ರಾಮಯ್ಯ ರಾಜನ್ ಸ್ಮಾರಕ ಬ್ಯಾಡ್ಮಿಂಟನ್ : ತನ್ಯಾ ಚಾಂಪಿಯನ್

0
263
ಸ್ಪೋರ್ಟ್ಸ್ ಮೇಲ್ ವರದಿ 

ರಾಮಯ್ಯ ರಾಜನ್ ಸ್ಮಾರಕ ೧೩, ೧೪, ೧೭ ಮತ್ತು ೧೯ ವರ್ಷ ವಯೋಮಿತಿಯ ರಾಜ್ಯ ರಾಂಕಿಂಗ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಭಾನುವಾರ ಮುಕ್ತಾಯಗೊಂಡಿತು. ೧೯ ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ತನ್ಯಾ ಹೇಮಂತ್ ಚಾಂಪಿಯನ್ ಪಟ್ಟ ಗೆದ್ದುಕೊಂಡರು.

ನಾಲ್ಕನೇ ಶ್ರೇಯಾಂಕಿತೆ ತನ್ಯಾ ಡಿವೈಇಎಸ್‌ನ ಶಿವಾನಿ ಅಂಜೆಲಿನಾ ಪಾಠಿ ವಿರುದ್ಧ ೨೧-೧೧, ೧೪-೭ ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.
೧೩ ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ೨ನೇ ಶ್ರೇಯಾಂಕಿತ ತುಷಾರ್ ಸುವೇರ್ ೧ನೇ ಶ್ರೇಯಾಂಕಿತ ಸಾತ್ವಿಕ ಶಂಕರ್ ವಿರುದ್ಧ ೨೧-೧೨, ೨೧-೧೫ ಅಂತರದಲ್ಲಿ ಗೆದ್ದು ಚಾಂಪಿಯನ್ನರಾದರು. ಬಾಲಕಿಯರ ವಿಭಾಗದಲ್ಲಿ ಕಾರ್ಣಿಕಾ ಶ್ರೀ ೨೧-೧೬, ೧೭-೨೧, ೨೧-೧೯ ಅಂತರದಲ್ಲಿ  ಪ್ರೇರಣಾ ಶೇಟ್ ವಿರುದ್ಧ ಗೆದ್ದು ಅಗ್ರ ಸ್ಥಾನಿಯಾದರು. ಬಾಲಕಿಯರ ವಿಭಾಗದ ಡಬಲ್ಸ್‌ನಲ್ಲಿ ಬ್ಲೂ ಸ್ಟಾರ್ ಆಕಾಡೆಮಿಯ ಆರಧನಾ ಬಾಲಚಂದ್ರ ಹಾಗೂ ಪ್ರೇರಣಾ ಜೋಡಿ ಶ್ರೀಯಾ ಹಾಗೂ ಮೇಘಶ್ರೀ ಜಿಎಸ್ ಜೋಡಿಯನ್ನು ೨೧-೧೫, ೨೧-೧೮ ಅಂತರದಲ್ಲಿ ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು.
೧೫ ವರ್ಷ ವಯೋಮಿತಿಯ ಬಾಲಕರ ಸಿಂಗಲ್ಸ್‌ನಲ್ಲಿ  ಸುಜನ್ಯಾ ಉಲ್ಲಾಸ್ ಕಿಣಿ  ೨೬-೨೪, ೨೧-೧೬ ಅಂತರದಲ್ಲಿ ಆಯುಷ್ ಶೆಟ್ಟಿ ವಿರುದ್ಧ ಗೆದ್ದು ಅಗ್ರ ಸ್ಥಾನ ತಮ್ಮದಾಗಿಸಿಕೊಂಡರು. ಬಾಲಕಿಯರ ವಿಭಾಗದಲ್ಲಿ ೧ನೇ ಶ್ರೇಯಾಂಕಿತ ವಿಜೇತಾ ಹರೀಶ್  ಡಿವೈಇಎಸ್‌ನ ನೇಯ್ಸಾ ಕಾರಿಯಪ್ಪ  ಅವರನ್ನು ೧೯-೨೧, ೨೧-೧೪, ೨೧-೭ ಅಂತರದಲ್ಲಿ ಜಯ ಗಳಿಸಿದರು. ಬಾಲಕರ ಡಬಲ್ಸ್‌ನಲ್ಲಿ  ಆದಿತ್ಯ ದಿವಾಕರ್ ಹಾಗೂ ಗೌತಮ್ ಎಂ. ಜೋಡಿ ಸುಜ್ಞಾನ್ ಉಲ್ಲಾಸ್ ಕಿಣಿ ಹಾಗೂ ತರುಣ್ ಮೊರಾಬ್ ಜೋಡಿಯನ್ನು ೨೧ಋ೧೮, ೧೫-೨೧, ೨೧-೧೮ ಅಂತರದಲ್ಲಿ ಮಣಿಸಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು.
೧೭ ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಶಿವಮೊಗ್ಗದ ಪ್ರಥ್ವಿ ೨೧-೧೭, ೧೭-೨೧, ೨೧-೧೮ ಅಂತರದಲ್ಲಿ ಸನೀತ್ ದಯಾನಂದ್ ವಿರುದ್ಧ ಜಯ ಗಳಿಸಿ ಅಗ್ರ ಸ್ಥಾನ  ಪಡೆದರು. ಬಾಲಕಿಯರ ವಿಭಾಗದಲ್ಲಿ  ತನ್ಯಾ ಹೆಮಂತ್  ೨೧-೧೮, ೧೯-೨೧, ೨೧-೧೬ ಅಂತರದಲ್ಲಿ  ಜನನಿ ವಿರುದ್ಧ ಜಯ ಗಳಿಸಿದರು.
ಬಾಲಕರ ಡಬಲ್ಸ್‌ನಲ್ಲಿ  ಸನೀತ್ ದಯಾನಂದ್ ಹಾಗೂ ಪ್ರಥ್ವಿ ರಾಯ್ ಜೋಡಿ ೧೧-೨೧, ೨೧-೧೬, ೨೧-೧೬  ಅಂತರದಲ್ಲಿ  ಸಾಕೇತ್ ಹಾಗೂ ಅಜಿಂಕ್ಯಾ ಜೋಶಿ  ಜೋಡಿಯನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು.
೧೯ ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಪ್ರಥ್ವಿ ರಾಯ್ ವಿರುದ ೨೧-೧೨, ೨೩-೨೧ ಅಂತರದಲ್ಲಿ ಗೆದ್ದ ಭಾರ್ಗವ್ ಪ್ರಶಸ್ತಿ ಗೆದ್ದುಕೊಂಡರು.