ಸ್ಪೋರ್ಟ್ಸ್ ಮೇಲ್ ವರದಿ, ಸುರತ್ಕಲ್
ಬದುಕು ಚದುರಂಗದ ಆಟದಂತೆ: ಬಾಬಿ ಫಿಷರ್
ಬರುವ ಮೇ ತಿಂಗಳ 1 ಮತ್ತು 2ನೇ ತಾರೀಕು ಕನ್ನಡ ನಾಡಿನ ಕರಾವಳಿ ಒಂದು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿದೆ. ಅಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊರಾವಡಿ ಗ್ರಾಮದ ಕಡಲ ಕಿನಾರೆಯಲ್ಲಿ ನೀವೆಂದೂ ನೋಡಿರದ ಕ್ರೀಡಾಕೂಟವೊಂದು ನಡೆಯಲಿದೆ. ಟಾರ್ಪೆಡೊಸ್ ಸ್ಪೊರ್ಟ್ಸ್ ಕಾರ್ನಿವಲ್ ನ ಭಾಗವಾಗಿರುವ ಮೊದಲನೇ ಟಾರ್ಪೆಡೊಸ್ ಅಖಿಲ ಭಾರತ ಫಿಡೆ ರೇಟಿಂಗ್ ರಾಪಿಡ್ ಚೆಸ್ ಟೂರ್ನಮೆಂಟ್-2021 ನಡೆಯಲಿದೆ. ಇದು ಕರ್ನಾಟಕದ ಕ್ರೀಡಾ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಶಾಂತ ಕಡಲ ಸಮ್ಮುಖದಲ್ಲಿ ಶಾಂತ ಚೆಸ್ ಟೂರ್ನಿ ನಡೆಯಲಿದೆ.
2 ಲಕ್ಷ ರೂ ನಗದು ಬಹುಮಾನ ಮೊತ್ತದ ಈ ಟೂರ್ನಿ ಕೊರಾವಡಿಯ ಬೇ ನೆಸ್ಟ್ ಬೀಚ್ ಹೌಸ್ ನಲ್ಲಿ ಚೆಸ್ ಕ್ರೀಡೆಗೆ ಪ್ರೋತ್ಸಾಹ ನೀಡಿದ್ದ ರಶ್ಮಿ ಶೆಟ್ಟಿ ಅವರ ನೆನಪಿನಲ್ಲಿ ಈ ಟೂರ್ನಿ ನಡೆಯಲಿದೆ. ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್ (FIDE), ಅಖಿಲಭಾರತ ಚೆಸ್ ಫೆಡರೇಶನ್ (All India Chess Federation), ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಷನ್ (United Karnataka Chess Association) ಮತ್ತು ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ (Udupi District Chess Association) ಇವರ ಸಹಯೋಗದಲ್ಲಿ ಗೌತಮ್ ಶೆಟ್ಟಿ ಅವರ ಅಧ್ಯಕ್ಷತೆಯ ಟಾರ್ಪೆಡೊಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ನಡೆಯಲಿದೆ.
ನಗುಬಹುಮಾನಗಳ ಅಚ್ಚರಿ!
ಮುಕ್ತ ವಿಭಾಗದಲ್ಲಿ 1 ರಿಂದ 25 ಸ್ಥಾನದವರೆಗೂ ನಗದು ಬಹುಮಾನವಿರುತ್ತದೆ. ಮೊದಲ ಮೂರು ಸ್ಥಾನಗಳಿಗೆ ಅನುಕ್ರಮವಾಗಿ 30,000, 20,000 ಮತ್ತು 10,000 ರೂ ನಗದು ಬಹುಮಾನ ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು. ಉಳಿದ ಸ್ಥಾನಗಳಿಗೂ ನಗದು ಬಹುಮಾನವಿರುತ್ತದೆ.
ವಯೋಮಿತಿ ವಿಭಾಗದಲ್ಲಿಯೂ ಪ್ರತ್ಯೇಕ ಸ್ಪರ್ಧೆಗಳು ನಡೆಯಲಿದ್ದು, 7, 9, 11, 13 ಮತ್ತು 15 ವರ್ಷ ವಯೋಮಿತಿಯ ಆಟಗಾರರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಇಲ್ಲಿ ಟಾಪ್ 10 ವಿಜೇತರಿಗೆ ಬಹುಮಾನವಿರುತ್ತದೆ.
ಉಡುಪಿ ಜಿಲ್ಲೆಯ ಟಾಪ್ 10 ಆಟಗಾರರಲ್ಲಿ ಮೊದಲ ಮೂರು ಸ್ಥಾನ ಪಡೆದವರಿಗೆ ನಗದು ಬಹುಮಾನ ಮತ್ತು ಟ್ರೋಫಿ ಮತ್ತು 4 ರಿಂದ 10ನೇ ಸ್ಥಾನ ಗಳಿಸಿದವರಿಗೆ ಟ್ರೋಫಿ ಮಾತ್ರ ನೀಡಲಾಗುವುದು.
