Saturday, July 27, 2024

ಮೊದಲ ಪಂದ್ಯದಲ್ಲೇ ಸೋತ ಬೆಂಗಳೂರು ಬುಲ್ಸ್‌

ಅಹಮದಾಬಾದ್‌: ಯುವ ರೈಡರ್‌ ಸೋನು ಸತತ ಎರಡನೇ ಪಂದ್ಯದಲ್ಲಿ ಉತ್ತಮ ಆಟಗಾರನೆಂಬ ಗೌರವಕ್ಕೆ ಪಾತ್ರರಾಗುವುದರೊಂದಿಗೆ ಗುಜರಾತ್‌ ಜಯಂಟ್ಸ್‌ (Gujarat Giants) ತಂಡ ಬೆಂಗಳೂರು ಬುಲ್ಸ್‌ (Bengaluru Bulls) ವಿರುದ್ಧದ ಪ್ರೊ ಕಬಡ್ಡಿ ಲೀಗ್‌‌ (Pro Kabaddi League 10) ಪಂದ್ಯದಲ್ಲಿ 34-31 ಅಂತರದಲ್ಲಿ ಯಶಸ್ಸು ಸಾಧಿಸಿ ಸತತ ಎರಡನೇ ಜಯ ದಾಖಲಿಸಿತು. Pro Kabaddi 10 Sonu shines as Gujarat Giants defeat Bengaluru Bulls.

ನೀರನ್‌ ನರ್ವಾಲ್‌ ಪಂದ್ಯದ ಆರಂಭದಲ್ಲೇ ಅದ್ಭುತ ರೈಡ್‌ ಮೂಲಕ ಬುಲ್ಸ್‌ಗೆ 3-0 ಮುನ್ನಡೆ ತಂದುಕೊಟ್ಟರು.ನಂತರ ಭರತ್‌ ಉತ್ತಮ ರೈಡಿಂಗ್‌ ಮಾಡುವ ಮೂಲಕ ಜಯಂಟ್ಸ್‌ ಪಾಳಯದಲ್ಲಿ ಉಳಿದದ್ದು ಇಬ್ಬರು ಮಾತ್ರ. ಆದರೆ ಮೊಹಮ್ಮದ್‌ ನಬೀಬ್‌ಬಕ್ಸ್‌ ಸೂಪರ್‌ ಟ್ಯಾಕಲ್‌ ಮೂಲಕ ಜಯಂಟ್ಸ್‌ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ನಂತರ ಸೋನು ಎರಡು ರೈಡಿಂಗ್‌ ಪಾಯಿಂಟ್‌ ಗಳಿಸುವ ಮೂಲಕ ಗುಜರಾತ್‌ 5-5ರಲ್ಲಿ ಸಮಬಲ ಸಾಧಿಸಿತು.

ನಂತರ ಜಯಂಟ್ಸ್‌ ಹಾಗೂ ಬುಲ್‌ ನಡುವೆ ಕತ್ತುಕತ್ತಿನ ಹೋರಾಟ ನಡೆಯಿತು. ಪರಿಣಾಮ ಪಂದ್ಯ 9-9ರ ಸಮಬದಲ್ಲಿ ಸಾಗಿತು. ನಂತರ ಆದರೆ ವಿಕಾಶ್‌ ಕಂಡೋಲಾ ಉತ್ತಮ ರೈಡ್‌ ಮೂಲಕ ಅಂಕ ಗಳಿಸುವುದರೊಂದಿಗೆ ಬುಲ್ಸ್‌ ಪಾಳಯದಲ್ಲಿ ಉಳಿದದ್ದು ಇಬ್ಬರು ಮಾತ್ರ. ನಂತರ ಉತ್ತಮ ಪೈಪೋಟಿ ನೀಡಿದ ಬುಲ್ಸ್‌ ಪ್ರಥಮಾರ್ಧದಲ್ಲಿ 20-14ರಲ್ಲಿ ಮೇಲುಗೈ ಸಾಧಿಸಿತು.

ದ್ವಿತಿಯಾರ್ಧದ ಪ್ರಥಮ ನಿಮಿಷದಲ್ಲೇ ಸೋನು ಸೂಪರ್‌ ರೈಡ್‌ ಸಾಧನೆ ಮಾಡಿದರು. 27ನೇ ನಿಮಿಷದಲ್ಲಿ ಬುಲ್ಸ್‌ ಆಲೌಟ್‌ ಆಗುವ ಮೂಲಕ ಜಯಂಟ್ಸ್‌ 24-23ರಲ್ಲಿ ಮೇಲುಗೈ ಸಾಧಿಸಿತು. 31ನೇ ನಿಮಿಷದಲ್ಲಿ ಕಂಡೋಲ ಉತ್ತಮ ರೈಡ್‌ ಮಾಡಿದರೂ ಜಯಂಟ್ಸ್‌ 26-24ರಲ್ಲಿ ಮುನ್ನಡೆ ಕಾಯ್ದುಕೊಂಡಿತು. ಭರತ್‌ ಉತ್ತಮ ರೈಡ್‌ ಹಾಗೂ ಟ್ಯಾಕಲ್‌ ಪಾಯಿಂಟ್‌ ಮೂಲಕ ಬುಲ್ಸ್‌ 28-27ರಲ್ಲಿ ಮುನ್ನಡೆ ಕಂಡು ಪಂದ್ಯ ಕುತೂಹಲದ ಘಟ್ಟ ತಲುಪಿತು. ರಾಕೇಶ್‌ ಅವರ ಉತ್ತಮ ರೈಡ್‌ ಹಾಗೂ ಟ್ಯಾಕಲ್‌ ಮೂಲಕ ಜಯಂಟ್ಸ್‌ 32-30ರಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು.  ಅಂತಿಮ ಕ್ಷಣದಲ್ಲಿ 2 ಅಂಕ ಗಳಿಸಿದ ಗುಜರಾತ್‌ ಜಯಂಟ್ಸ್‌ 34-31 ಅಂತರದಲ್ಲಿ ಪಂದ್ಯ ತನ್ನದಾಗಿಸಿಕೊಂಡಿತು.

Pro Kabaddi 10 Sonu shines as Gujarat Giants defeat Bengaluru Bulls.

Related Articles