Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

KIUG2025: ಸಿದ್ಧಿ ಸಮುದಾಯಕ್ಕೆ ಕೀರ್ತಿ ತಂದ ಶಾಲಿನ ಸಯರ್‌ ಸಿದ್ಧಿ

Sportsmail, ಜೈಪುರ: ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಸಿದ್ಧಿ ಸಮುದಾಯ ಕುಸ್ತಿಪಟು ಶಾಲಿನ ಸಯರ್‌ ಸಿದ್ಧಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದು ಕರ್ನಾಟಕ ರಾಜ್ಯ, ಕರ್ನಾಟಕ ವಿಶ್ವನಿದ್ಯಾನಿಲಯ ಹಾಗೂ ಸಿದ್ಧಿ ಸಮುದಾಯಕ್ಕೂ ಕೀರ್ತಿ ತಂದಿದ್ದಾರೆ. Shalina, representing Karnatak University, won her first Khelo India University Games (KIUG) medal in Rajasthan’s Bharatpur.

ಕರ್ನಾಟಕ ವಿಶ್ವವಿದ್ಯಾನಿಯವನ್ನು ಪ್ರತಿನಿಧಿಸುತ್ತಿರುವ ಶಾಲಿನ, ಇತ್ತೀಚಿಗೆ ಪಂಜಾಬ್‌ನಲ್ಲಿ ನಡೆದ ಅಖಿಲ ಭಾರತ ವಿಶ್ವವಿದ್ಯಾನಿಲಯ ಚಾಂಪಿಯನ್‌ಷಿಪ್‌ನಲ್ಲೂ ಕಂಚಿನ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದರು.

ರಾಜಸ್ಥಾನದ ಭರತ್‌ಪುರದಲ್ಲಿ ನಡೆದ ಕುಸ್ತಿ ಸ್ಪರ್ಧೆಯಲ್ಲಿ ಶಾಲಿನ 57ಕೆಜಿ ಫ್ರೀಸ್ಟೈಲ್‌ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದರು. ಭಗತ್‌ ಫೂಲ್‌ ಸಿಂಗ್‌ ಮಹಿಳಾ ವಿಶ್ವವಿದ್ಯಾನಿಲಯದ ಭಾನು ವಿರುದ್ಧ ನಡೆದ ಸ್ಪರ್ಧೆಯಲ್ಲಿ ಶಾಲಿನ 2-1 ಅಂತರದಲ್ಲಿ ಜಯ ಗಳಿಸಿ ಕಂಚಿನ ಪದಕ ಗೆದ್ದರು.

ಕ್ರೀಡಾ ಸಾಧನೆಯ ಮೂಲಕ ಬದುಕು ಕಟ್ಟಿಕೊಳ್ಳುತ್ತಿರುವ ಸಿದ್ಧಿ ಸಮುದಾಯದಲ್ಲಿ ಈಗ ಅನೇಕ ಸಾಧಕರು ಸರಕಾರಿ ಉದ್ಯೋಗ ಪಡೆದಿರುತ್ತಾರೆ. ಖೇಲೋ ಇಂಡಿಯಾ ಮೂಲಕ ಯಶಸ್ಸಿನ ಹಾದಿ ಕಂಡಿರುವ ಶಾಲಿನ, “ಖೇಲೋ ಇಂಡಿಯಾ ಯೂಥ್‌ ಗೇಮ್ಸ್‌ನಲ್ಲಿ ಪಾಲ್ಗೊಂಡಿರುವೆ, ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಸ್ಪರ್ಧಿಸುತ್ತಿರುವುದು ಇದೇ ಮೊದಲು. ಸಾಕಷ್ಟು ಭರವಸೆಗಳನ್ನಿಟ್ಟುಕೊಂಡು ಇಲ್ಲಿಗೆ ಆಗಮಿಸಿರುವೆ, ಪದಕ ಗೆಲ್ಲುತ್ತೇನೆಂಬ ನಂಬಿಕೆ ಇದ್ದಿತ್ತು. ಆದರೆ ಯಾವ ಬಣ್ಣದ್ದು ಎಂಬುದು ಗೊತ್ತಿರಲಿಲ್ಲ. ಈಗ ಕಂಚಿನ ಪದಕ ಗೆದ್ದಿರುವುದಕ್ಕೆ ಖುಷಿ ಇದೆ,” ಎಂದು ಶಾಲಿನ ಹೇಳಿದರು,

ರೈಲಿನಲ್ಲಿ ಪ್ರಯಾಣ: “ನಾವು ಇಲ್ಲಿಗೆ ತಲುಪಲು ರೈಲಿನಲ್ಲಿ ಪ್ರಯಾಣಿಸಿದೆವು. 3 ದಿನಗಳ ಕಾಲ ರೈಲು ಪ್ರಯಾಣ, ಅಷ್ಟು ದೂರ ಪ್ರಯಾಣ ಮಾಡಿ ಮತ್ತೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಅಷ್ಟು ಸುಲಭವಲ್ಲ. ಪದಕ ಗೆದ್ದ ನಂತರ ಪ್ರಯಾಣದ ಕಷ್ಟ ನೆನಪಾಗಲಿಲ್ಲ. ಪ್ರಯಾಸ ಪಟ್ಟಿದ್ದಕ್ಕೆ ಫಲ ಸಿಕ್ಕಿದೆ,” ಎಂದರು.


administrator