Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಬೆಂಗಳೂರಿನಲ್ಲಿ ಕಾರ್‌ ಕೇರ್‌ ಸ್ಟುಡಿಯೋ ಉದ್ಘಾಟಿಸಿದ ನರೇನ್‌ ಕಾರ್ತಿಕೇಯನ್‌

ಬೆಂಗಳೂರು: ಭಾರತದ ಫಾರ್ಮುಲಾ ಒನ್‌ ಕಾರ್‌ ಡ್ರೈವರ್‌ ನರೇನ್‌ ಕಾರ್ತಿಕೇಯನ್‌ ಬೆಂಗಳೂರಿನಲ್ಲಿ ದೇಶದ 10ನೇ ಕಾರ್‌ಕೇರ್‌ ಸ್ಟುಡಿಯೋವನ್ನು ಉದ್ಘಾಟಿಸಿದರು.

ಜಾಗತಿಕ ಪ್ರಶಸ್ತಿ ವಿಜೇತ ಚಿಕಾಗೋದ ಟರ್ಟಲ್‌ ವ್ಯಾಕ್ಸ್‌ ಇನ್‌ಕಾರ್ಪೋರೇಟೆಡ್‌ ಬೆಂಗಳೂರಿನ ಲಿಮಿಟ್‌ಲೆಸ್‌ ಆಟೋ ಡಿಟೇಲಿಂಗ್‌ ಜೊತೆ ಕೈಜೋಡಿಸಿ ಬೆಂಗಳೂರಿನ ಹೊರಮಾವುವಿನಲ್ಲಿ ಈ ಶಾಖೆಯನ್ನು ಆರಂಭಿಸಿದೆ.ಇದೇ ಸಂದರ್ಭದಲ್ಲಿ ಕಂಪೆನಿಯು ಭಾರತದ ಮೊದಲ ಕಾರ್‌ ಕೇರ್‌ ಸ್ಟುಡಿಯೋವನ್ನು ಯಲಹಂಕದ ಅಲ್ಲಸಂದ್ರಾ ಮೈನ್‌ರೋಡ್‌ನಲ್ಲಿ ಉದ್ಘಾಟಿಸಿದೆ.  ಆಧುನಿಕ ತಂತ್ರಜ್ಞಾನದೊಂದಿಗೆ  ನುರಿತ ತಜ್ಞರು ಟರ್ಟಲ್‌ ವ್ಯಾಕ್ಸ್‌ (Turtle Wax®) ಕಾರ್‌ ಕೇರ್‌ ಸ್ಟುಡಿಯೋದಲ್ಲಿ ಉತ್ತಮ ಗುಣಮಟ್ಟದ ಸೇವೆಯನ್ನು ನೀಡಲಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಭಾರತದ ಮೊದಲ ಫಾರ್ಮುಲಾ ಒನ್‌ ಟ್ರೈವರ್‌ ನರೇನ್‌ ಕಾರ್ತಿಕೇಯನ್‌ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. Turtle Wax® ಇಂಡಿಯಾದ ಆಡಳಿತ ನಿರ್ದೇಶಕ ಸಾಜನ್‌ ಮುರಳಿ ಪುರುವಾಂಗರ, ಲಿಮಿಟ್‌ಲೆಸ್‌ ಆಟೋ ಡಿಟೇಲಿಂಗ್‌ನ (Limitless Auto Detailing studio) ಪಾಲುದಾರರಾದ ಲಿಯೋನಾರ್ಡ್‌ ಫೆರ್ನಾಂಡೀಸ್‌, ಮತ್ತು ವಿಪಿನ್‌ ವಿನ್ಸೆಂಟ್‌ ಮತ್ತು ಕಾರ್‌ಕೇರ್‌ ಸ್ಟುಡಿಯೋದ (Kar Care studio) ಮಾಲೀಕರಾದ ರಾಮಕೃಷ್ಣ ರಾವ್‌ ಹಾಜರಿದ್ದರು.

ಉನ್ನತ ಮಟ್ಟದ ಆಟೋಮೊಟಿವ್‌ ಡಿಟೇಲಿಂಗ್‌, ಪೇಂಟ್‌ ಕರೆಕ್ಷನ್‌ ವರ್ಕ್‌ ಹಾಗೂ ಕಾರುಗಳಿಗೆ ಹೊಸ ರೂಪ ನೀಡುವುದರಲ್ಲಿ ಲಿಮಿಟ್‌ಲೆಸ್‌ ಆಟೋ ಡೀಲಿಂಗ್‌ ಹಾಗೂ ಕಾರ್‌ ಕೇರ್‌ ಈಗ ಭಾರತದಲ್ಲಿ ಜನಪ್ರಿಯ ಸಂಸ್ಥೆ ಎನಿಸಿವೆ. ಸಿರಾಮಿಕ್‌ ಮತ್ತು ಗ್ರಾಫೆನೆ ತಂತ್ರಜ್ಞಾನದಲ್ಲಿ ಹೊಸತನ ಕಂಡುಕೊಂಡಿರುವ ಕಾರ್‌ ಕೇರ್‌ ಉತ್ತಮ ಫಲಿತಾಂಶದ ಸೇವೆಯನ್ನು ನೀಡಲಿದೆ.

