Saturday, July 20, 2024

ಟಾಟಾ ಓಪನ್: ಭಾರತಕ್ಕೆ ಮೂರು ಪ್ರಶಸ್ತಿ

ದೆಹಲಿ: 

ಟಾಟಾ ಓಪನ್ ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್  ಫೈನಲ್‌ನಲ್ಲಿ ಸ್ಥಳೀಯ ಆಟಗಾರರಾದ ಲಕ್ಷ್ಯಸೇನ್, ಅಶ್ಮಿತಾ ಚಲಿಹಾ ಹಾಗೂ ಸುಮಿತ್ ರೆಡ್ಡಿ  ಮತ್ತು ಅರ್ಜುನ್ ಜೋಡಿ ಸೇರಿದಂತೆ ಒಟ್ಟು  ಮೂರು ಪ್ರಶಸ್ತಿ ಭಾರತೀಯರಿಗೆ ಬಂದಿದೆ.

ಇನ್ನೂ ಮಹಿಳಾ ಡಬಲ್ಸ್  ನಲ್ಲಿ ಪೂರ್ವಿಶಾ ರಾಮ್ ಹಾಗೂ ಮೇಘನಾ ಜಕ್ಕಮಪುಡಿ ಜೋಡಿಯು ಹಾಂಕಾಂಗ್‌ನ ವಿಂಗ್ ಯುಂಗ್ ಹಾಗೂ ಯಿಯಾಂಗ್ ಟಿಂಗ್ ಜೋಡಿಯ ವಿರುದ್ಧ 10-21, 11-21 ಅಂತರದಲ್ಲಿ ಸೋಲು ಅನುಭವಿಸಿತು.
ಅಶ್ಮಿತಾ ಚಲಿಹಾ ಅವರು ಮಹಿಳೆಯರ ಸಿಂಗಲ್ಸ್  ನ ಫೈನಲ್ ಪಂದ್ಯದಲ್ಲಿ ವೃಶಾಲಿ ಗುಮ್ಮಾಡಿ ವಿರುದ್ಧ 21-16, 21-13 ಅಂತರದಲ್ಲಿ ಜಯ ಸಾಧಿಸಿದರು. ಅಂತಾಷ್ಟ್ರೀಯ ಮಟ್ಟದ ಎರಡನೇ ಪ್ರಶಸ್ತಿಿ ಇದಾಗಿದೆ. ಹಿಂದೆ ದುಬೈ ಅಂತಾರಾಷ್ಟ್ರೀಯ ಚಾಲೆಂಜ್ ಗೆದ್ದಿದ್ದರು.
ಪುರುಷರ ಸಿಂಗಲ್ಸ್  ಫೈನಲ್‌ನಲ್ಲಿ ಲಕ್ಷ್ಯಸೇನ್ ಹಾಗೂ ಕಿರಿಯರ ಚಾಂಪಿಯನ್  ಕುನ್ಲಾವತ್ ವಿರುದ್ಧ 21-15, 21-10 ಅಂತರದಲ್ಲಿ ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡರು.
ನಂತರ ಪುರುಷರ ಡಬಲ್ಸ್ ಜೋಡಿಯಾದ ಸುಮಿತ್ ರೆಡ್ಡಿ ಹಾಗೂ ಅರ್ಜುನ್ ಅವರು, ಮಲೇಷ್ಯಾದ ಗೋ ಜೆ ಫೇ ಮತ್ತು ನುರ್ ಇಜ್ಜುದ್ದಿನ್ ಜೋಡಿಯ ವಿರುದ್ಧ 21-10, 21-16 ಅಂತರದಲ್ಲಿ ನೇರ ಸೆಟ್‌ಗಳಿಂದ ಗೆಲುವು ಸಾಧಿಸಿತು.

Related Articles