Thursday, March 28, 2024

ಆಗಸ್ಟ್‌ 12-24 ಉತ್ತರ ಕಾಶಿಯಲ್ಲಿ ಐಎಂಎಫ್‌ ರಾಷ್ಟ್ರೀಯ ಸ್ಪೋರ್ಟ್‌ ಕ್ಲೈಮಿಂಗ್‌ ಚಾಂಪಿಯನ್‌ಷಿಪ್‌

Sportsmail ಬೆಂಗಳೂರು

ನೆಹರು ಇನ್‌ಸ್ಟಿಟ್ಯೂಟ್‌ ಆಫ್‌ ಮೌಂಟನೇರಿಂಗ್‌ ಆಶ್ರಯದಲ್ಲಿ ಇದೇ ತಿಂಗಳ 12 ರಿಂದ 26ರವರೆಗೆ ಉತ್ತರಾಖಂಡದ ಉತ್ತರಕಾಶಿಯಲ್ಲಿ 26ನೇ ಭಾರತೀಯ ಪರ್ವತಾರೋಹಣ ಸಂಸ್ಥೆ (ಐಎಂಎಫ್‌) ರಾಷ್ಟ್ರೀಯ ಸ್ಪೋರ್ಟ್‌ ಕ್ಲೈಮಿಂಗ್‌ ಚಾಂಪಿಯನ್‌ಷಿಪ್‌ ನಡೆಯಲಿದೆ.

ಸಂಬಂಧಪಟ್ಟ ಐಎಂಎಫ್‌ ವಲಯಗಳು ಆಯ್ಕೆ ಮಾಡಿದ ಸ್ಪರ್ಧಿಗಳು ಮತ್ತು ಅಧಿಕಾರಿಗಳು ಮಾತ್ರ ಈ ಚಾಂಪಿಯನ್‌ಷಿಪ್‌ನಲ್ಲಿ ಹೆಸರು ನೋದಾಯಿಸಲು ಅರ್ಹರು. ಪ್ರತಿಯೊಂದು ವಲಯವುದ ಸಂಬಂದಪಟ್ಟ ವಿಭಾಗದಲ್ಲಿ  ಮೂರು ಸ್ಪರ್ಧಿಗಳನ್ನು ಆಯ್ಕೆ ಮಾಡಿ ಕಳುಹಿಸಬೇಕು. ಮೂರು ವಿಭಾಗಗಳು ಸೇರಿ ಸ್ಪರ್ಧಿಸುವವರ ಸಂಖ್ಯೆ 30 ಮೀರಬಾರದು. ವಲಯವು ತಂಡದೊಂದಿಗೆ ಒಬ್ಬ ಕೋಚ್‌ ಹಾಗೂ ಒಬ್ಬ ಮ್ಯಾನೇಜರ್‌ ಅನ್ನು ಕಳುಹಿಸಬಹುದು. ಭಾಗವಹಿಸುವ ಪ್ರತಿಯೊಬ್ಬ ಸ್ಪರ್ಧಿ ಮತ್ತು ಅಧಿಕಾರಿಗಳು ವಿಮಾ ಸೌಲಭ್ಯವನ್ನು ಹೊಂದಿರಬೇಕು.

ವಿಭಾಗಗಳು: ಸಬ್‌ಜೂನಿಯರ್‌ (ಬಾಲಕ ಮತ್ತು ಬಾಲಕಿ) ಜೂನಿಯರ್‌ (ಬಾಲಕ ಮತ್ತು ಬಾಲಕಿ) ಮತ್ತು ಸೀನಿಯರ್‌ ವಿಭಾಗ(ಪುರುಷ ಮತ್ತು ಮಹಿಳೆ)ಗಳಲ್ಲಿ ಸ್ಪರ್ಧೆ ನಡೆಯಲಿದೆ. ಸಬ್‌ ಜೂನಿಯರ್‌ ವಿಭಾಗದಲ್ಲಿ 10-13 ವರ್ಷ ವಯೋಮಿತಿಯವರು ಪಾಲ್ಗೊಳ್ಳಬಹುದು. ಜೂನಿಯರ್‌ ವಿಭಾಗದಲ್ಲಿ 14 ರಿಂದ 16ವರ್ಷ ವಯೋಮಿತಿಯ ಸ್ಪರ್ಧಿಗಳು ಪಾಲ್ಗೊಳ್ಳಬಹುದು, ಹಾಗೂ ಸೀನಿಯರ್ ವಿಭಾಗದಲ್ಲಿ 17ವರ್ಷಕ್ಕೆ ಮೇಲ್ಪಟ್ಟವರು ಪಾಲ್ಗೊಳ್ಳಬಹುದು.

 

ಸ್ಪರ್ಧಿಗಳು ಸ್ಪರ್ಧೆಗೆ ತಮ್ಮದೇ ಆದ ಸಲಕರಣೆಗಳನ್ನು ತರಬೇಕು. ತಾಂತ್ರಿಕ ನೆರವನ್ನು ಐಎಂಎಫ್‌ ನೀಡಲಿದೆ. ಪ್ರವೇಶ ಶುಲ್ಕ 2,000 ರೂ. ಸ್ಪರ್ಧಿಗಳಿಗೆ ವಸತಿ ಸೌಕರ್ಯ ನೀಡಲಾಗುವುದು. ಸ್ಪರ್ಧಿಗಳ ಹೆತ್ತವರು ಅಥವಾ ಸಂಬಂಧಿಕರು ತಮ್ಮದೇ ವೆಚ್ಚದಲ್ಲಿ ವಸತಿ ಸೌಕರ್ಯ ಮಾಡಿಕೊಳ್ಳತಕ್ಕದ್ದು. ಸಂಬಂಧಪಟ್ಟ ವಲಯಗಳು ಸ್ಪರ್ಧಿಗಳಿಗೆ ಐಎಂಎಫ್‌ ಸೂಚಿಸಿದ ಟಿ ಶರ್ಟ್‌ ವಿತರಿಸಲಿದೆ.

ಸ್ಪರ್ಧೆಗಳು ಅಂತಾರಾಷ್ಟ್ರೀಯ ಸ್ಪೋರ್ಟ್‌ ಕ್ಲೀಮಿಂಗ್‌ ಫೆಡರೇಷನ್‌ (ಐಎಫ್‌ಎಸ್‌ಸಿ) ನಿಯಮದಂತೆ ನಡೆಲಿದೆ ಎಂದು ಭಾರತೀಯ ಸ್ಪೋರ್ಟ್‌ ಕ್ಲೈಮಿಂಗ್‌ ಫೌಂಡೇಷನ್‌ನ ಅಧ್ಯಕ್ಷ ಕೀರ್ತಿ ಪಾಯ್ಸ್‌ ತಿಳಿಸಿದ್ದಾರೆ.

Related Articles