ಪಿವಿಎಲ್ 2025: ಬೆಂಗಳೂರು ಟಾರ್ಪಿಡೋಸ್ ಚಾಂಪಿಯನ್
ಹೈದರಾಬಾದ್: ಇಲ್ಲಿನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿಭಾನುವಾರ ನಡೆದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಮುಂಬೈ ಮೆಟಿಯೋರ್ಸ್ ತಂಡವನ್ನು 15-13, 16-4, 15-13 ಸೆಟ್‌ಗಳಿಂದ ಸೋಲಿಸಿದ ನಂತರ ಬೆಂಗಳೂರು ಟಾರ್ಪಿಡೋಸ್ ತಂಡವು ಸ್ಕಾಪಿಯಾ ನಡೆಸುವ ಆರ್. ಆರ್. ಕಬೆಲ್ ಪ್ರೈಮ್ ವಾಲಿಬಾಲ್ ಲೀಗ್‌ನ ನಾಲ್ಕನೇ ಆವೃತ್ತಿಯಲ್ಲಿಚಾಂಪಿಯನ್ ಪಟ್ಟ ಅಲಂಕರಿಸಿದೆ. PVL 2025: Bengaluru Torpedoes become Champions of Season 4 with dominant win over Mumbai Meteors in Final
ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿದ ಎರಡೂ ತಂಡಗಳು ಎಚ್ಚರಿಕೆಯಿಂದ ಆಟವನ್ನು ಪ್ರಾರಂಭಿಸಿದವು. ಪೀಟರ್ ಆಲ್ಸ್ಟಾಡ್ ಅವರು ಓಸ್ಟ್ವಿಕ್ ಜೋಯಲ್ ಬೆಂಜಮಿನ್ ಅವರನ್ನು ತಡೆದರೆ, ಶುಭಂ ಚೌಧರಿ ಮೇಲೆ ಜಿಷ್ಣು ಅವರ ಬ್ಲಾಕ್‌ನೊಂದಿಗೆ ಬೆಂಗಳೂರು ಮತ್ತೆ ಘರ್ಜಿಸಿತು. ಸೇತುವಿನ ಆಕರ್ಷಕ ಸರ್ವಿಸ್‌ನಿಂದ ಬೆಂಗಳೂರು ಮುನ್ನಡೆ ಸಾಧಿಸಿತು, ಮೆಟಿಯರ್ಸ್ ಸೂಪರ್ ಪಾಯಿಂಟ್‌ಗೆ ಕರೆ ನೀಡಿತು. ಈ ಮಧ್ಯೆ, ಮೆಟಿಯೋರ್ಸ್ ದಿಟ್ಟ ಪ್ರತಿರೋದ ನೀಡಿದರೂ ಬೆಂಗಳೂರು ತಂಡದ ನಾಯಕ ಮತ್ತು ಸೆಟ್ಟರ್ ಮ್ಯಾಟ್ ವೆಸ್ಟ್ ಅವರ ಪರಿಣಾಮಕಾರಿತ್ವವು ಟಾರ್ಪಿಡೋಸ್‌ಗೆ ಮೊದಲ ಸೆಟ್ ಗೆಲ್ಲಲು ಸಹಾಯ ಮಾಡಿತು.
ಸೇತು ಎರಡನೇ ಸೆಟ್‌ಅನ್ನು ಪಂದ್ಯದ ಮೊದಲ ಸೂಪರ್ ಸರ್ವ್‌ನೊಂದಿಗೆ ಪ್ರಾರಂಭಿಸಿದರು. ಮುಂಬೈನ ಸರಣಿ ಬಲವಂತದ ದೋಷಗಳು ಬೆಂಗಳೂರು ತಂಡಕ್ಕೆ ಸತತವಾಗಿ ನೆರವಾಯಿತು. ಓಂ ಲಾಡ್ ವಸಂತ್ ತಮ್ಮ ಆಕ್ರಮಣಕಾರರ ಪರ ಅದ್ಭುತ ಆಟ ಆಡಿದರೂ ಶುಭಮ್ ಮತ್ತು ನಾಯಕ ಅಮಿತ್ ಗುಲಿಯಾ ತಮ್ಮ ಹೊಡೆತಗಳನ್ನು ಓವರ್ ಹಿಟ್ ಮಾಡಿದರು. ಜೋಯಲ್ ಅವರ ಸ್ಥಿರ ದಾಳಿಗಳು ಮೆಟಿಯೋರ್ಸ್‌ಗೆ ಎದುರಾಳಿಯನ್ನು ನಿಯಂತ್ರಿಸಲು ಕಷ್ಟಕರವಾಯಿತು. ಈ ನಡುವೆ ಟಾರ್ಪಿಡೋಸ್ ತಂಡವು ಜೋಯಲ್ ಅವರ ಸೂಪರ್ ಸರ್ವ್‌ನೊಂದಿಗೆ ಎರಡು ಸೆಟ್‌ಗಳ ಮುನ್ನಡೆ ಸಾಧಿಸಿತು.
ಮೂರನೇ ಸೆಟ್‌ನಲ್ಲಿಜಲೆನ್ ಪೆನ್ರೋಸ್ ದಾಳಿಗೆ ಸೇರಿಕೊಂಡರು, ಟಾರ್ಪಿಡೋಸ್ ತಂಡವು ತಮ್ಮ ಆವೇಗವನ್ನು ಉಳಿಸಿಕೊಂಡಿದ್ದರಿಂದ ಮಿಂಚಿನ ಆಟ ಕಂಡು ಬಂದಿತು. ಶುಭಮ್ ಪ್ರತಿದಾಳಿಯನ್ನು ಮುನ್ನಡೆಸುವುದರೊಂದಿಗೆ ಮುಂಬೈ ಒತ್ತಡವನ್ನು ಮುಂದುವರಿಸಿತು.
ತರಬೇತುದಾರ ಡೇವಿಡ್ ಲೀ ಅವರ ಅಪಾಯಕಾರಿ ಸೂಪರ್ ಪಾಯಿಂಟ್ ಕರೆ ಟಾರ್ಪಿಡೋಸ್ ತಂಡಕ್ಕೆ ಲಾಭಾಂಶವನ್ನು ತಂದುಕೊಟ್ಟಿತು. ಪೆನ್ರೋಸ್ ಚೆಂಡನ್ನು ಗುರಿಯ ಮೇಲೆ ಹೊಡೆದರು. ಮುಂಬೈ ತಮ್ಮದೇ ಆದ ಸೂಪರ್ ಪಾಯಿಂಟ್ ಗೆದ್ದಿತು. ಆದರೆ ಬೆಂಗಳೂರು ಟಾರ್ಪಿಡೋಸ್ ತಂಡ ತಮ್ಮ ಸಂಯಮವನ್ನು ಕಾಯ್ದುಕೊಂಡಿತು. ಈ ನಡುವೆ ನಿಖಿಲ್ ಅವರ ಸವೀರ್‍ಸ್ ದೋಷದಿಂದ ಬೆಂಗಳೂರು ತಂಡವು ಪ್ರಶಸ್ತಿಗೆ ತನ್ನ ಮೊಹರು ಹೊತ್ತಿತು.

