Friday, December 13, 2024

ಚಿನ್ನದ ಓಟಗಾರ ಬೋಲ್ಟ್ ಬಾಲ್ಯದ ಕನಸು ಭಗ್ನ

ಸಿಡ್ನಿ:

ವೃತ್ತಿಪರ ಫುಟ್ಬಾಲ್ ಆಟಗಾರ ಆಗಬೇಕೆಂಬ ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ಅವರ ಬಾಲ್ಯದ ಕನಸು ನುಚ್ಚು ನೂರಾಯಿತು.

ಎಂಟು ಬಾರಿ ಒಲಿಂಪಿಕ್ ಚಾಂಪಿಯನ್ ಜಮೈಕಾದ ಉಸೇನ್ ಬೋಲ್ಟ್ ಅವರು ಆಸ್ಟ್ರೇಲಿಯಾದ ಸೆಂಟ್ರಲ್ ಕೋಸ್ಟ್ ಮರೀನರ್ಸ್ ತಂಡದ ಪರ ಎ ಲೀಗ್ ಆಡುವ ಕನಸು ಕಟ್ಟಿದ್ದರು. ಅದರಂತೆ, ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ, ಈ ಕುರಿತಂತೆ ಗುತ್ತಿಗೆ ಮಾತುಕತೆಯಲ್ಲಿ ವಿಫಲವಾದ ಕಾರಣ ಬೋಲ್ಟ್ ಅವರು ಬಾಲ್ಯದ ಕನಸು ಸದ್ಯಕ್ಕೆ ಮರೀಚಿಕೆಯಾಗಿದೆ.
32 ವರ್ಷದ ಬೋಲ್ಟ್ ಅವರು, ಸ್ನೇಹಯುತ ಪಂದ್ಯದಲ್ಲಿ ಎರಡು ಗೋಲು ಗಳಿಸುವ ಮೂಲಕ ಜಗತ್ತಿನ ಗಮನ ಸೆಳೆದಿದ್ದರು. ಆದರೆ. ಸೆಂಟ್ರಲ್ ಕೋಸ್ಟ್ ಮರೀನರ್ಸ್ ತಂಡದ ವ್ಯವಸ್ಥಾಪಕ ಮಂಡಳಿಯು ಬೋಲ್ಟ್ ಅವರಿಗೆ ಆಸ್ಟ್ರೇಲಿಯಾ ಡಾಲರ್ ಮುರು ಮಿಲಿಯನ್ ನಿಗದಿಪಡಿಸಿದ್ದರು. ಅಲ್ಲದೇ, ಈ ಒಪ್ಪಂದಕ್ಕೆ ಸಕಾರವಾಗಬಕಾದರೆ ಬೇರೆ ಯಾವುದಾದರು ಸಂಸ್ಥೆ ಪ್ರಾಯೋಜಕತ್ವ ವಹಿಸಿಕೊಳ್ಳಬೇಕು. ಅಂದಾಗ ಮಾತ್ರ ಒಪ್ಪಂದ ಸಕಾರವಾಗಲಿದೆ ಎಂದು ತಂಡದ ಮೂಲಗಳಿಂದ ತಿಳಿದುಬಂದಿದೆ.

Related Articles