Friday, October 4, 2024

Tilottama Sen : ವಿಶ್ವ ಶೂಟಿಂಗ್‌ನಲ್ಲಿ ಇತಿಹಾಸ ಬರೆದ ಬೆಂಗಳೂರಿನ ತಿಲೋತ್ತಮಾ ಸೇನ್‌

ಕೈರೋದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಶೂಟಿಂಗ್‌ನಲ್ಲಿ ಬೆಂಗಳೂರಿನ 14 ವರ್ಷದ ತಿಲೋತ್ತಮಾ ಸೇನ್‌ (Tilottama Sen) ವನಿತೆಯರ 10 ಮೀ. ಏರ್‌ ರೈಫಲ್‌ ಶೂಟಿಂಗ್‌ನಲ್ಲಿ ಭಾರತ ತಂಡ ಕಂಚಿನ ಪದಕ ಗೆಲ್ಲುವಲ್ಲಿ ನೆರವಾಗಿದ್ದಾರೆ. ಈ ಸಾಧನೆಯ ಮೂಲಕ ತಿಲೋತ್ತಮಾ ಹಿರಿಯರ ಶೂಟಿಂಗ್‌ನಲ್ಲಿ ಪದಕ ಗೆದ್ದ ಭಾರತದ ಅತ್ಯಂತ ಕಿರಿಯ ಶೂಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕೊರೋನಾ ಸಮಯದಲ್ಲಿ ಟೀವಿಯಲ್ಲಿ ಕಾರ್ಟೂನ್‌ ನೆಟ್‌ವರ್ಕ್‌ ನೋಡುತ್ತಿದ್ದ ತಿಲೋತ್ತಮಾ ಅವರ ತಂದೆ ಸುಜಿತ್‌ ಸೇನ್‌, ಮಗಳನ್ನು ಹತ್ತಿರದ ಶೂಟಿಂಗ್‌ ರೇಂಜ್‌ಗೆ ತರಬೇತಿಗಾಗಿ ಕೆರದುಕೊಂಡು ಹೋದರು. ಮಗಳನ್ನು ಟೀವಿ ನೋಡುವುದರಿಂದ ತಪ್ಪಿಸಲು ಸುಜಿತ್‌ ಮಾಡಿದ ಸಣ್ಣ ಪ್ರಯತ್ನದಿಂದ ಒಬ್ಬ ಅಂತಾರಾಷ್ಟ್ರೀಯ ಶೂಟರ್‌ ಉದ್ಭವಿಸಿದ್ದು ವಿಶೇಷ. ನಂತರ ತಿಲೋತ್ತಮಾ ಜೂನಿಯರ್‌ ವಿಭಾಗದಲ್ಲಿ ಕಂಚು ಮತ್ತು ಬೆಳ್ಳಿಯ ಪದಕ ಗೆದ್ದ ನಂತರ ಮೊದಲ ಬಾರಿಗೆ ಸೀನಿಯರ್‌ ವಿಭಾಗದಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದರು. ಕಳೆದ ವರ್ಷ ಕೈರೋದಲ್ಲಿ ನಡೆದ ಜೂನಿಯರ್‌ ವಿಶ್ವಕಪ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದರು.

