ಫಿಫಾ ವಿಶ್ವಕಪ್‌ನಲ್ಲಿ ಭಾರತ ತಂಡವಿಲ್ಲ,ಭಾರತ ಮೂಲದವರಿದ್ದಾರೆ
ನ್ಯೂಯಾರ್ಕ್: ಪ್ರತಿ ಬಾರಿ ಫಿಫಾ ವಿಶ್ವಕಪ್ ಫುಟ್ಬಾಲ್ ಚಾಂಪಿಯನ್‌ಷಿಪ್ ಆರಂಭವಾಯಿತೆಂದರೆ 150 ಕೋಟಿ ಜನಸಂಖ್ಯೆ ಇರುವ ಭಾರತದಕ್ಕೆ ಜಾಗತಿಕ ಮಟ್ಟದ ಫುಟ್ಬಾಲ್ ತಂಡವೊಂದನ್ನು ಕಟ್ಟಲಾಗಲಿಲ್ಲ ಎಂಬ ಕೂಗು ಕೇಳಿಬರುತ್ತದೆ. ಮತ್ತೆ ಆ ಧ್ವನಿ ಕೇಳುವುದು ನಾಲ್ಕು ವರ್ಷಗಳ ಬಳಿಕ. The Indian football team may not be playing in the current FIFA World Cup, but it is a matter of pride that players of Indian origin are playing.
ಭಾರತ ತಂಡ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳದಿದ್ದರೇನಂತೆ, ಭಾರತೀಯರು ಬೇರೆ ಬೇರೆ ದೇಶದ ತಂಡಗಳಲ್ಲಿ ಆಡುತ್ತಿರುವುದಕ್ಕೆ ಹೆಮ್ಮೆ ಪಡಬೇಕು. ಗಲ್ಫ್ ರಾಷ್ಟ್ರದ ಕ್ರಿಕೆಟ್ ತಂಡಗಳಲ್ಲಿ ನಮ್ಮವರಿರುವುದು ಸಹಜ., ಆದರೆ ಅಲ್ಲಿಯ ಫುಟ್ಬಾಲ್ ತಂಡಗಳಲ್ಲಿ ಅವಕಾಶ ಸಿಗುವುದೆಂದರೆ ಅವರಲ್ಲಿ ಅದ್ಭುತ ಪ್ರತಿಭೆ ಇದೆ ಎಂದರ್ಥ. ಪ್ರಸಕ್ತ ಫುಟ್ಬಾಲ್ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುತ್ತಿರುವ ಕತಾರ್ ತಂಡದಲ್ಲಿ ಕೇರಳದ ಕಣ್ಣೂರು ಮೂಲದ ಆಟಗಾರ ತಹ್ಷಿನ್ ಮೊಹಮ್ಮದ್ ಜಮ್ಷಿದ್ ಆಡುತ್ತಿರುವುದು ಭಾರತೀಯರು ಹೆಮ್ಮೆ ಪಡುವ ಸಂಗತಿ.
ನ್ಯೂಜಿಲೆಂಡ್ ತಂಡದ ಮಿಡ್‌ಫೀಲ್ಡರ್ ಸರ್‌ಪ್ರೀತ್ ಸಿಂಗ್ ಪಂಜಾಬ್ ಮೂಲದವರು ಎಂದು ಭಾರತೀಯರು ಹೆಮ್ಮೆಯಿಂದ ನ್ಯೂಜಿಲೆಂಡ್ ತಂಡದ ಪಂದ್ಯಗಳನ್ನು ವೀಕ್ಷಿಸಬಹುದು. ಅದೇ ರೀತಿ ಆಸ್ಟ್ರೇಲಿಯಾ ತಂಡದ ನಿಶಾನ್ ಮ್ಯಾಥ್ಯೂ ವೇಲುಪಿಳ್ಳೈಗೂ ಭಾರತಕ್ಕೂ ನಂಟಿದೆ. ಅವರ ತಾಯಿಯ ಸಂಬಂಧದ ಮೂಲಕ. ಕಾಂಗೋ ತಂಡದ ಸ್ಯಾಮ್ವೆಲ್ ಮುತ್ತುಸ್ವಾಮಿಯ ಮೂಲವೂ ಭಾರತವೆನ್ನುತ್ತಿವೆ ವರದಿಗಳು.

