ಮಾಗಡಿ ಕ್ರಿಕೆಟ್ ಅಕಾಡೆಮಿಯಿಂದ ರಾಜ್ಯ ತಂಡಕ್ಕೆ ಆಯ್ಕೆ
–
ಬೆಂಗಳೂರು: ಬೆಂಗಳೂರಿನ ಉತ್ತಮ ಕ್ರಿಕೆಟ್ ಅಕಾಡೆಮಿಗಳಲ್ಲಿ ಒಂದಾಗಿರುವ ಮಾಗಡಿ ಕ್ರಿಕೆಟ್ ಅಕಾಡೆಮಿ (Magadi Cricket Academy) ಯ ರತನ್ ಬಿ ಆರ್ ಹಾಗೂ ಕುಲದೀಪ್ ಸಿಂಗ್ ಪುರೋಹಿತ್ ಅವರು ಬಿಸಿಸಿಐ ಆಯೋಜಿಸುತ್ತಿರುವ ವಿನೂ ಮಂಕಡ್ ಟ್ರೋಫಿಯಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. Rathan B R and Kuldeep Singh Purohith of Magadi Cricket Academy selected to Karnataka state team for BCCI Vinoo Mankad Trophy
ಕಳೆದ 16 ವರ್ಷಗಳಿಂದ ಬೆಂಗಳೂರಿನ ಇಸ್ರೋ ಲೇಔಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಗಡಿ ಅಕಾಡೆಮಿಯಿಂದ 30ಕ್ಕೂ ಹೆಚ್ಚು ಆಟಗಾರರು ವಿವಿಧ ವಯೋಮಿತಿಯಲ್ಲಿ ರಾಜ್ಯದ ಪರ ಆಡಿರುತ್ತಾರೆ. ಅನುಭವಿ ಕೋಚ್ ಮಂಜುನಾಥ್ ತರಬೇತಿಯಲ್ಲಿ ಅಕಾಡೆಮಿ ಇಂದು ಜನಪ್ರಿಯತೆಯನ್ನು ಪಡೆದಿದೆ.

ರಾಜ್ಯ ತಂಡಕ್ಕೆ ಆಯ್ಕೆಯಾಗಿರುವ ಇಬ್ಬರು ಆಟಗಾರರಲ್ಲಿ ರತನ್ ಬಿ.ಆರ್. ಎಡಗೈ ಸ್ಪಿನ್ನರ್ ಹಾಗೂ ಕುಲದೀಪ್ ಸಿಂಗ್ ಲೆಗ್ ಸ್ಪಿನ್ನರ್. ಲೀಗ್ ಪಂದ್ಯಗಳಲ್ಲಿ ಈ ಇಬ್ಬರೂ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿರುವುದು ಮಾತ್ರವಲ್ಲ, ಅಕಾಡೆಮಿಯ ಪಂದ್ಯಗಳಲ್ಲೂ ಜಯದ ರೂವಾರಿಗಳೆನಿದ್ದರು.
ಮಾಗಡಿ ಕ್ರಿಕೆಟ್ ಅಕಾಡೆಮಿಯ ಯಶಸ್ಸಿನ ವ್ಯಾಪ್ತಿ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ, ದಾವಣಗೆರೆ, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಭದ್ರಾವತಿ, ಸಾಗರ ಹಾಗೂ ಚಿತ್ರದುರ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಟೂರ್ನಿಗಳಲ್ಲಿ ಪಾಲ್ಗೊಂಡು ಯಶಸ್ಸು ಕಂಡಿದೆ. ಹೊರ ರಾಜ್ಯಗಳಿಗೂ ಕ್ರಿಕೆಟ್ ಪ್ರವಾಸ ಕೈಗೊಂಡ ಅಕಾಡೆಮಿ ಹೈದರಾಬಾದ್, ಪುಣೆ ಹಾಗೂ ಚೆನ್ನೈಯಲ್ಲಿ ನಡೆದ ಟೂರ್ನಿಗಳಲ್ಲಿ ಯಶಸ್ಸು ಕಂಡಿದೆ. ಇತ್ತೀಚಿಗೆ ಮುಕ್ತಾಯಗೊಂಡ ದಸರಾ ಅನೆ ಅರ್ಜುನನ ಹೆಸರಿನಲ್ಲಿ ನಡೆದ ಟೂರ್ನಿಯಲ್ಲಿ ಮಾಗಡಿ ಕ್ರಿಕೆಟ್ ಅಕಾಡೆಮಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.

ಆರ್. ಅಶೋಕ್ ಅಭಿನಂದನೆ: ಮಾಗಡಿ ಕ್ರಿಕೆಟ್ ಅಕಾಡೆಮಿಯ ಯಶಸ್ಸಿನಲ್ಲಿ ಮಾಜಿ ಸಚಿವ, ಪ್ರಸಕ್ತ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಪಾತ್ರ ಪ್ರಮುಖವಾಗಿದೆ ಎನ್ನುತ್ತಾರೆ ಅಕಾಡೆಮಿ ನಿರ್ದೇಶಕ ಹಾಗೂ ಪ್ರಧಾನ ಕೋಚ್ ಮಂಜುನಾಥ್.
“ನಮ್ಮ ಅಕಾಡೆಮಿ ಯಶಸ್ಸಿಗೆ ಮಾಜಿ ಸಚಿವರು ಹಾಗೂ ವಿರೋಧ ಪಕ್ಷದ ನಾಯಕರೂ ಆಗಿರು ಆರ್. ಅಶೋಕ್ ಅವರು ಉತ್ತಮ ರೀತಿಯಲ್ಲಿ ಪ್ರೋತ್ಸಾಹ ನೀಡಿರುತ್ತಾರೆ. ಅಕಾಡೆಮಿಯ ಪ್ರತಿಯೊಂದು ಚಟುವಟಿಕೆಯಲ್ಲೂ ಅವರು ಪಾಲ್ಗೊಂಡು ಶುಭ ಹಾರೈಸಿದ್ದಾರೆ. ಅವರು ಎಲ್ಲ ರೀತಿಯಲ್ಲಿ ನೆರವು ನೀಡಿದ ಹಿನ್ನೆಲೆಯಲ್ಲಿ ನಮ್ಮ ಅಕಾಡೆಮಿಯ ಆಟಗಾರರು ಉತ್ತಮ ರೀತಿಯಲ್ಲಿ ಫಲಿತಾಂಶ ನೀಡಲು ಸಾಧ್ಯವಾಯಿತು,” ಎನ್ನುತ್ತಾರೆ ಮಂಜುನಾಥ್.

ಅಕಾಡೆಮಿಯ ಬಗ್ಗೆ ಹೆಚ್ಚಿನ ವಿವರಗಳಿಗೆ: https://magadicricketacademy.com/

