Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

PAKvNZ ಪಂದ್ಯ ಬೇರೆ ಕ್ರೀಡಾಂಗಣದಲ್ಲಿ ನಡೆದಿರುತ್ತಿದ್ದರೆ ಪಾಕ್‌ ವಿಶ್ವಕಪ್‌ನಿಂದಲೇ ಔಟ್!‌

ಪಾಕಿಸ್ತಾನ ಪಂದ್ಯ ನ್ಯೂಜಿಲೆಂಡ್‌ ನಡುವಿನ ವಿಶ್ವಕಪ್‌ ಪಂದ್ಯ ಭಾರತದ ಬೇರೆ ಯಾವುದೇ ಕ್ರೀಡಾಂಗಣಗಳಲ್ಲಿ ನಡೆಯುತ್ತಿದ್ದು, ಇದೇ ರೀತಿಯಲ್ಲಿ ಮಳೆ ಬಂದಿರುತ್ತಿದ್ದರೆ ಪಾಕಿಸ್ತಾನ 21 ರನ್‌ ಅಂತರದಲ್ಲಿ ಜಯ ಗಳಿಸಲು ಸಾಧ್ಯವಿರುತ್ತರಲೇ ಇಲ್ಲ. ಇದಕ್ಕೆ ಕಾರಣವೂ ಇದೆ. ಸಬ್‌ ಏರ್‌ ಸಿಸ್ಟಮ್‌ನಿಂದಾಗಿ ಪಾಕಿಸ್ತಾನ ಜಯ ಗಳಿಸಲು ಸಾಧ್ಯವಾಯಿತು. Pakistan won the match against New Zealand due to Sub Air system a Chinnaswamy stadium.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್‌ ಏರ್‌ ಸಿಸ್ಟಮ್‌ ಅಳವಡಿಸಲಾಗಿದೆ. ಒಂದು ನಿಮಿಷದಲ್ಲಿ ಸುಮಾರು 10,000 ಲೀಟರ್‌ ನೀರನ್ನು ಹೀರಿ ತೆಗೆಯುವ ಸಾಮರ್ಥ್ಯ ಈ ಮೆಷಿನ್‌ಗೆ ಇದೆ. ಸುಮಾರು 4.5 ಕೋಟಿ ರೂ. ವೆಚ್ಚದಲ್ಲಿ ಸಬ್‌ ಏರ್‌ಸಿಸ್ಟಮ್‌ ಅನ್ನು ಅಳವಡಿಸಲಾಗಿದೆ. ಇದರ ವಾರ್ಷಿಕ ನಿರ್ವಹಣೆಯ ವೆಚ್ಚವೇ ಅಂದಾಜು 7 ಲಕ್ಷ ರೂ. ಆಗಿರುತ್ತದೆ. ಜಗತ್ತಿನಲ್ಲೇ ಸಬ್‌ಏರ್‌ ಸಿಸ್ಟಮ್‌ ಅಳವಡಿಸಿದ ಜಗತ್ತಿನ ಮೊದಲ ಕ್ರಿಕೆಟ್‌ ಅಂಗಣ ಎಂಬ ಹೆಗ್ಗಳಿಕೆಗೆ ಚಿನ್ನಸ್ವಾಮಿ ಪಾತ್ರವಾಗಿದೆ.

ಸುಮಾರು 5 ಗಂಟೆಯ ಸುಮಾರಿಗೆ ಮಳೆ ಆಗಮಿಸಿದೆ. ಕೂಡಲೇ ಸಬ್‌ ಏರ್‌ಸಿಸ್ಟಮ್‌ ಆಳವಡಿಸಲಾಗಿ ಸ್ವಲ್ಪ ಹೊತ್ತಿನಲ್ಲೇ ಕ್ರೀಡಾಂಗಣ ಆಡಲು ಸಜ್ಜುಗೊಂಡಿತು. ಮತ್ತೆ ಮಳೆ ನಿರಂತರವಾಗಿ ಸುರಿದ ಕಾರಣ ಪಂದ್ಯ ಡಕ್‌ವರ್ಥ ಲೂಯಿಸ್‌ ನಿಯಮಕ್ಕೆ ಅಳವಡಿಸಲಾಗಿ ಪಾಕಿಸ್ತಾನ ಪಂದ್ಯವನ್ನು 21 ರನ್‌ ಅಂತರದಲ್ಲಿ ಗೆದ್ದುಕೊಂಡಿತು.

ಈ 21 ರನ್‌ ಯಾವಾಗ ದಾಖಲಾಯಿತು ಎಂಬುದು ಮುಖ್ಯ. ಒಮ್ಮೆ ಮಳೆ ಬಂದು ಹೋದ ನಂತರ ಸೋದಿಯ ಒಂದು ಓವರ್‌ನಲ್ಲೇ ಫಖರ್‌ ಹಾಗೂ ಬಾಬರ್‌ 20 ರನ್‌ ದಾಖಲಿಸಿದರು. ಒಂದು ವೇಳೆ ಸಬ್‌ ಏರ್‌ ಸಿಸ್ಟಮ್‌ ಇಲ್ಲದೇ ಇರುತ್ತಿದ್ದರೆ ಈ ರನ್‌ ಗಳಿಸಲು ಅವಕಾಶ ಇರುತ್ತಿರಲಿಲ್ಲ. ಈ ಪರಿಸ್ಥಿತಿಯಲ್ಲಿ ಪಂದ್ಯ ರದ್ದಾದುದನ್ನು ನಾವು ವಿಶ್ವದ ಅತ್ಯಂತ ದೊಡ್ಡ ಹಾಗೂ ನೂತನ ಕ್ರೀಡಾಂಗಣವಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನೋಡಿದ್ದೇವೆ.

ಒಂದು ತಂತ್ರಜ್ಞಾನವನ್ನು ಅಳವಡಿಸಿದ್ದರಿಂದ ಒಂದು ಟೂರ್ನಿಯ ಗತಿಯೇ ಬದಲಾದುದನ್ನು ಇಲ್ಲಿ ಗಮನಿಸಬಹುದು. ಒಂದು ವೇಳೆ ಅಂಕ ಹಂಚಿಕೊಂಡಿರುತ್ತಿದ್ದರೆ ಪಾಕಿಸ್ತಾನ ವಿಶ್ವಕಪ್‌ನಿಂದ ಹೊರನಡೆದಿರುತ್ತಿತ್ತು.


administrator