ರೇಟಿಂಗ್ ಆಧಾರದ ಮೇಲೆ ಆಡಿ ಟಾಪ್ ಐದು ಸ್ಥಾನ ಗಳಿಸುವ ಆಟಗಾರರಿಗೆ ನಗದು ಬಹುಮಾನದ ಜತೆಯಲ್ಲಿ ಟ್ರೋಫಿ ನೀಡಲಾಗುವುದು, 1000 ದಿಂದ 1199 ರೇಟಿಂಗ್ ನಲ್ಲಿ ಮೊದಲ ಸ್ಥಾನ ಗಳಿಸುವವರಿಗೆ 3,500 ರೂ. ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು. ಅದೇ ರೀತಿ 2ನೇ ಸ್ಥಾನಕ್ಕೆ 3,000 ರೂ ಮತ್ತು ಟ್ರೋಫಿ, 3ನೇ ಸ್ಥಾನ ಗಳಿಸಿದವರಿಗೆ 3ನೇ ಸ್ಥಾನಕ್ಕೆ 2,500 ಮತ್ತು ಟ್ರೋಫಿ, 4ನೇ ಸ್ಥಾನಕ್ಕೆ 2,000 ರೂ. ಮತ್ತು ಟ್ರೋಫಿ ಹಾಗೂ 5ನೇ ಸ್ಥಾನ ಗಳಿಸಿದವರಿಗೆ 1,500 ರೂ. ಮತ್ತು ಟ್ರೋಫಿ ನೀಡಲಾಗುವುದು. ಅದೇ ರೀತಿ 1200 ರಿಂದ 1399, 1400 ರಿಂದ 1599, 1600 ರಿಂದ 1799 ರೇಟಿಂಗ್ ನಲ್ಲಿ ಗೆಲ್ಲುವ ಟಾಪ್ 5 ಆಟಗಾರರಿಗೆ ಇದೇ ಪ್ರಮಾಣದಲ್ಲಿ ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಗುವುದು.
60 ವರ್ಷಕ್ಕೆ ಮೇಲ್ಪಟ್ಟ ಹಿರಿಯರ ವಿಭಾಗದಲ್ಲಿ ಜಯ ಗಳಿಸಿ ಮೊದಲ ಸ್ಥಾನ ಪಡೆದವರಿಗೆ 2500 ರೂ, ನಗದು ಮತ್ತು ಟ್ರೋಫಿ, ದ್ವಿತೀಯ ಸ್ಥಾನ ಗಳಿಸಿದವರಿಗೆ 2,000 ರೂ. ನಗದು ಮತ್ತು ಟ್ರೋಫಿ ಮೂರನೇ ಸ್ಥಾನ ಗಳಿಸಿದವರಿಗೆ 1,500 ಮತ್ತು ಟ್ರೋಫಿ ನೀಡಲಾಗುವುದು, ಕಿರಿಯರ ವಿಭಾಗದಲ್ಲಿ ಮೊದಲ ಹಾಗೂ ದ್ವಿತೀಯ ಸ್ಥಾನ ಗಳಿಸಿದವರಿಗೆ ಟ್ರೋಫಿ ನೀಡಲಾಗುವುದು.
ಅನ್ ರೇಟೆಡ್ ವಿಭಾಗದಲ್ಲಿ ಜಯ ಗಳಿಸುವ ಟಾಪ್ ಐದು ಆಟಗಾರರಿಗೆ ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಗುವುದು. ಅನುಕ್ರಮವಾಗಿ 3,500, 3,000, 2,500, 2,000 ಮತ್ತು 1500 ರೂ ಹಾಗೂ ಟ್ರೋಫಿ ನೀಡಲಾಗುವದು.
ಪ್ರವೇಶ ಶುಲ್ಕ: 1,000 ರೂ.
ಜಿಎಂ ಮತ್ತು ಐಎಂ ಆಟಗಾರರಿಗೆ ಪ್ರವೇಶ ಶುಲ್ಕ ಇರುವುದಿಲ್ಲ
ಪ್ರವೇಶ ಶುಲ್ಕ ಸಲ್ಲಿಸಬೇಕಾದ ಬ್ಯಾಂಕ್ ವಿವರ:
Account Name: MISS TORPEDOES SPORTS CLUB REGD.
Bank: UNION BANK
Account No: 520101037879819
IFSC CODE: UBIN0901776
MICR Code : 575026044
ಮೇಲಿನ ಖಾತೆಗೆ ಹಣ ಜಮಾವಣೆ ಮಾಡಿದ ನಂತರ www.udupichessassociation.com ಈ ವೆಬ್ ಸೈಟ್ ಕ್ಲಿಕ್ ಮಾಡಿ, ಅಲ್ಲಿ Event page ಕ್ಲಿಕ್ ಮಾಡಿ, ಅಲ್ಲಿರುವ ಆನ್ ಲೈನ್ ರಿಜಿಸ್ಟ್ರೇಶನ್ ಫಾರ್ಮ್ ಅನ್ನು ಭರ್ತಿ ಮಾಡಿ.
Last Date: 30th March, 2021
ಈ ಅಪೂರ್ವ ಚೆಸ್ ಟೂರ್ನಿಯ ಯಶಸ್ಸಿನಲ್ಲಿ ಕರ್ನಾಟಕದ ಚೆಸ್ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಟಾರ್ಪೆಡೊಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿ ಹಾಗೂ ಉಡುಪಿ ಚೆಸ್ ಸಂಸ್ಥೆಯ ಅಧ್ಯಕ್ಷ ಡಾ. ರಾಜಗೋಪಾಲ ಶೆಣೈ ಅವರು ವಿನಂತಿಸಿಕೊಂಡಿದ್ದಾರೆ.
ಹೆಚ್ಚಿನ ವಿವರಗಳಿಗೆ
ಗೌತಮ್ ಶೆಟ್ಟಿ: 9845121498
ಬಾಬು ಪೂಜಾರಿ: 9448547958 (ಕನ್ನಡ)
ಸೌಂದರ್ಯ ಯು.ಕೆ.: 9731230323 (English)