ಫಿಫಾ ವಿಶ್ವಕಪ್: ಕೆನಡಾಕ್ಕೆ ಐತಿಹಾಸಿಕ ಡ್ರಾ
ಟೊರಾಂಟೊ: ಪ್ರತಿ ಬಾರಿಯ ವಿಶ್ವಕಪ್ ಮೊದಲ ಪಂದ್ಯದಲ್ಲಿ ಸೋಲನುಭವಿಸುತ್ತಿದ್ದ ಕೆನಡಾ ತಂಡ ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ಡ್ರಾ ಸಾಧಿಸುವ ಮೂಲಕ ಸೋಲಿನಿಂದ ತಪ್ಪಿಸಿಕೊಂಡು ಫಿಫಾ ವಿಶ್ವಕಪ್‌ನಲ್ಲಿ ಮೊದಲ ಅಂಕ ಗಳಿಸಿದೆ. Co-hosts Canada fought back to earn their first World Cup point thanks to Cyle Larin’s second-half equaliser at Toronto Stadium.
ಬಿ ಗುಂಪಿನಲ್ಲಿ ಬೋಸ್ನಿಯಾ & ಹೆರ್ಜೆಗೋವಿನಾ ವಿರುದ್ಧ ನಡೆದ ಪಂದ್ಯ 1-1 ಗೋಲಿನಿಂದ ಡ್ರಾಗೊಂಡಿದೆ. ಬದಲಿ ಆಟಗಾರ ಕೈಲ್ ಲಾರಿನ್ 78ನೇ ನಿಮಿಷದಲ್ಲಿ ಗಳಿಸಿದ ಗೋಲು ಪಂದ್ಯವನ್ನು ಸಮಬಲಗೊಳಿಸಿತು. ಇದಕ್ಕೂ ಮುನ್ನ ಬೋಸ್ನಿಯಾ & ಹರ್ಜೆಗೋವಿನಾ ಪರ ಜೊವೊ ಲುಕಿಕ್ ಅವರು 21 ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟಿದ್ದರು.
ಆತಿಥೇಯ ಕೆನಡಾ ಫಿಫಾ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಅಂಕ ಗಳಿಸಿದೆ.

