Saturday, July 27, 2024

ಗುಜರಾತ್ ವಿರುದ್ಧ ಪುಣೇರಿ ಪಲ್ಟಿ

ಸ್ಪೋರ್ಟ್ಸ್ ಮೇಲ್ ವರದಿ

ಬದಲಿ ಆಟಗಾರ ಅಜಯ್ ಕುಮಾರ್ 35ನೇ ನಿಮಿಷದಲ್ಲಿ ಗಳಿಸಿದ ಗಳಿಸಿದ ಸೂಪರ್ ರೈಡ್ ಅಂಕಗಳ ಮೂಲಕ ಪ್ರಭುತ್ವ ಸಾಧಿಸಿದ ಗುಜರಾತ್ ಾರ್ಚೂನ್ ಜಯಂಟ್ಸ್ ತಂಡ ಪುಣೇರಿ ಪಲ್ಟನ್ ವಿರುದ್ಧದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಜಯ ದಾಖಲಿಸಿದೆ.

ದ್ವಿತಿಯಾರ್ಧದಲ್ಲಿ ಮಿಂಚಿದ ಗುಜರಾತ್ ತಂಡ ದಿಟ್ಟ ಹೋರಾಟ ನೀಡಿ 34-28 ಅಂಕಗಳ ಅಂತರದಲ್ಲಿ ಬಲಿಷ್ಠ ಪುಣೇರಿ ಪಲ್ಟನ್‌ಗೆ ಸೋಲುಣಿಸಿತು. ಅಜಯ್ ಕುಮಾರ್ ಆಲ್ರೌಂಡ್ ಪ್ರದರ್ಶನ ತೋರಿ 6 ಅಮೂಲ್ಯ ಅಂಕಗಳನ್ನು ಗಳಿಸುವ ಮೂಲಕ ಪಂದ್ಯದ ಹೀರೋ ಎನಿಸಿದರು. ಸಚಿನ್ 12 ಅಂಕಗಳನ್ನು ಗಳಿಸಿ ಗುಜರಾತ್‌ನ ಜಯದ ರೂವಾರಿ ಎನಿಸಿದರು.
ಪುಣೆ ತಂಡದ ಸ್ಟಾರ್ ರೈಡರ್ ನಿತಿನ್ ತೋಮಾರ್ 13 ಅಂಕಗಳನ್ನು ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ. ದಿಟ್ಟ ಆರಂಭ  ಕಂಡ ಗುಜರಾತ್ ಮೊದಲ ಎರಡು ನಿಮಿಷಗಳ ಆಟದಲ್ಲಿ 4-0 ಮುನ್ನಡೆ ಕಂಡಿತು. ನಂತರ ನಿತಿನ್ ತೋಮಾರ್ ಮೂರು ಅಂಕಗಳನ್ನು ಗಳಿಸುವುದರೊಂದಿಗೆ ಪಂದ್ಯ 7-5 ರಲ್ಲಿ ಸಾಗಿತು. ಸೂಪರ್ ಟ್ಯಾಕಲ್ ಮೂಲಕ ಪ್ರಭುತ್ವ ಸಾಧಿಸಿದ ಗುಜರಾತ್ 12-11ರಲ್ಲಿ ಮೇಲುಗೈ ಕಾಯ್ದುಕೊಂಡಿತು. ಇತ್ತಂಡಗಳು ಸಮಬಲದ ಹೋರಾಟ ನೀಡುವುದುರೊಂದಿಗೆ ಪ್ರಥಮಾರ್ಧ  15-15ರಲ್ಲಿ ಸಮಬಲಗೊಂಡಿತು. ದೀಪಕ್ ಕುಮಾರ್ ದಹಿಯಾ 22 ನೇ ನಿಮಿಷದಲ್ಲಿ ಎರಡು ರೈಡಿಂಗ್ ಅಂಕ ಗಳಿಸುವ ಮೂಲಕ ಪುಣೆ 17-15ರಲ್ಲಿ ಮೇಲುಗೈ ಸಾಧಿಸಿತು. ದ್ವಿತಿಯಾರ್ಧದಲ್ಲಿ ಗುಜರಾತ್ ತಂಡ ಪುಣೆಯ ರೈಡರ್ ನಿತಿನ್ ತೋಮಾರ್ ಅವರನ್ನು ಹೊರಗಿಡುವಲ್ಲಿ ಸಲವಾದ ಕಾರಣ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಅಜಯ್ ಕುಮಾರ್  30ನೇ ನಿಮಿಷದಲ್ಲಿ ಮಾಡಿದ ರೈಡ್‌ನಿಂದ ಪಂದ್ಯ 20-20ರಲ್ಲಿ ಸಮಬಲಗೊಂಡಿತು. ಗುಜರಾತ್ ಯಶಸ್ಸಿನ ಹಾದಿ ಹಿಡಿಯಿತು. 33ನೇ ನಿಮಿಷದಲ್ಲಿ ಪುಣೇರಿ ತಂಡ ಆಲೌಟ್ ಆಗುವ ಮೂಲಕ ಗುಜರಾತ್ 25-20ರಲ್ಲಿ ಪ್ರಭುತ್ವ ಸಾಧಿಸಿತು. ೩೫ನೇ ನಿಮಿಷದಲ್ಲಿ ಅಜಯ್ ಕುಮಾರ್ ಅವರ ಸೂಪರ್ ರೈಡ್ ಮೂಲಕ ಗುಜರಾತ್ 30-22ರಲ್ಲಿ ಮುನ್ನಡೆ ಕಂಡಿತು. ಅಂತಿಮ ಕೆಲವು ರೈಡ್ ಹಾಗೂ ಟ್ಯಾಕಲ್‌ನಲ್ಲಿ ಯಶಸ್ಸು ಕಂಡ ಗುಜರಾತ್ ಪಂದ್ಯ ಗೆದ್ದುಕೊಂಡಿತು.

Related Articles