Tilottama Sen Created History at ISSF world Cup Shooting Championship Cairo

ಕೈರೋದಲ್ಲಿ ನಡೆಯುತ್ತಿರುವ ಹಿರಿಯರ ವಿಶ್ವಕಪ್‌ನಲ್ಲಿ ಸ್ಪರ್ಧಿಸಿರುವ ತಿಲೋತ್ತಮ ಅರ್ಹತಾ ಸುತ್ತಿನಲ್ಲಿ ಟೋಕಿಯೋ ಒಲಿಂಪಿಯನ್‌ ಇಂಗ್ಲೆಂಡ್‌ನ ಸೆಯೊನೈಡ್‌ ಮೆಸಿಂಟೋಷ್‌ ಅವರಿಗೆ ದಿಟ್ಟ ಸವಾಲು ನೀಡಿ ಎರಡನೇ ಸ್ಥಾನ ಕಾಯ್ದುಕೊಂಡಿದ್ದರು. ಗಳಿಸಿಸ ಅಂಕ 632.1. ಭಾರತದ ಇತರ ಸ್ಪರ್ಧಿಗಳಾದ ರಮಿತ ಜಿಂದಾಲ್‌ ಹಾಗೂ ನರ್ಮದಾ ರಾಜು ಕೂಡ ರಾಂಕಿಂಗ್‌ ಮ್ಯಾಚ್‌ಗೆ ಅರ್ಹತೆ ಪಡೆದಿದ್ದರು. ಎಂಟು ಶೂಟರ್‌ಗಳಿಂದ ಕೂಡಿದ್ದ ರಾಂಕಿಂಗ್‌ ಸರಣಿಯಲ್ಲಿ ತಿಲೋತ್ತಮಾ, ನಾಲ್ವರು ಒಲಿಂಪಿಯನ್‌ ವಿರುದ್ಧ ಸ್ಪರ್ಧಿಸಿದ್ದರು. ಟೋಕಿಯೋ ಒಲಿಂಪಿಕ್ಸ್‌ನಲ್ಲಿ 10ಮೀ ಕಂಚಿನ ಪದಕ ಮತ್ತು 50 ಮೀ 3P ವಿಭಾಗದಲ್ಲಿ ಸ್ವರ್ಣ ಗೆದ್ದಿರುವ ಸ್ವಿಜರ್ಲೆಂಡ್‌ನ ನಿನಾ ಕ್ರಿಸ್ಟಿಯನ್‌ ಕೂಡ ಸೇರಿದ್ದರು.

ಸರಕಾರದ ನೆರವಿನ ಅಗತ್ಯ:
ತಿಲೋತ್ತಮ (Tilottama Sen) ಅವರ ತಂದೆ ಸುಜಿತ್‌ ಸೇನ್‌, ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮೂಲತಃ ನಾಗಲ್ಯಾಂಡ್‌ನವರಾದ ಸುಜಿತ್‌ ಸೇನ್‌ ಕಳೆದ 18 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. “ತಿಲೋತ್ತಮ ಕಳೆದ ನಾಲ್ಕು ವರ್ಷಗಳಿಂದ ಶೂಟಿಂಗ್‌ನಲ್ಲಿ ತೊಡಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾಳೆ. ತರಬೇತಿಗೆ ಸಾಕಷ್ಟು ಹಣ ಬೇಕಾಗುತ್ತದೆ. ಆರಿಗೆ, ಹೊಟೇಲ್‌ ಸೇರಿದಂತೆ ಸಾಕಷ್ಟು ಹಣ ವ್ಯಯವಾಗುತ್ತದೆ. ಇದಕ್ಕಾಗಿ ಕ್ರೀಡಾ ಇಲಾಖೆಯಿಂದ ನೆರವು ನೀಡುವಂತೆ ಈ ಮೂಲಕ ವಿನಂತಿಸಿಕೊಳ್ಳುತ್ತದ್ದೇನೆ,” ಎಂದು ಸುಜಿತ್‌ ಸೇನ್‌ ಹೇಳಿದ್ದಾರೆ.

ಇದನ್ನೂ ಓದಿ : ಮಹಿಳಾ ಪ್ರೀಮಿಯರ್ ಲೀಗ್ : ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ RCB ಮೆಂಟರ್

ಇದನ್ನೂ ಓದಿ : ಭಾರತದಲ್ಲಿ ನಡೆಯಲಿರುವ ವಿಶ್ವ ಬಾಕ್ಸಿಂಗ್‌ಗೆ ಹಲವು ರಾಷ್ಟ್ರಗಳಿಂದ ಬಹಿಷ್ಕಾರ !

Tilottama Sen Created History at ISSF world Cup Shooting Championship Cairo

Related Articles