Friday, February 23, 2024

Vijay Hazare Trophy: ಸಮರ್ಥ, ಮಯಾಂಕ್‌ ಶತಕ, ಕರ್ನಾಟಕ ದಾಖಲೆಯ ಮೊತ್ತ

ಅಹಮದಾಬಾದ್‌: ವಿಶ್ವಕಪ್‌ ಫೈನಲ್‌ ಪಂದ್ಯ ನಡೆದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಜಮ್ಮ ಮತ್ತು ಕಾಶ್ಮೀರ ವಿರುದ್ಧದ ವಿಜಯ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡದ ಆರಂಭಿಕ ಆಟಗಾರರಾದ ಮಯಾಂಕ್‌ ಅಗರ್ವಾಲ್‌ ಹಾಗೂ ಆರ್‌. ಸಮರ್ಥ್‌ 267 ರನ್‌ಗಳ ಜೊತೆಯಾಟವಾಡಿ ದಾಖಲೆ ಬರೆದಿದ್ದಾರೆ. ಇದು ಕರ್ನಾಟಕದ ಪರ ಮೊದಲ ವಿಕೆಟ್‌ ಜೊತೆಯಾಟದಲ್ಲಿ ದಾಖಲಾದ ಎರಡನೇ ಗರಿಷ್ಠ ಮೊತ್ತವಾಗಿದೆ. Vijay Hazare Trophy: Karnataka recorded highest total 402.

2020-21ರಲ್ಲಿ ಆರ್. ಸಮರ್ಥ್‌ ಹಾಗೂ ದೇವದತ್ತ ಪಡಿಕ್ಕಲ್‌ ರೈಲ್ವೇಸ್‌ ವಿರುದ್ಧ ಗಳಿಸಿದ್ದ 285 ರನ್‌ ಗರಿಷ್ಠ ದಾಖಲೆಯಾಗಿದೆ.  ಕರ್ನಾಟಕ 50 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 402 ರನ್‌ ಗಳಿಸಿ ಎದುರಾಳಿ ತಂಡಕ್ಕೆ ಕಠಿಣ ಸವಾಲು ನೀಡಿದೆ. ದೇಶೀಯ ಏಕದಿನ ಕ್ರಿಕೆಟ್‌ನಲ್ಲಿ ಕರ್ನಾಟಕ ದಾಖಲಿಸಿದ ಗರಿಷ್ಠ ಮೊತ್ತ ಇದಾಗಿದೆ. ಈ ಹಿಂದೆ 2014-15ರ ಋತುವಿನಲ್ಲಿ  ಪಂಜಾಬ್‌ ವಿರುದ್ಧ 359/7 ಗಳಿಸಿದ್ದು ಇದುವರೆಗಿನ ಗರಿಷ್ಠ ಮೊತ್ತವಾಗಿತ್ತು.

ಸಮರ್ಥ್‌ 120 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ 123 ರನ್‌ ಗಳಿಸಿ ದೇಶೀಯ ಏಕದಿನದಲ್ಲಿ 8ನೇ ಶತಕ ದಾಖಲಸಿದರು. ನಾಯಕ ಮಯಾಂಕ್‌ ಅಗರ್ವಾಲ್‌ 133 ಎಸೆತಗಳನ್ನೆದುರಿಸಿ 11 ಬೌಂಡರಿ ಹಾಗೂ 8 ಸಿಕ್ಸರ್‌ ನೆರವಿನಿಂದ 157 ರನ್‌ ಗಳಿಸಿದರು. ಜೊತೆಯಲ್ಲಿ ದೇಶೀಯ ಏಕದಿನದಲ್ಲಿ 14ನೇ ಶತಕ ಪೂರ್ಣಗೊಳಿಸಿದರು. ದೇವದತ್ತ ಪಡಿಕ್ಕಲ್‌ ಕೇವ 35 ಎಸೆತಗಳನ್ನು ಎದುರಿಸಿ 4 ಬೌಂಡರಿ 5 ಸಿಕ್ಸರ್‌ ನೆರವಿನಿಂದ ಅಜೇಯ 71 ರನ್‌ ಸಿಡಿಸಿ ರಾಜ್ಯದ ಬೃಹತ್‌ ಮೊತ್ತಕ್ಕೆ ನೆರವಾದರು.

Related Articles