ಫಿಫಾ ವಿಶ್ವಕಪ್: ಮೊರಾಕ್ಕೋ ವಿರುದ್ಧ ಡ್ರಾ ಸಾಧಿಸಿದ ಬ್ರೆಜಿಲ್
ನ್ಯೂಯಾರ್ಕ್: ಇಲ್ಲಿನ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕ್‌ಪ್ ಫುಟ್ಬಾಲ್‌ನ ಲೀಗ್ ಪಂದ್ಯದಲ್ಲಿ ಐದು ಬಾರಿ ಚಾಂಪಿಯನ್ ಬ್ರೆಜಿಲ್ ತಂಡ ಮೊರಾಕ್ಕೋ ವಿರುದ್ಧ 1-1 ಗೋಲಿನಿಂದ ಡ್ರಾ ಗಳಿಸಿ ಆತಂಕದ ಆರಂಭ ಕಂಡಿದೆ. Vinicius drags low-key Brazil level against dominant Morocco at World Cup
ವಿನಿಸಿಯಸ್ ಜೂನಿಯರ್ ಗಳಿಸಿದ ಗೋಲಿನಿಂದ ಬ್ರೆಜಿಲ್ ಆಘಾತದಿಂದ ಪಾರಾಯಿತು. ಮೊರಾಕ್ಕೋ ಪರ ಇಸ್ಮಾಯಿಲ್ ಸೈಬಾರಿ 21ನೇ ನಿಮಿಷದಲ್ಲಿ ಗೋಲು ಗಳಿಸಿ ಅನುಭವಿ ಬ್ರೆಜಿಲ್‌ಗೆ ಆಘಾತ ನೀಡಿದ್ದರು.
24 ವರ್ಷಗಳ ಬಳಿಕ ಆರನೇ ವಿಶ್ವಕಪ್ ಗೆಲ್ಲುವ ಗುರಿ ಹೊಂದಿರುವ ಬ್ರೆಜಿಲ್ ಪಂದ್ಯವನ್ನು ವೀಕ್ಷಿಸಲು 2002ರಲ್ಲಿ ಚಾಂಪಿಯನ್ ಪಟ್ಟ ಗೆದ್ದ ತಂಡದ ಆಟಗಾರರಾದ ರೊನಾಲ್ಡೊ, ರೋಬರ್ಟ್ ಕಾರ್ಲೋಸ್ ಹಾಗೂ ಕಾಕ ಆಗಮಿಸಿದ್ದರು. ಆದರೆ ತಂಡದಲ್ಲಿ ಅನುಭವಿ ಆಟಗಾರ ನೇಮಾರ್ ಗಾಯದ ಕಾರಣ ಪಂದ್ಯದಿಂದ ಹೊರಗುಳಿದದ್ದು ಬ್ರೆಜಿಲ್‌ನ ಮೊದಲ ಜಯಕ್ಕೆ ಅಡ್ಡಿಯಾಯಿತು.

