Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟದಲ್ಲಿ ಕನ್ನಡಿಗರು

ರಾಯ್ಪುರ್‌: ಛತ್ತೀಸ್‌ಗಢದಲ್ಲಿ ನಡೆಯುತ್ತಿರುವ ದೇಶದ ಮೊದಲ ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯವನ್ನು ವಿವಿಧ ಬುಡಕಟ್ಟು ಸಮುದಾಯಗಳಿಂದ 46 ಕ್ರೀಡಾಪಟುಗಳು ಪ್ರತಿನಿಧಿಸುತ್ತಿದ್ದಾರೆ. The state of Karnataka is being represented by 46 athletes from various tribal communities in the country’s first Khelo India Tribal Games being held in Chhattisgarh.

ಈಜಿನಲ್ಲಿ ಧೋನೇಶ್‌ ಎನ್‌, ಮಣಿಕಂಠ ಎಲ್‌. ಕೀರ್ತನ್‌ ಶರತ್‌, ಆದುತ್ಯ ಅರವಿಂದ್‌ ಹಾಗೂ ಕೃಷ್ಣ ಪುರುಷರ ವಿಭಾದಲ್ಲಿ ಸ್ಪರ್ಧಿಸುತ್ತಿದ್ದಾರೆ. ವನಿತೆಯೆರ ವಿಭಾಗದಲ್ಲಿ ಮೇಘಾಂಜಲಿ, ನಿಧಿ ಎಸ್‌, ಅಕ್ಷಿತಾ ಹಾಗೂ ವೈಷ್ಣವಿ ಸ್ಪರ್ಧೆಯಲ್ಲಿದ್ದಾರೆ.

ಕುಸ್ತಿಯಲ್ಲಿ ಕೆಂಪೇಗೌಡ ವಿ ಕೆಂಪಣ್ಣನವರ್‌, ಉಮೇಶ್‌, ಅಮೃತ್‌ ಫಕೀರಪ್ಪ ದುರ್ಗಣ್ಣವನರ್‌, ರೋಹನ್‌ ಎಂ ದೊಡ್ಡಮನಿ ಹಾಗೂ ಕಿರಣ್‌ ನಾಯಕ್‌ ಪುರುಷರ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ವನಿತೆಯರ ವಿಭಾಗದಲ್ಲಿ ಶಾಲಿನಿ ಸಯ್ಯರ್‌ ಸಿದ್ಧಿ, ಪ್ರಿನ್ಸಿತ ಪೆದ್ರು ಫೆರ್ನಾಂಡೀಸ್‌ ಸಿದ್ದಿ, ಮನೀಶಾ ಜುವಾವ ಸಿದ್ದಿ ಹಾಗೂ ಅಮೂಲ್ಯ ಭೀಮಸೇನ್‌ ಕುಂದರಗಿ ರಾಜ್ಯದ ಪ್ರತಿನಿಧಿಗಳಾಗಿದ್ದಾರೆ.

ಆರ್ಚರಿಯಲ್ಲಿ ಕರ್ನಾಟಕದ ಏಕೈಕ ಸ್ಪರ್ಧಿ ಮಲ್ಲಿಕಾರ್ಜುನ ಪುರುಷರ ವಿಭಾಗದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ.  ವೇಟ್‌ಲಿಫ್ಟಿಂಗ್‌ನಲ್ಲಿ ಕಾಂಚನಾ ತಲ್ವಾರ್‌ ವನಿತೆಯರ ವಿಭಾಗದ ಏಕೈಕ ಸ್ಪರ್ಧಿ. ಪುರುಷರ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಮಂಜುನಾಥ್‌ ಕೆ ಎ, ಯೋಗೇಶ್‌ ನಾಯಕ್‌ ಹಾಗೂ ಮಂಜುನಾಥ್‌ ಮರಾಠಿ ಪುರುಷರ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವರು.

ಅಥ್ಲೆಟಿಕ್ಸ್‌ನಲ್ಲಿ ರಾಮು, ದಶರತ್ ನಿಂಗಪ್ಪ ತಲ್ವಾನ್‌, ದರ್ಶನ್‌ ಬರಮಪ್ಪ ಬಗಾಡಿ, ರಿತುಶ್ರೀ, ನಾಗಿನಿ, ಅಥ್ಲೆಟಿಕ್ಸ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವರು.

ಹಾಕಿಯಲ್ಲಿ ಅಭಿಲಾಶ್‌, ದೇವೇಂದ್ರಪ್ಪ, ಎಂ. ನಾಗರಾಜ್‌, ಯಶ್ವಂತ್‌ ಕೆ ಎಂ. ಮನೋಜ್‌ ಕುಮಾರ್‌, ಅರುಣ್‌ ಕುಮಾರ್‌, ಮನೋಜ್‌ ಅಶೋಕ್‌ ವಾಲ್ಮೀಕಿ, ಚಂಗಪ್ಪ ಕೆ ಟಿ, ಕವನ್‌ ನಾಯ್ಕ್‌, ಶ್ರೀನಿವಾಸ್‌ ಮುದ್ದಪ್ಪ ತಲ್ವಾರ್‌, ಸಾಯಿ, ವಿಟ್ಟಲ ಕಲ್ಲೆಶಾನಿ, ಎಸ್‌, ಹಂಪಪ್ಪ, ವಿನಾಯಕ ಕರಿಯಣ್ಣವರ್‌, ಮನು ಎಚ್‌, ರಮೇಶ್‌ ಎಚ್‌, ಸೆವಣ ಗೌಡ, ದೇವರಾಜ್‌ ಕರ್ನಾಟಕದ ಪ್ರತಿನಿಧಿಗಳು.

ಕರ್ನಾಟಕ ತಂಡದ ಮುಖ್ಯಸ್ಥರಾಗಿ ಕರ್ನಾಟಕ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿ ವಿಸ್ಮಯೀ ವಿ ಟಿ ಅವರು ಕಾರ್ಯನಿರ್ವಹಿಸಲಿದ್ದಾರೆ. ಕ್ರೀಡಾಕೂಟ ಮಾರ್ಚ್‌ 25 ರಿಂದ ಏಪ್ರಿಲ್‌ 3ರ ವರೆಗೆ ನಡೆಯಲಿದೆ. ಇಲ್ಲಿ ಪಾಲ್ಗೊಳ್ಳುತ್ತಿರುವ


administrator