಗೆ ಸಿಲುಕಿ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 217 ರನ್‌ ಗಳಿಸಿತು. ಸಖಿಬುಲ್‌ ಗನಿ ಅವರು ಅಜೇಯ 113 ರನ್‌ ಗಳಿಸುವ ಮೂಲಕ ಬಿಹಾರ ಸಾಧರಣ ಮೊತ್ತವನ್ನು ಕಲೆ ಹಾಕಿತು.

218 ರನ್‌ಗಳ ಜಯದ ಗುರಿ ಹೊತ್ತ ಕರ್ನಾಟಕ ಆರಂಭಿಕ ಆಟಗಾರ ಆರ್‌. ಸಮರ್ಥ್‌ ಅವರ ವಿಕೆಟ್‌‌ ಬೇಗನೇ ಕಳೆದುಕೊಂಡಿತು. ನಾಯಕ ಮಯಾಂಕ್‌ ಅಗರ್ವಾಲ್‌ ಕೇವಲ 28 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ನಿಕಿನ್‌ ಜೋಶ್‌ ಅಮೂಲ್ಯ 69 ರನ್‌ ಗಳಿಸುವ ಮೂಲಕ ತಂಡ ಚೇತರಿಸಿಕೊಂಡಿತು. ಪ್ರತಿಯೊಂದು ಪಂದ್ಯದಲ್ಲೂ ಮಿಂಚುತ್ತಿರುವ ದೇವದತ್ತ ಪಡಿಕಲ್‌ ಅಜೇಯ 93 ರನ್‌ ಗಳಿಸಿ ತಂಡಕ್ಕೆ 7 ವಿಕೆಟ್‌ ಜಯ ತಂದಿತ್ತರು. ಪಡಿಕ್ಕಲ್‌ ಕೇವಲ 57 ಎಸೆತಗಳನ್ನೆದುರಿಸಿ 9 ಬೌಂಡರಿ ಹಾಗೂ 7 ಸಿಕ್ಸರ್‌‌ ನೆರವಿನಿಂದ ಮತ್ತೊಮ್ಮೆ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ನೀಡಿದರು.

Related Articles