“ಭಾರತದಲ್ಲಿ ಬೆಂಗಳೂರು ಹಾಗೂ ಅದರ ನೆರೆಯ ನಗರಗಳಲ್ಲಿ ಕಾರ್‌ ಕೇರ್‌ ಉದ್ದಿಮೆ ಉತ್ತಮ ರೀತಿಯಲ್ಲಿ ಅಭಿವೃದ್ಧಿಹೊಂದುತ್ತಿದೆ. ಈ ಎರಡು ಉತ್ತಮ ಸ್ಟುಡಿಯೋಗಳ ಮೂಲಕ ದಕ್ಷಿಣ ಭಾರತದಲ್ಲಿ ನಾವು ಉತ್ತಮ ಸೇವೆಯನ್ನು ನೀಡುವ ಗುರಿ ಹೊಂದಿದ್ದೇವೆ. ಫಾರ್ಮುಲಾ ಒನ್‌ ಚಾಲಕ ನರೇನ್‌ ಕಾರ್ತಿಕೇಯನ್‌ ಈ ಸಂದರ್ಭದಲ್ಲಿ ನಮ್ಮೊಂದಿಗೆ ಇರುವುದು ಹೆಮ್ಮೆಯ ಸಂಗತಿ.” ಎಂದು ಟರ್ಟಲ್‌ ವ್ಯಾಕ್ಸ್‌ ಕಾರ್‌ ಕೇರ್‌ ಇಂಡಿಯಾ ಪ್ರೈವೇಟ್‌ ಲಿ.ನ ಆಡಳಿತ ನಿರ್ದೇಶಕ ಸಾಜನ್‌ ಮುರಳಿ ಪುರುವಂಗರಾ (Sajan Murali Puravangara, Managing Director of Turtle Wax Car Care India Pvt. Ltd) ಹೇಳಿದರು.

“ರೇಸಿಂಗ್‌ನಲ್ಲಿ ತೊಡಗಿದ್ದರಿಂದ ಕಾರ್‌ ಕೇರ್‌ ಎಂಬುದು ನನ್ನ ಹೃದಯಕ್ಕೆ ಹತ್ತಿರವಾದುದು, ದೇಶದಲ್ಲಿ ಟರ್ಟಲ್‌ ವ್ಯಾಕ್ಸ್‌ ಪ್ರಾರಂಭಗೊಂಡಾಗಿನಿಂದ ಅದರೊಂದಿಗೆ ಕೈಜೋಡಿಸಿರುವುದಕ್ಕೆ ನನಗೆ ಹೆಮ್ಮೆ ಅನಿಸುತ್ತಿದೆ. ಭಾರತದಲ್ಲಿ ಜಾಗತಿಕ ಮಟ್ಟದ ಸೇವೆಯನ್ನು ಈ ಬ್ರಾಂಡ್‌ ಕಲ್ಪಿಸಲಿದೆ. ಟರ್ಟಲ್‌ ವ್ಯಾಕ್ಸ್‌ ಬ್ರಾಂಡ್‌ ಜೊತೆ ದೀರ್ಘವಾದ ಸಂಬಂಧವು ಮುಂದುವರಿಯಲಿದೆ,” ಎಂದು ಭಾರತದ ಮೊದಲ ಫಾರ್ಮುಲಾ ಒನ್‌ ಚಾಲಕ ನರೇನ್‌ ಕಾರ್ತಿಕೇಯನ್‌ ಹೇಳಿದರು.

ಮೋಟಾರ್‌ ಸ್ಪೋರ್ಟ್ಸ್‌ಗೆ ಬಳಸುವ ಕಾರುಗಳಿಗೂ ಇಲ್ಲಿ ಹೊಸ ರೂಪು ನೀಡಲಾಗುತ್ತದೆ.  ●      Hybrid Ceramic Coating, , ●      Exterior Restoration Treatment, ●      Exterior Restoration Treatment, ●      Interior Detailing Treatment, ●      Interior Detailing Treatment, ●      Specialty Treatment ಮೊದಲಾದ ಸೇವೆಗಳು ಇಲ್ಲಿ ಲಭ್ಯವಿರುತ್ತದೆ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.